Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಸುಬ್ರಹ್ಮಣ್ಯ ಮಹಾತ್ಮೆ ಸುಳಾದಿ
ರಾಗ : ಸಾವೇರಿ
ಕುಮಾರಧಾರೆ ತ್ವತ್ತೀರೇ ಮುಕ್ತಿದ್ವಾರೇ ಗುಣಾಕರೇ ।
ತಪಸ್ತಪಂತಃ ಸನ್ಮಂತ್ರಂ ಜಪಂತಃ ಸ್ಯಾಮ ಸಂತತಂ॥
ಸುಬ್ರಹ್ಮಣ್ಯಸ್ಯ ಮಹಿಮಾ ವರ್ಣಿತುಂ ಕೇನ ಶಕ್ಯತೇ।
ಯತ್ರೋಚ್ಛಿಷ್ಟಮಪಿ ಸ್ಪಷ್ಟಂ ಶ್ವಿತ್ರಿಣಃ ಶೋಧಯತ್ಯಹೋ॥
Audio by Vidwan Sumukh Moudgalya
ಧೃವತಾಳ
ಪರಮಾಧಿಕಾರಿಗೆ ದೊರಕುವುದೀ ಯಾತ್ರಿ
ಹರಿಗುರು ವಿಶ್ವಾಸಾನಿರುತ ಉಳ್ಳವರಿಗೆ
ಪರದೈವನಾದ ಸಿರಿ ಪರಶುರಾಮನ ಕ್ಷೇತ್ರ
ಧರೆಯೊಳಗಿದೆ ಕನ್ಯಾಕುವರಿ ಗೋಕರಣಾ
ಪರಿಯಂತ ಕುರುಹು ಇದರ ಮಧ್ಯ
ಪರಿಮಿತಿ ಉಂಟು ತೌಲ
ಅರಿಶಿನ ದೇಶ
ತುಳುವರಿವರೆಂದು ಕರೆಸುವರು
ಮರಳೆ ಇದು ಸಿಂಹಗಿರಿ ಎನಿಸುವುದು
ಸ್ಮರಣೆ ಮಾಡಿದರೆ ದುಸ್ತರ ಭವಾಂಬುಧಿ ಉ
ತ್ತರಿಸುವುದಾಕ್ಷಣ ಕರಣಶುದ್ಧನ ಮಾಡಿ
ಗರುಡನು ಜನನಿಯಾ ಸೆರೆಯಬಿಡಿಸಿ ಪಗೆ
ಧರಿಸಿ ನಿರ್ದಯದಿಂದ ಉರಗಗಳನ್ನು ಸದೆದು
ಭರದಿಂದ ವಾಸುಕಿಯಾ ಎರಗಿ ತುಂಡದಿ ಕಚ್ಚಿ
ತೆರಳೆ ಗಗನಾದಲ್ಲಿ ಹರಿದು ಪೋಗೆ ಕಶ್ಯಪ
ಕರೆದು ಬುದ್ಧಿಯ ಪೇಳೆ ಶಿರಿಬಾಗೆ ವೈನತೇಯ
ಅರಿಯಾ ಬಿಸಾಟು ಕಿರಾತರ ನುಂಗಿದೊಂದೆಶೆಯಲ್ಲಿ
ನಿರುಪಮ ನಿಸ್ಸಂಗ ವಿಜಯವಿಠಲ ರೇಯನ
ಚರಣ ಪೂಜಿಪ ಸಿದ್ಧರಲ್ಲಿ ವಾಸಕಾಣೊ ॥೧॥
ಮಟ್ಟತಾಳ
ಉರಗವಾಸುಕಿಯನ್ನು ಕರೆದು ಕಶ್ಯಪಮುನಿ
ಕರೆದಿಂದಲಿ ತಡವರಿಸಿ ಮನ್ನಿಸಿ ನಿಲ್ಲಿಸಿ
ಗರುಡ ಕಂಡರೆ ನಿನ್ನಾ ತಿರಗಿ ಬಿಡನು
ತೀವರದಿಂದಲಲಿ ಪೋಗಿ
