Tuesday, 5 October 2021

ವಾಸುಕಿ ರೂಪನೆ ವೈಯ್ಯಾರದಿಂದ traditional naaga panchami VAASUKI ROOPANE VAYYARADINDA SAMPRADAYA


 
naaga panchami haadu

ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |

ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||೧||


ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |

ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾ‌ಎಲ್ಳು || ೨ ||


ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |

ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು || ೩ ||


ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |

ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು || ೪ ||


ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |

ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು || ೬ ||


ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |

ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ || ೭ ||


ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|

ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||೮||


ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |

ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ|| ೯ ||


ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |

ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು || ೧೦ ||


ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |

ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ || ೧೧ ||

***


vAsuki rUpane vaiyyAradinda suvAsiniyaru aritu | pUjeya mADuvA |

A SuBA cariteya katheya nA pELuve |ISa kumArane pAlipudu matiya||1||


baDa brAhmaNana magaLu akemunci eMbOLu garuDapancami vRutavu tanagenutali |

tarisikoDabEkAda PalapuShpa hyAngenuta | oDahuTTidaNNage aruhidA^^elLu || 2 ||


anda mAtanu kELi candraSEKara tAnu cenduLLa kusumagaLa koyyutiralu |

ondu kyAdige oLage hondidda SESha tA bandu sOkidanavana udara sthaLavanu || 3 ||


viShavu talegEri paravaSanAgi biddiralu |kusumalOcanege baMdaruhidaru bEga |

SiSuvati vallaBa viShava kO nAgarA BOgisu endartiyali teraLidALu || 4 ||


nene akki, nenegaDale goneya bALeya haNNu, ciguLi, taMbiTTu, tenginakAyiyu |

araLu, hurikaDale,huNasiyakAyi | modalAda PalagaLane tekkonDu teraLidALu || 6 ||


raMBeyaroDagUDi bandu nintaLe anuje cendadi arGyapAdyavane mADi |

BaktiyiMdali Catra cAmaravetti nintu pUjisidaLu kALingana || 7 ||


haLadiyA vastragaLu, biLiya janivAragaLu | thaLa thaLane hoLeyuvA muttinA toDuge|

naLa naLisuvA puShpa PalagaLane takkonDu |beLagidaru dhUpa dIpAratiyanu||8||


huttadA mRuttikeya akShateya takkonDu aNNanA bennu toLedaLAga |

eShTott malagidenendu | eccaradi maimuridu | eccaradi kaNteredu kuLitanAga|| 9 ||


harige hAsigeyAde | harige kunDalavAde | hariye draupatiya mAna kAyde |

oDahuTTidavara tande tAyiyara | vAliyA BAgyavA kALingarAya karuNisu endaLu || 10 ||


I katheya hELdavarige I katheya kELdavarige | oDa huTTidavarA vAleyA BAgyavA |

matiyanendendigU | kALingarAyanu karuNisuvanu | jayamangaLa SuBamangaLa || 11 ||

***

No comments:

Post a Comment