jitamitra rayara mutt yati stutih
ಶ್ರೀ ಜಿತಾಮಿತ್ರರಾಯ ಗೋನ
ವೃಕ್ಷದ ನಿಲಯಾ ।। ಪಲ್ಲವಿ ।।
ಈ ಜಗದೊಳು ಬಲು
ಸೋಜಿಗದ ಕೃಷ್ಣೆ ನಿಲಯಾ ।
ರಾಜಿಪ ಮುನಿ ರಾಮ ಭಕ್ತಗೆ
ಕೊಡುವೆ ಅಭಯ ।। ಅ ಪ ।।
ಉತ್ತಿ ಬಿತ್ತೆ ಕೃಷಿಗೈದೆ
ಸಂತತ ನೀನು ।
ನಿತ್ಯ ಕರ್ಮವ ತೊರೆದ
ನಿತ್ಯ ಭೋಜನದ ।
ಹೊತ್ತಿಗೆ ಜನಿವಾರವನು ಧರಿಸಿ ।
ಮತ್ತೆ ಗೂಟಕೆ ಹಾಕಿದ ಜಿತ್ತಪ್ಪ
ನಾಮಕನಾದ ।। ಚರಣ ।।
ವಿಬುಧೇಂದ್ರ ಯತಿ
ಬರಲು ನಿಮ್ಮೂರಿಗೆ ।
ಸುಭಗಿನೀ ಪ್ರಾರ್ಥಿಸಲು ।
ಅಬುಜ ಕರದಿಂದ
ನರಹರಿ ಜಲಜ ಕೊಡೆ ।
ಪ್ರಬಲ ನೀನುಣಿಸಿದೆ ಗುರು
ಆಜ್ಞೆ ಶಿರದಿ ಪೊತ್ತ ।। ಚರಣ ।।
ಮತ್ತೆ ವಿಬುಧೇಂದ್ರರು ಬಂದರು ।
ನಿನ್ನನಾ ಕರೆದು ಭಕ್ತಿ
ಪರೀಕ್ಷೆ ಗೈದರು ।
ಉತ್ಸಾಹದಿ ಆಶ್ರಮೀಯೆ
ನಿತ್ಯ ಶ್ರೀ ಲಕುಮೀಶನ ।
ಸ್ತುತ್ಯವ ಮಾಡುತ ಸಪ್ತಾಹ
ಪ್ರವಾಹದಿ ನಿಂತ ।। ಚರಣ ।।
****
No comments:
Post a Comment