ಹರನಕುರಿತು ಸಿಂಹಗಿರಿಯ ತೊಪ್ಪಲಲ್ಲಿ
ವರತಪವನೆ ಮಾಡಿ ಉರುಕಾಲಭೀತರಹಿತನಾಗೆಂದು
ಅರುಹಲು ಕೈಕೊಂಡು ಅರಿ ಉಪಟಳ
ಪರಿಹರ ಮಾಳ್ಪೆನೆಂದು ಪರಮತ್ವರಿತದಲ್ಲಿ
ಬರುತ ಇದನೆ ಕಂಡ ಉರಗ ವಾಸುಕಿ ಅಂದು
ಸಿರಿ ಅರಸ ನಮ್ಮ ವಿಜಯವಿಠಲ ರೇಯನ್ನ
ಹಿರಿಯ ಮಗನ ಕುವರನ ಒಲಿವೆನೆಂದ ॥೨॥
ತ್ರಿವಿಡಿತಾಳ
ವಾತೋದಕ ಪರ್ಣಾಶನದಿಂದ ವಾಸುಕಿ
ತಾ ತಪವನೆ ಮಾಡಿ ಬಹುಕಾಲಕ್ಕೆ
ಭೂತನಾಥನ ಒಲಿಸಿ ಚರಣಯುಗ್ಮಕ್ಕೆರಗಿ
ಶೀತಾ ನಾನಾಭೀತಿ ಬಿಡಿಸೆನಲೂ
ಆತ ಕೇಳುತ ಶಿರದೂಗಿ ಸರ್ಪನ ಕೂಡ
ಮಾತನಾಡಿದ ಒಂದು ಕ್ರೋಶದಷ್ಟು
ಭೀತರಹಿತನಾಗಿ ಇಲ್ಲೆ ಇಪ್ಪದು ಎನ್ನ
ಜಾತಪೊಪ್ಪನು ಮುಂದೆ ಕಾಲಾಂತರಕ್ಕೆ
ಆತನ ಒಡಗೂಡಿ ಇಲ್ಲಿಯ ಪೂಜಿಯಗೊಂಡು
ಭೂತಳದೊಳು ಖ್ಯಾತಿಯಾಗೀರೆಂದೂ
ಭೂತ ಪ್ರಮಥರೊಡನೆ ಅಂತರ್ಧಾನನಾಗಿ
ಗೋತುರಸುತೆ ಅರಸಾ ತೆರಳಲಿತ್ತ
ಆತುಮಂತರಾತ್ಮ ವಿಜಯವಿಠಲ ಹರಿಗೆ
ಪ್ರೀತಿಯಾಗಿಪ್ಪಾದೀ ಕ್ಷೇತುರಜಗದೊಳೂ ॥೩॥
ಅಟ್ಟತಾಳ
ಇನಿತಿರೆ ಕಾಲಾಂತರಕೆ ತಾರಕನೆಂಬಾ
ದನುಜನು ಕ್ರೌಂಚ ಪರ್ವತದೆಡೆಯಲ್ಲಿದ್ದೂ
ವನಜ ಸಂಭವನು ಮೆಚ್ಚುವಂತೆ ಮಹಾ ತಪ
ವನು ಮಾಡಿದನು ತಲೆಕೆಳಗಾಗಿ ವಜ್ರದ
ಕೊನೆಯಲ್ಲಿ ಅನೇಕ ವರ್ಷ ವಾಸವಾಗಿ
ಅನಿಮಿಷನಿಕರ ಮಿಕ್ಕಾದ ಜನರಿಂದ
ಅಣುಮಾತರ ಸೋಲದಂತೆ ಘೋರವೆಂ-
ದೆನಿಸುವ ವರವನ್ನು ಬೇಡಲು ನಿಲ್ಲದೆ
ನೆನೆದು ಮಹತತ್ವದ ಅಭಿಮಾನಿ ಈಶನಾ
ತನುಜಾನಿಂದಲಿ ನಿನಗಪಜಯವಾಗಲಿ
ಎನಲು ದಾನವನು ಲೋಕೇಶಗೆರಗಿದ
ಎನಗ್ಯಾರು ಸಮನೆಂದು ಸ್ವರ್ಗಪಾತಾಳದ
ಜನರಿಗೆ ಮುನಿ ಸಮುದಾಯಕ್ಕೆ ಉಪಹತಿ
