Saturday, 1 May 2021

ಪಂಪಾ ಕ್ಷೇತ್ರದಿ ಯಿರುವ ಶ್ರೀ ರಘುನಂದನ ankita lakumeesha raghunandana teertha stutih

raghunandana teertha rayara mutt yati stutih

ರಾಗ : ಭೈರವಿ    ತಾಳ : ರೂಪಕ 

ಪಂಪಾ ಕ್ಷೇತ್ರದಿ ಯಿರುವ 

ಶ್ರೀ ರಘುನಂದನ ।। ಪಲ್ಲವಿ ।।


ಹಂಪೆಯ ತುಂಗಾತಟದಿ ಮೆರೆವಾ ।

ಸಂಪದ ಪವನನ ಶಾಸ್ತ್ರದ ಜ್ಞಾನವಿತ್ತು ।

ತಂಪೆಸೆಯುತ ಭವ ಕಂಪನ ಒಡಿಪ ।। ಅ ಪ ।।


ಗುರು ಜಿತಾಮಿತ್ರರು ದಯದಿ - 

ಆಶ್ರಮ ನೀಡಲು ।

ಹರುಷಗೊಂಡರಿವರು ತ್ವರದಿ ।

ಪರರಪಹರಿಸಿದ 

ಶಿರಿ ಮೂಲರಾಮನ ।

ಗುರು ದಯದಲಿ ಪೊಂದಿ ।

ನಿರುತ ಪೂಜಿಸಿದ ।। ಚರಣ ।।


ಅಲ್ಲಲ್ಲಿ ವಿದ್ವಜ್ಜನರ ಕರೆದೂ - 

ಮಧ್ವ ಮತೀಯ ।

ಎಲ್ಲ ಜನಕೆ ದಿವ್ಯ ಬಿರುದೂ ।

ಸಲ್ಲಿಸಿ ದುರ್ಮತರೆಲ್ಲರ ಸೋಲಿಸಿ ।

ನಿಲ್ಲಿಸಿ ಮನವನು 

ಹರಿ ಧ್ಯಾನಗೈದಾ ।। ಚರಣ ।।


ಸುಖತೀರ್ಥರ ಶಾಸ್ತ್ರ ನಿತ್ಯ ಪಠಿಸಿ - 

ಶ್ರೀ ಸುರೇಂದ್ರರಿಗೆ ।

ಅಖಿಲಾ ವಿಧಿಯಲ್ಲಿ 

ಸಂನ್ಯಾಸ ಸಲಿಸೀ ।

ಮುಕುತಿ ಪ್ರದಾಯಕ 

ಶ್ರೀ ಲಕುಮೀಶನ ।

ಸುಕರದಲೀ ಯಿತ್ತು 

ಸಕಲರ ಪೋಷಿಸೆಂದಾ ।। ಚರಣ ।।

****

No comments:

Post a Comment