Wednesday, 3 November 2021

ಸತತ ಕಾಯೋ ಎನ್ನ ಹನುಮ ಭೀಮ ಮಧ್ವ ಗುರುವೇ ankita suguna vittala SATATA KAAYO ENNA HANUMA BHEEMA MADHWA GURUVE

 


ಅವತಾರತ್ರಯ ಸ್ಮರಣ ಕೀರ್ತನೆ  ಸುಗುಣವಿಠಲ


ಸತತ ಕಾಯೋ ಎನ್ನ ಹನುಮ ಭೀಮ ಮಧ್ವ ಗುರುವೇ ||ಪ||  

ಪತಿತರ ಪಾವನ ಗೈವ ಸದ್ಗುರುವೇ ||ಅ.ಪ|| 

ಧಾರುಣಿಯೊಳು ಕೇಸರಿ ತನಯನು ನೀನಾಗಿ |

ರಾಮರ ಸೇವೆಯ ಮಾಡಿ ನಿರುತಾ || 

ಬಿಂಕದಲಿ ಸಾಗರವಾ ದಾಟಿ  ಜಾನಕಿಗೆ ಮುದ್ರಿಕೆಯಿತ್ತು | 

ವಾರ್ತೆಯ ನರುಹಿದಂಥ ಹನುಮಂತಾ ||೧|| 


ಧರ್ಮಕ್ಷೇತ್ರದಿ ನೀನು ಉಗ್ರ ಪ್ರತಾಪವ ತೋರಿ | 

ಶ್ರೀಕೃಷ್ಣನ ಸೇವಿಸಿ, ಭಾಗವತಶಿರೋರತ್ನ ನೆನಿಸಿ||  

ದ್ರೌಪದಿದೇವಿಯ ಮನದ್ಹರಿಕೆ ಪೂರೈಸಿ ,| 

ಕುಂಭಿಣಿಯೊಳು ಮೆರೆದ ಭೀಮ ಬಲವಂತ || ೨|| 


ಕಲಿಯುಗದಿ ಅದ್ವೈತಮತವ ವಿದ್ವಂಸನ ಮಾಡಿ | 

ಶುದ್ಧ ತಾತ್ಪರ್ಯ ಪದ್ದತಿಯ ತೋರಿ .|| 

ವೇದವ್ಯಾಸರ ಪೂಜಿಸಿ ಪಂಚಿಕೆಗಳ ರಚಿಸಿ | 

ಸುಜನರಿಗೆ ಸನ್ಮಾರ್ಗವ ತೋರಿದ ಪೂರ್ಣಪ್ರಜ್ಞನೆ ಆನಂದತೀರ್ಥ ||೩|| 


ಅವತಾರತ್ರಯಗಳಿಂದ ಅಜಪಿತನ ಸೇವಿಸಿ| 

ಜಗಕೆ ತ್ರಾಣನೆನಿಸಿದ  ಮುಖ್ಯಪ್ರಾಣ|| 

ಕುಂದು ಎಣಿಸದೆ ಎಮ್ಮನು ಕಾಯೋ ಸತತ ನೀನು |  

ಕಂದರ್ಪಪಿತ ಸುಗುಣವಿಠಲನ ನಿಜದೂತ||೪|| 

********

No comments:

Post a Comment