ಯಾನುಮಾಡೆ ದೇವಾದಿಗಳು ಪೋಗಿ ಕಮಲಾ
ಸನಗೆ ಬಿನ್ನೈಸಲು ಕೇಳಿಪೋದನು ತನ್ನ
ಜನಕಗೆ ಪೇಳೆನಗುತ ನುಡಿದನಂದು
ಮಾನುಮಥನಿಂದ ಪುರಾರಿಯ ಹಿಮವಂತ
ತನುಜೆಯ ನೆರವಂತೆ ಮಾಳ್ಪದು ಅವರಿಗೆ
ತನುಜನಾಗಿ ಮನುಮಥ ಪುಟ್ಟಿ ಅ -
ವನ ಸಂಹರಿಸುವೆನೆಂದು ಪೇಳಲು ಅ -
ಪ್ಪಣೆಗೊಂಡು ಬಂದಿದ್ದ ಸುರರೆಲ್ಲ ಒಂದಾಗಿ
ಅನಳಾಕ್ಷನಲ್ಲಿಗೆ ಪೂಶರನಟ್ಟಲು
ವಿನಯದಿಂದಲಿ ಪೋಗಿ ಚಾಪವ ಹೂಡಿಸರನೆ
ಬಾಣ ಎಸೆಯಲು ಪಿನಾಕಿ ಚಂಚಲ
ಮನದಲ್ಲಿ ಗೌರಿಯಕೂಡಿದ ಇತ್ತಲು
ಮನಸಿಜ ನೆನಿಸೀದ ಕಾಮನೆಂದಾರಭ್ಯ
ಜನಸೀದಾ ನಾನಾ ಠಾವಿನಲ್ಲಿ ಪ್ರಾಂತಕ್ಕ
ಷಣ್ಮೊಗನಾಗಿ ಇಂದ್ರಾದ್ಯರ ಸಹವಾಗಿ
ದನುಜಾ ತಾರಾಕನೊಳು ಕಾದಿ ಅವನ ಕೊಂದು
ಅನಿಮಿಷ ಸೈನ್ಯಕ್ಕೆ ನಾಯಕನೆನಿಸಿದ
ಪಣವದುಂದುಭಿ ಭೇರಿ ಮೆರಿಯಲುಕೊಂಡಾಡೆ
ಗುಣನಿಧಿ ವಿಜಯವಿಠಲ ರೇಯನ ಪುತ್ರ
ಮನು ಮಥನವತಾರ ಸ್ಕಂದನು ಕಾಣಿರೊ ॥೪॥
ಆದಿತಾಳ
ದಿತಿಜನ ಕೊಂದು ವೇಗದಲಿಂದ ಪಾರ್ವತಿ -
ಸುತನು ತನ್ನ ಪೆತ್ತವನ ಕೇಳಲು ಸಿಂಹ ಪ -
ರ್ವತದಲ್ಲಿ ಪೋಗಿ ತಪವನು ಮಾಡೆನಲು ಹೃ -
ದ್ಗತನಾಗಿದ್ದ ಹರಿಲೀಲೆ ಸ್ಮರಿಸುತ್ತಾ ನಡೆತಂದ
ಅತಿಶಯದಿಂದಲಿ ತಪವ ಮಾಡೆನಲು ತಾರಾ-
ಪಥದಲ್ಲಿ ಶಬ್ಧವಾಗೆ ಲಕ್ಷ ಭೋಜನ ಸು-
ಘ್ರøತ ಸಮೇತ ಏಕಾಪೋಶನನ ಒಂದೆ ದಿನ
ಹಿತವಾಗಿಗೈಸಿ ಉಚ್ಚಿಷ್ಠದಲಿ ಹೊರಳಿ ನೀನು
ಶಿತಮನನಾಗೆನಲು ಕ್ಷಿತಿಯೊಳಗಿದೆ ನಿ -
ರ್ಮಿತವಾಯಿತು ತಿಳಿವುದು
ಕೃತಭುಜರು ನಲಿದಾಡೆ ಚತುರಾದ್ವಿಮೊಗನು ಇಲ್ಲಿ
ಪ್ರತಿವಾರ ಬಿಡದಲೆ ಮತಿವಂತನಾಗಿ ಶಾ -
ಶ್ವಿತ ಕಾಲಾ ನೆಲಸೀದ ಖತಿಗೊಳ್ಳದಿರಿ ಶೋ-
