Thursday, 2 December 2021

ರಾಘವೇಂದ್ರ ಗುರುರಾಯ ಶುಭಕಾಯ ಕವಿಗೇಯ ankita shyamasundara RAGHAVENDRA GURURAAYA SHUBHAKAAYA KAVIGEYA



ರಾಘವೇಂದ್ರ ಗುರುರಾಯ ।

ಶುಭಕಾಯ ಕವಿಗೇಯ 

ಪಿಡಿಕೈಯ್ಯ ।। ಪಲ್ಲವಿ ।।


ಪ್ರಥಮ ಯುಗದಿ ಶ್ರೀಪತಿಯ

ಸ್ತಂಭದೊಳು ।

ಪಿತನಿಗೆ ತ್ವರ ತೋರಿಸದ ।

ಪ್ರಹ್ಲಾದ ಶ್ರೀಪಾದ 

ಕೊಡು ಮೋದ ।। ಚರಣ ।।


ತುಂಗಭದ್ರ ಸುತರಂಗಿಣಿ 

ತೀರದಿ ।

ಕಂಗೊಳಿಸುವ 

ಯತಿನಾಥ ।

ದ್ವಿಜವ್ರಾತ ನುತದಾತ ಪ್ರ

ಖ್ಯಾತ ।। ಚರಣ ।।

ಕಾಮಧೇನು ಸುಮ

ಕಾಮಿತದಾಯಕ ।

ಶ್ಯಾಮಸುಂದರನದಾಸ ।

ಅಘ ನಾಶ ನತ 

ಪೋಷ ಮುನಿ ವ್ಯಾಸ ।। ಚರಣ ।।

***


 ರಾಗ : ಕಾಪಿ   ತಾಳ : ತ್ರಿತಾಳ 




No comments:

Post a Comment