Saturday, 1 May 2021

ಶರಣು ಮುನಿಮಣಿಯೇ ಸುಮತೀಂದ್ರಾ ankita prasannavenkata sumateendra teertha stutih

  sumateendra teertha rayara mutt yati stutih

ರಾಗ : ಹಂಸಾನಂದೀ ತಾಳ : ಆದಿ 

ಶರಣು ಮುನಿಮಣಿಯೇ 
ಸುಮತೀಂದ್ರಾ ।
ಕರುಣಾಮೃತದ ಖಣಿಯೇ ।
ಶರಣೆಂದವರಿಗೆ ವರ 
ಚಿಂತಾಮಣಿಯೇ ।
ಧರಿಯ ಮೇಲಿನೊಬ್ಬ 
ಧೊರೆ ನಿನಗೆಣೆಯೇ ।। ಪಲ್ಲವಿ ।। 

ಸಂತತ ಸೇವಕ 
ಸಂತರಿಗೊಲಿದೀಗ ।
ಸಂತತಿ ಸಂಪದ-
ವಿತ್ತೆ ಬೇಗ ।
ಶಾಂತ ಶುಭಗುಣ ವ-
ಸಂತನೆಂಬೋ ಕೀರ್ತಿ । ವಿ ।
ಶ್ರಾಂತಿಯಮಿತ ದಿ-
ಗಂತಕೆ ವಾರ್ತೆ ।। ಚರಣ ।। 

ತಾಳ ತಮ್ಮಟೆ ಕಂಬು 
ಕಾಳೆ ಬಿರುದು ಬುಧ ।
ಮೇಳದಿಂ ಶಿಷ್ಯ ಜನಾಲಯಕೆ 
ಸಾಲುದೀವಿಗೆ ।
ಯೊಳು ಮಾಲಿಕೆ 
ಗ್ರಹಿಸಿ ಅಂದೋಳಿ ।
ಗ್ರಹಿಸಿ ಬಂದು ಪಾಲಿಪೆ 
ಅವರ ।। ಚರಣ ।। 

ಪ್ರಸನ್ನವೆಂಕಟಾಚಲ ವಾಸ 
ಮೂಲರಾಮನ ಪಾದ ।
ನಿಶಿ ದಿನಾರ್ಚಿಸುವೆ 
ಸಂತೋಷ ಸಾಂದ್ರ ।
ಋಷಿ ಯೋಗೀ೦ದ್ರರ ಕರ 
ಬಿಸಜಜ ಸೂರೀ೦ದ್ರ ।
ಸುಶರಧಿ ಸಂಭವ ಶಶಿ 
ಸುಮತೀಂದ್ರ ।। ಚರಣ ।।
****

No comments:

Post a Comment