ಭಿತ ಮತ್ಸ್ಯ ಸುಪಟ ತೀರಥ ರುದ್ರಪಾದ ಮೂರು
ಪಥದ ಕುಮಾರಧಾರಿ ರತಿವುಳ್ಳ ಶಂಖ ತೀ -
ರಥ ನಾನಾ ಬಗೆ ಉಂಟು ಪ್ರತಿಕೂಲವಾಗದೇ ವಾ-
ರುತಿಯ ತಿಳಿದು ಭಕುತಿಯಿಂದಲಿ ಮಿಂದು ಅ -
ಮೃತ ಭೋಜನ ದುಚ್ಚಿಷ್ಟಾ ಗತಿ ಎಂದು ಹೊರಳೆ ಪ-
ವಿತ್ರನಾಗುವ, ಭಾಗೀರಥಿ ಸ್ನಾನಕ್ಕೆ ಒಂದು
ಶತಸಾರೆ ಪೋದಫಲ ಪ್ರಾಪ್ತತವಾಗುವದು ಕಾಣೊ
ಶತಸಿದ್ಧವೆನ್ನಿ ಉನ್ನತ ಕುಷ್ಟರೋಗಗಳು
ಹತವಾಗಿ ಪೋಗುವುದು ಪತಿತನಾದರು ಬಂದು
ತತುವ ಮಾರ್ಗದಲ್ಯುಚಿತವುದನ್ನು ತಿಳಿಯೆ ಮು-
ಕುತಿವಂತ ಸತತದಲ್ಲಿ
ನುತಿಸಿದವರಿಗೆ ಶ್ರೀ ವಿಜಯವಿಠಲರೇಯಾ
ಚತುರದವರ ಸಂಗತಿಯಲ್ಲಿ ಪೊಂದಿಸುವ ॥೫॥
ಜತೆ
ಸುಬ್ರಹ್ಮಣ್ಯದ ಯಾತ್ರೆ ಎಂಥಾದೊ ತಿಳಿಯಾದು
ಶುಭ್ರಾವರಣ ವಿಜಯವಿಠಲ ನರಹರಿಬಲ್ಲಾ ॥೬॥
********
ಹರೇ ಶ್ರೀನಿವಾಸ🙏
ಶ್ರೀ ಗುರುಭ್ಯೋ ನಮಃ🙏
ಇಲ್ಲಿಗೆ ಶ್ರೀ ವಿಜಯದಾಸರ ಪಶ್ಚಿಮ ಪ್ರಬಂಧದ ತೀರ್ಥಕ್ಷೇತ್ರ ಮಹಿಮಾ ಸುಳಾದಿಗಳು ಮುಕ್ತಾಯಗೊಂಡಿದೆ
ಸುಳಾದಿಗಳನ್ನು ಕೇಳಿ ಹಾರೈಸಿದ ಎಲ್ಲ ಹರಿದಾಸಬಂಧುಗಳಿಗೆ ,
ಗುರುಗಳು ಹಾಗೂ ಮಾರ್ಗದರ್ಶಕರೂ ಆದ ಶ್ರೀಮತಿ ನಂದಿನಿಯವರಿಗೆ ಧನ್ಯವಾದಗಳು.
ಮುಂದಿನ ದಿನಗಳಲ್ಲಿ ದಾಸರ ಉತ್ತರ ಪ್ರಬಂಧದಲ್ಲಿ ಬರುವ ತೀರ್ಥಕ್ಷೇತ್ರಗಳ ಕಡೆ ಹೋಗೋಣ.......ವೆಂದು ಹೇಳುತ್ತಾ
ಸೇವೆಯನ್ನು ದಾಸರ ಅಂತರ್ಗತ ಭಾರತಿರಮಣ ಮುಖ್ಯಪ್ರಾಣಂತರ್ಗತ ಲಕ್ಷ್ಮೀವೆಂಕಟೇಶ್ವರನಿಗೆ ಸಮರ್ಪಿಸುತ್ತಿದೇನೆ.
🙏 ಶ್ರೀಕೃಷ್ಣಾರ್ಪಣಮಸ್ತು 🙏
******
No comments:
Post a Comment