Saturday, 1 May 2021

ಮುದ್ದು ಮೋಹನರಾಯಾ ಅಸ್ಮದ್ಗುರೋರ್ಗುರು ankita gurugovinda vittala muddu mohana vittala stutih

 ಮೈಸೂರಿನ ಶ್ರೀ ಗುರುಗೋವಿಂದದಾಸ

(incomplete)

ಮುದ್ದು ಮೋಹನರಾಯಾ 

ಅಸ್ಮದ್ಗುರೋರ್ಗುರು ।

ಶುದ್ಧ ಜನ ಸಂಪ್ರಿಯ 

ನಿಮಗೊಂದಿಸುವೆ ಭವ ।

ಬುಧ ಪರಿಹರಿಸಯ್ಯಾ 

ಬುಧರಿಂದ ಗೇಯಾ ।। ಪಲ್ಲವಿ ।।


ಶ್ರೀಧರಾ ಹರಿ 

ಪಾದ ಪಂಕಜ ।

ಹೃದಯ ಸದನದಿ 

ನೋಡಿ ಸುಖಿಸುವ ।

ಮೋದ ಪಾಲಿಸೋ 

ಸಾಧುವರ್ಯನೇ ।

ಹೇ ದಯಾಂಬುಧೇ 

ಪಾದ ನಂಬಿದೆ ।। ಅ. ಪ ।।


? ... 

ಗುರುವಿಣಾತಿಯನ್ನಾ 

ಪೊಂದುತಲಿ ಸ್ವಪ್ನದಿ ।

ಸಿರಿ ವಿಜಯವಿಠ್ಠಲನ್ನಾ 

ನಿಜ ಪುರದಿ ನಿಲ್ಲಿಸಿ ।

ನಿರುತ ಅರ್ಚನೆಯೆನ್ನಾ 

ಸ್ಥಿರ ಪಡಿಸಿ ಮುನ್ನ ।

ಅರಿತು ಮನದಲಿ ನಿನ್ನಾ 

ಉತ್ಕ್ರಮಣವನ್ನ ।

ಶೌರಿ ದಾಮೋದರನ 

ಮಾಸದಿ ।

ವರ ಚತುರ್ದಶೀ 

ಅಸಿತ ಪಕ್ಷದಿ ।

ಸಿರಿ ಗುರು 

ಗೋವಿಂದವಿಠ್ಠಲನ ।

ಚರಣ ಸರಸಿಜ 

ಸೇರಿ ಮೆರೆದೆ ।।

****

No comments:

Post a Comment