Saturday 1 May 2021

ಹಿಂದಿನ ಸುಕರ್ಮವೇಸು ಬಂದೊದಗಿದವೊ ankita pranesha vittala varadendra teertha stutih

varadendra teertha rayara mutt yati 1785 stutih

ರಾಗ : ಆನಂದಭೈರವಿ  ತಾಳ : ರೂಪಕ 


ಹಿಂದಿನ ಸುಕರ್ಮವೇಸು ।

ಬಂದೊದಗಿದವೊ । ವರ ।

ದೇಂದ್ರರಾಯ ಬಂದ ನಮ್ಮ ।

ಮಂದಿರಕಿಂದು ।। ಪಲ್ಲವಿ ।।


ಮುತ್ತಿನ ಅಂದಣದೊಳು ।

ಸತ್ತಿಗಿ ನೆರಳಲಿ । ಪ್ರ ।

ಶಸ್ತವಾಗಿ ವೇದಶಾಸ್ತ್ರ ।

ವೊತ್ತಿವೊಂದುವ ।।

ಉತ್ತಮ ಬುಧರ ಕೂಡ । 

ಭೃತ್ಯರ ಸಂಗಡ ಬಹು ।

ಹತ್ತೆಂಟು ಬಿರುದಾವಳಿ -

ಯುಕ್ತ ಬಂದರು ।। ಚರಣ ।।


ತಂಡತಂಡಕ್ಕೆ ಜನರು ।

ಹಿಂಡುಗೂಡಿ ಫಲಗಳ ।

ಕೊಂಡು ಬಂದು ಮಾಡುವರು ।

ದಂಡ ಪ್ರಣಾಮ ।।

ಪಂಡಿತಾಗ್ರಗಣ್ಯರು । ಭೂ ।

ಮಂಡಲದೊಳಾಗ ಶ್ರೀಯಾ ।

ಖಂಡಲನಂತೆ ತೋರ್ವ । ಕ ।

ಮಂಡಲಧರ ।। ಚರಣ ।।


ಶ್ರೀಕರ ಪ್ರಾಣೇಶವಿಠಲ-

ನೇಕಾಂತದಿ ಬಲಿಸುವಲ್ಲಿ ।

ಈ ಕುಂಭಿಣಿಯೊಳಗೀತ -

ಗೆ ಕಾಣೆನೀಡ ।।

ನೀ ಕಾಯಬೇಕೆಂದವರ ।

ಶೋಕವ ಪರಿಹರಿಸಿ ।

ಜೋಕೆ ಮಾಡುವ ನಿತ್ಯ । ದೇ ।

ಶಿಕ ಕುಲಪತಿ ।। ಚರಣ ।।

****



No comments:

Post a Comment