dheerendra teertha rayara mutt yati 1785 stutih
ಕೀರ್ತಿಶೇಷ ಪೂಜ್ಯ ಶ್ರೀ ರಾಜಗೋಪಾಲಾಚಾರ್ಯರು.,
ಮಂತ್ರಾಲಯ - ಮೈಸೂರು
ರಾಗ : ಮೋಹನ ತಾಳ : ಆದಿ
ನೀರೇ ನೀ ನೋಡಿದ್ಯಾ ।
ನೀರಜ ಗಂಧೆ ನೀರೇ -
ನೀ ಕೇಳಿದ್ಯಾ ।। ಪಲ್ಲವಿ ।।
ಧಾರುಣಿಯೊಳ್ವರದಾ ।
ತೀರ ರಿತ್ತಿಯೊಳಿರ್ದಾ ।
ಧೀರೇಂದ್ರರ ಚರುತ್ಕ್ರುತಿ ।
ಚಾರು ಚಮತ್ಕೃತಿ ।। ಅ ಪ ।।
ಅಸ್ಮದಂತೀ ದೇಹವು -
ಶಾಶ್ವತವಲ್ಲ ।
ನಶ್ವರವಾಗಿಹುದೂ -
ಪ್ರಾಂತಕೆ ಕ್ರಿಮಿ । ವಿ ।
ಡ್ಮಸ್ಮಿ ಸಂಜ್ಞಿತ-
ವಾಗೋದೂ ಅರದರೇನು ।।
ಸುಸ್ಮಿತನನು ಸಸ್ವಲ್ಪ -
ಕಶ್ಮಲಾಗದ । ರವಿ ।
ರಶ್ಮಿ ಯಂತೋಳೇ ಯುವ ।
ವಿಸ್ಮಯ ಮಾತುಗಳು ।। ಚರಣ ।।
ಇನ್ನು ದಾರಿಂದಲೀ -
ಸಾಧ್ಯವಾಗದ ।
ಮನ್ಯು ಸೂಕ್ತ -
ಮುಂತಾದಾ ನಾರಾಯಣ ।
ಪನ್ನ ರುಕ್ವ್ಯಾಖ್ಯಾನವಾ -
ಮಾಡೀ ಮುದದಿ ।।
ಮನ್ಯು ರಹಿತರಾಗಿ -
ಸಂನ್ಯಾಸಾ ಧರಿಶೀದಾ ।
ಧನ್ಯರು ಧರೆಯೊಳು -
ಮಾನ್ಯ ಮಹಿಮೆಗಳು ।। ಚರಣ ।।
ಪಾಲಕ ರಾಜಗೋಪಾಲನ -
ದಯದಿಂದಾ ।
ಏಳು ವರುಷ ಭೂಮಿಯಲೀ -
ವಾಸವ ಮಾಡಿ ।
ಬಾಳಿದಾನಂದದಲಿ -
ಮೇಲಕೆ ತೆಗೆಯೇ ।।
ಫಾಲಲಾಕ್ಷತಾ ಗಂಧಾ -
ಮೇಯಿಕಟ್ಟಿನ ಶಾಠಿ ।
ಮೂಲಗುಂದದಿ ತುಳಸೀ -
ಮಾಲೆ ಹ್ಯಾಗಿಹುದೆಂದು ।। ಚರಣ ।।
****
No comments:
Post a Comment