Saturday, 1 May 2021

ಇಂದಿನ ದಿನ ಸುದಿನವಾಯಿತು ಇಂದಿರೇಶ ಮೂಲರಾಮ purandara vittala surendra teertha stutih

 surendra teertha rayara mutt yati stutih

ರಾಗ : ಬಿಲಹರಿ ತಾಳ : ಝಂಪೆ


ಇಂದಿನ ದಿನ ಸುದಿನವಾಯಿತು ।

ಇಂದಿರೇಶ ಮೂಲರಾಮ-

ಚಂದ್ರನ ಪದ ಕಮಲಗಳು । ಸು ।

ರೇಂದ್ರತೀರ್ಥ ತೋರಿಸೆ ।। ಪಲ್ಲವಿ ।।


ಈತನ ಪದ ಕಮಲಗಳ । ವಿ ।

ಧಾತ ತನ್ನ ಸದನದೊಳಗೆ ।

ಸೀತೆಯ ಸಹ ಪೂಜಿಸೆ । ನರ ।

ನಾಥ ಇಕ್ಷ್ವಾಕುನಿಗೆಯಿತ್ತ ।।

ಆತನನುಸರಿದ ನೃಪರು ।ಪ್

ರೀತಿಯಿಂದಲರ್ಚಿಸಿ । ರಘು ।

ನಾಥ ವೇದಗರ್ಭಗಿತ್ತ ।

ನಾಥನ ಮೂರ್ತಿಯನು ಕಂಡು ।। ಚರಣ ।।


ಗಜಪತಿಯ ಭಂಡಾರದಲಿ ।

ಅಜನು ಪೂಜಿತನಾಗಿ । ಭೂ ।

ಮಿಜೆ ಸಹಿತ ಶ್ರೀರಾಮ ನಿರಲು ।

ನಿಜ ಜ್ಞಾನದಿಂದ ತಿಳಿದಾಗಾ ।।

ಸುಜನ ಗುರುವೆಂದೆನಿಸುವ ನಮ್ಮ ।

ಭಜಕ ಪಾಲಕ ನರಹರಿ ಮುನಿಪ ।

ಈ ಜಗವರಿಯ ಶ್ರೀ । ಅಂ ।

ಬುಜಲೋಚನ ಮೂರುತಿಯ ಕಂಡು ।। ಚರಣ ।।


ಅಂದವುಳ್ಳ ಮೂಲರಾಮ ।

ಚಂದ್ರನ ಪದಯುಗಳನು ।

ವೃಂದಾರ ಕೇಂದ್ರವೆನಿಸುವಾ ।

ನಂದತೀರ್ಥ ಮುನಿಗಳಾ ।।

ನಂದದಿಂದಲರ್ಚಿಸಿ ನಮ್ಮನು ।

ಹೊಂದಿದ ಶಿಷ್ಯರ ಕರದ । ದಯ ।

ದಿಂದ ನಿಜಾನ್ವಯದೊಳಿಟ್ಟ । ಪು ।

ರಂದರವಿಠ್ಠಲನ ಸುರೇಂದ್ರ ಮುನಿಪ ।

ತಂದು ತೋರಲು ।। ಚರಣ ।।

****

No comments:

Post a Comment