ಐಜಿ ಆಚಾರ್ಯರ ಕಥಾಮೃತವನು । ಜ ।
ಲಜನಾಭನ ದಯದಿ ಪೇಳುವೆನು ।
ಸುಜನರೆಲ್ಲರು ಕೇಳಿ ಸಾವಧಾನದಿ ।। ಪಲ್ಲವಿ ।।
ಪ್ರಥಮದಿ ನೀ ವ್ಯಾಸಮುನಿ ಶಿಷ್ಯ ಗೋವಿಂದಒಡೆಯ ।
ದ್ವಿತೀಯದಿ ನೀ ಕೃಷ್ಣದ್ವೈಪಾಯನ ನೆನಿಸಿ ।
ತೃತೀಯದಿ ನೀ ವ್ಯಾಸತತ್ತ್ವಜ್ಞನಾಗಿ ಮೆರೆದು ।
ತತ್ತ್ವಮತ ಜ್ಞಾನವ ಕೊಟ್ಟು ಉದ್ಧರಿಸೋ ಗುರುವೇ ।। ಚರಣ ।।
ವೇದಪ್ರತಿಪಾದ್ಯನ ಕಥೆಗೆ ।
ಮಂದನಂದಿನಿಯ ರಚಿಸಿ ।
ವೇದೋದ್ಭವೆಯ ಪತಿಯಿಂದ ।
ವೇದ ಮತ ತತ್ತ್ವವನು ತಿಳಿದ ಗುರುವೇ ।। ಚರಣ ।।
ವೇದೋದ್ಭವೆ ಅನುಜನೇ ಸಲಹೋ ।
ವೇದ ಪೂಜಿತ ರಾಮನ ಮುಟ್ಟಿದ ಧೀರಾ ।
ವೇದವ್ಯಾಸ ಶಿಷ್ಯನ ಪೀಠದಿ ರಾಜಿಸಿ ।
ವೇದವತೀ ಪತಿಯನು ಮುದದಿಂದರ್ಚಿಸಿದ ।। ಚರಣ ।।
****
ವಿವರಣೆ :
ತತ್ತ್ವಮತ = ವೈಷ್ಣವ ಮತ
ವೇದೋದ್ಭವೆ = ಯಜ್ಞವೇದಿಯಿಂದ ಉದಿಸಿದ ದ್ರೌಪದಿ
ವೇದೋದ್ಭವೆಯ ಪತಿ = ದ್ರೌಪದೀ ಪತಿ ಶ್ರೀ ಭೀಮಸೇನದೇವರು
ವೇದೋದ್ಭವೆ ಅನುಜ = ಧೃಷ್ಟದ್ಯುಮ್ನ
ವೇದ ಪೂಜಿತ ರಾಮ = ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಪೂಜಿತನಾದ ಶ್ರೀ ಮೂಲರಾಮ
ವೇದವ್ಯಾಸ ಶಿಷ್ಯನ ಪೀಠ =
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಶ್ರೀ ಭುವನೇಂದ್ರತೀರ್ಥರ ಆಶ್ರಮ ಶಿಷ್ಯರಾಗಿ ಪೀಠದಲ್ಲಿ ಪಟ್ಟಾಭಿಷಿಕ್ತರಾಗಿ ರಾಜಿಸಿದ್ದರು.
ವೇದವತೀ ಪತಿಯನು ಮುದದಿಂದ ಅರ್ಚಿಸಿದ =
ಶ್ರೀ ಅಗ್ನಿದೇವರ ಪುತ್ರಿ ವೇದವತಿ ಪತಿ = ಪದ್ಮಾವತೀ ಪತಿಯಾದ ತಿರುಮಲೆಯ
ಚೆಲುವನಾದ ಶ್ರೀ ಶ್ರೀನಿವಾಸನನ್ನು ಭಕ್ತಿ ಶ್ರದ್ಧೆಗಳಿಂಗ ಅರ್ಚಿಸಿದ ಪೂತಾತ್ಮರು!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
No comments:
Post a Comment