Audio by Vidwan Sumukh Moudgalya
ಶ್ರೀ ