ಶಂಕರ ಗಂಡನ ಹಾಡು
ಗಿರಿಜೆಯ ವರಸುತ ಕರಿಮುಖಗೊಂದಿಸಿ
ಸರಸ್ವತಿಗಭಿವಂದಿಸುವೆ
ಪರಮದಯಾಳು ಹೆಳವನಕಟ್ಟೆರಂಗಯ್ಯ
ಒಡೆಯನು ಎನ್ನ ಮನದೊಡೆಯ 1
ತಾನಾಗಿ ಶಿವ ಶಂಕರಗಂಡ ತಂಗಿಗೆ ವಿವಾಹಮಾಡೋ
ಸಂಭ್ರಮ[ದಾ]
ಭಾವ ಮೈದುನರ ಕಥೆಯ ನಾಪೇಳುವೆ ನೀವೆಲ್ಲ
ಕೇಳಿ ಸಜ್ಜನರು 2
ದ್ವಾರಾವತಿಯ ಸೀಮೆಯಲ್ಲಿ ರಂಜಿಸುವೊ
ವಿಶಾಲ ವಿಲಾಸ ಪಟ್ಟಣದಿ
ನಾರಾಯಣ ಕುಮಾರ ಒಪ್ಪಿದನೊಂದು ಚಾರುಮಣಿ
ಖಚಿತ ಮಂದಿರದಿ 3
ಚಂದ್ರಸೂರ್ಯರು ಎಡಬಲದಿ ಒಪ್ಪಿರಲು
ಮಂದಮಾರುತ ತಂಪೆÉಸೆಯೆ
ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು4
ಗಿಳಿವಿಂಡು ನವಿಲು ಹಂಸವು ರಂಜಿಸುವಂಥ ನವಿಲ
ಮಯೂರ ಪಕ್ಷಿಗಳು
ಅಳಿಗಳು ಝೇಂಕರಿಸುತಲಿ ಹಾಡುತಲಿರೆ ನಳಿನ
ನಾಭನ ಓಲಗವು 5
ಕೈಲಾಸಪುರದ ರಾಜ್ಯದೊಳಗೊಪ್ಪುವ
ನಿರ್ಭಯದಲಿನಲ್ಕಾವತಿಯು
ತ್ರೈಲೋಕ್ಯವಂದ್ಯ ಶಂಕರಗಂಡನಿಹ ಒಮ್ಮನದಿಂದನುಜೆಯ
ಪಾಲಿಸುತ್ತ 6
ಅರಗಿಳಿಯಾಡಿಸುವಳು ಕೆಂಧೂಳಿಯಲಿ
ಮರಿಹಾವುಗಳ ನೆರೆಹುವಳು
ತರಳಾಕ್ಷಿತನ್ನ ಸಂಪತ್ತುಗಳೆಲ್ಲವ ಬಿಟ್ಟು
ಗೊಂಬೆಯಾಟವನೆ ಆಡುವಳು 7
ಆಡೋಳು ಪಂಚ ಪಗಡಿ ಚಿನ್ನದಮಣೆಯೊಳು
ಕೂಡಿದ್ದ ಗೆಳತಿಯರ ಒಡನೆ
ಪಾಡೋಳು ಮರಿಕೋಗಿಲೆಯಂತೆ ತಂಗಿಯ
ನೋಡಿದ ನವಯೌವನೆಯನು 8
ನಿತ್ಯ ನಿತ್ಯದಿ ಯೌವನವು ಹೆಗ್ಗಳಿಸಲು ಬಟ್ಟ
ಕುಚವು ತೋರಿದವು
ಮಿತ್ರೆ ತಂಗಿಗೆ ವರವದಾವುದೆನುತಲಿ
ಚಿತ್ತದೊಳಗೆ ಚಿಂತಿಸುತ್ತಿದ್ದ 9
ಪುಷ್ಪಬಾಣನು ತಂಗಿಗೆ ತಕ್ಕ ವರನೆಂದು ಚದುರ
ಚೆನ್ನಿಗನು ಮನ್ಮಥನು
ತವಕದಿ ಬುದ್ಧಿವಂತರ ಕಳುಹಿಸಿ ನಾಳೆ
ಉದಯಕ್ಕೆ ಕರೆತನ್ನಿರೆಂದ 10
ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ
ನಿಂದು ಕೈ ಮುಗಿದರು ಹೋ
ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು 11
ಬಂದ ಬಿಡಾರವ ತಂಡ ತಂಡದಲಿಳಿಸಿ ವಂದಿಸಿ
ಮಾತಾಡಿ ನಗುತ ಭೂ
ಮಂಡಲದೊಳು ಕ್ಷೇಮವೆ ಎನುತ ಶಂಕರಗಂಡ
ಕೇಳಿದ ಮನ್ಮಥನ 12
ನಿಮ್ಮ ಕಾರುಣ್ಯ ಕೃಪೆಯಿಂದ [ಸ್ತುತ್ಯ]ವು ನಮ್ಮ
ರಾಜ್ಯವು ಕ್ಷೇಮವೆನ್ನಲು
ಸನ್ಮಾನದಿಂದ ಉಪಾಚಾರ[ಮಾ]ಡುತ್ತ
ಬ್ರಹ್ಮಾನಂದದಲಿದ್ದ ಶಂಕರಗಂಡನು 13
ರುಕ್ಷ್ಮಿಣೀ ತನುಜಗೆ ಎಮ್ಮನುಜೆಯ ಕೊಟ್ಟು
ವಿವಾಹ ಮಾಡಲಿಚ್ಛಿಸುವೆ
ಲಕ್ಷಣವಂತೆಯು ಕೈಪಿಡಿಯೆ ನಿಮ್ಮನಪೇಕ್ಷ್ಷಿಸಿದಳು
ಚಂದ್ರಮುಖಿಯು 14
ತಂದು ಗದ್ದುಗೆಯ ಚಾವಡಿಯಲ್ಲಿ ಹಾ[ಕಲು]
ಸಂಭ್ರಮದಿಂದ ಕುಳಿತರು
ಹೊಂಬಣ್ಣದ್ಹರಿವಾಣದೊಳಗೆ ತಾಂಬೂಲವ
ತಂದಿಡುವರು ಮನ್ಮಥಗೆ 15
ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು
ಮಂಗಳ ಮೃದು ವಾಕ್ಯವನ್ನು ಪ್ರ
ಸಂಗ ಮಾಡುವನು ಶಂಕರಗಂಡ ನಿಮ್ಮ
ತಂಗಿಯನೆನಗೀಹುದೆಂದ 16
ಬಲ್ಲಿದರು ನೀವು ಬಹು ಪರಾಕ್ರಮಿಗಳು
ಮಲ್ಲಿಗಿಸರ ಕಬ್ಬು ಬಿಲ್ಲು
ಸಲ್ಲದು ನಿಮ್ಮೊಳು ಸಲಿಗಿ ನಮಗೆಂದು ಬಲ್ಲ
ಹಿರಿಯರು ಹೇಳುವರು 17
ಸರ್ವ ಲಕ್ಷಣವುಳ್ಳ ಸರಸಿಜನೇತ್ರೆಯು
ಒಬ್ಬಳೇ ರತಿ ನಮ್ಮ ತಂಗಿ
ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ 18
ನಡೆದರೆ ಬಡವಾಹಳು ನಮ್ಮ ತಂಗಿಯು
ಕಡುಮೋಹದಿಂದ ಸಾಕಿದೆನು
ಬಡಿವಾರ ನಿಮ್ಮೊಳು ಭರವಸೆ ನಮಗೇನು
ಕೊಡಲಾರೆ ತಂಗಿಯನೆಂದ 19
ಅನುಮಾನ ಮಾಡುವುದೇಕೊ ನೀ ಇಷ್ಟೊಂದು
ಅವಳಿಗೆ ಸ್ವತಂತ್ರವಿಲ್ಲೇನು
ನೆನೆದಾಗ [ಕಳುಹುವೆ ನಿಮ್ಮ ಮನೆಗೆಂದು] ಮನಸಿಜ
ನುಡಿದ ದೈನ್ಯದಲಿ 20
ಹಾಗಾದರಾಗಲಿ ಎನುತ ರಾಶಿಕೂಟ
ಭಾಗ್ಯದಿಂದಲಿ ನೋಡಿದರು
ಭಾಗೀರಥಿ ಮದನ ರತಿದೇವಿಗೆ ಆಗಲೆ
ನೇಮವನೆ ಮಾಡಿದರು 21
ನಲ್ಕಾವತಿಯ ಶೃಂಗಾರ ಮಾಡಿದರು ದಿನಕರ
ಪ್ರತಿಬಿಂಬ[ದಂದ]ದಲಿ
ಕನಕ ತೋರಣಗಳನ್ನು ಕಟ್ಟಿ ತಾ ಕರೆಸಿದ
ಎಣಿಕೆಯಿಲ್ಲದ ಬಂಧು ಜನರ 22
ಬಲ್ಲಿದ ಶುಭಲಗ್ನವ ನೋಡಿ ಬುಧಜನರು
ಎಲ್ಲರು ನೆರೆದು ಸಂಭ್ರಮದಿ
ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು 23
ಸೆಳೆಮಂಚ ಸುಪ್ಪತ್ತಿಗೆ ಸುವರ್ಣದ ತಳಿಗೆ
ಬಟ್ಟಲು ಗಿಂಡಿಗಳನ್ನು
ಬಳುವಳಿ ಮಾಡಿದ ಸ್ತುತಿಸುವೊ ಎಳೆದೇರ
ಬಳುವಳಿ ತಂಗಿಗೆ ಇತ್ತ 24
ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ
ಲೇಸಾದ ಊರು ಉಂಬಳಿಯ ಕೊಟ್ಟುರತಿಯ
ವಿಲಾಸಪಟ್ಟಣಕೆ ಕಳಿಸಿದ 25
ಮನ್ಮಥ ರತಿದೇವಿ ವಿಲಾಸ ಪಟ್ಟಣದೊಳು ಉನ್ನಂತ
ದಿನ ಬಾಳುತಿರಲು
ಇನ್ನೊಮ್ಮೆ ನೋಡಬೇಕೆನುತ ಶಂಕರ ಗಂಡ ತನ್ನೊಳು
ತಾನೇ ಯೋಚಿಸಿದ 26
ಬಿಗಿದು ಸುತ್ತಿದ ದೊಡ್ಡ[ಚೆಂ]ಡಿಯ ಬೆನ್ನಿಗೆ
ಬಿಗಿದ ನಾಡಗಂಬಳಿಯ
ಹೆಗಲ ಮೇಲಿನ ಬಾರಿಕೋಲು ಮನ್ಮಥರಾಯ
ನಗುವಂತೆ ಮಾಡಿ ರೂಪವನು 27
ಹೆಗ್ಗಾಲು ಮರೆಯ ಮೆಟ್ಟಿದ್ದ ಕೈಯಲ್ಲಿ ದೊಡ್ಡ
ಕುಡಗೋಲು ಕÀವಣೆಯ ಪಿಡಿದು
ಶೀಘ್ರದಿ ತೆರಳಿ ಅಂಗಜನಹಂಕಾರವ ನಿಗ್ರಹ
ಮಾಡುವೆನೆನುತ 28
ನೋಡೆಲೆ ರತಿ ನಿನ್ನ ಒಡಹುಟ್ಟಿದಣ್ಣನು
ರೂಢಿಯೊಳಗೆ ಅತಿಚೆಲುವ
ಗಂಡು ಕೆರವ ಮೆಟ್ಟಿ ಗಮಕದಿಬರತಾನ ನೋಡೆಂದು
ಸತಿಗೆ ತೋರಿದನು 29
ಬಡವನಲ್ಲವೋ ಆತ ಬಹು ಪರಾಕ್ರಮಿ
ಒಡಹುಟ್ಟಿದಣ್ಣ ತಾ ಮುನಿಯೆ
ಕೆಡುವುದೋ ನಮ್ಮ ಐಶ್ವರ್ಯ ಆತನಗೊಡವೆ
ನಮಗೆ ಬೇಡವೆಂದ್ಲು 30
ಕಾಂತೆಯ ಮಾತನು ಕೇಳಿ ಅಂಗಜನು ದಾವ
ಕಾರಣವ ಹೇಳದಂತೆ ದಿನÀಕರ
ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು31
ತಲೆಯೆತ್ತಿ ನೋಡಲಿಲ್ಲವು ಆತನ ಕೂಡೆ
ಗೆಲುವಿನಿಂದ ಮಾತಾಡಲಿಲ್ಲ
ಎಲೆ ಕಾಮದೇವ ಎನ್ನನುಜೆಯ ಕಳಿಸೆಂದು
ಜುಲ್ಮಿಂದ ತಾನೆ ಕೇಳಿದನು 32
ಹೂವಿನ ಮಂಚ ಪಂಚಭಕ್ಷ್ಯ ಪರಮಾನ್ನವುದಾವಾಗ
ನಮ್ಮನೆಯಲಿ
ಉಣ್ಣಲಾರಳು ಜೋಳದನ್ನವ ನಮ್ಮಾಕೆ
ನಾವೀಗ ಕಳಿಸುವೋರಲ್ಲ 33
ಲಕ್ಷ್ಮಿದೇವಿ ಭಾರತಿದೇವಿ ಗೌರಿಯರು
ತೌರುಮನೆಯ ಹಾರೈಸುವರು
ನಮ್ಮ ಮನೆಯಲ್ಲಿದ್ದ ಅಂಬಲಿಯನ್ನೇ
ಉಂಡು ಸಂಭ್ರಮದಿಂದ ಬಾಹೋಳೆಂದ 34
ಸಿರಿ ಮುಡಿಯ ಮೇಲೆ ಹುಲ್ಲು ಹೊರಿಸುವೆನು
ಕರುವ ಕಾಯಿ ನಮ್ಮ ಮನೆಯ
ಅರಿವೆ ಉಡಿಸಿ ಮೂರು ಬೊಗಸೆ ಅಂಬಲಿಯನ್ನು
ಮರೆಯದೆ ಹೊಯ್ಸುವೆಂನೆಂದ 35
ಬಹಳ ಮಾತಾಡೋದು ಯಾಕೋ ನೀ ಇಷ್ಟೊಂದು
ಜೋಳವ ಕೊಂಡು ಹೋಗೆನಲು
ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು
ಮಾಡುವೆನೊಂದÀು ಗಳಿಗೆಯಲಿ 36
ಸಮರ್ಥ ನೀ ಹೌದು ಸಲಹುವ ಜೋಳವ
ಗಮಕದಿಂದಲಿ ಬೆಳೆವೆನೆಂದು
ಅಮೃತದ ಕಲಶವ ತಂಗಿ ಕೈಯೊಳಗಿಟ್ಟು
ಚಮತ್ಕಾರದಿಂದ ಮಾಯವಾದ 37
ಹೊಟ್ಟೆ ಹಸಿದಿತು ಭೋಜನ ಮಾಡುವೆನೆಂದರೆ
ಅಟ್ಟ ಅಡಿಗೆ ಮನೆಂiÉ
(missing some lines)
****
No comments:
Post a Comment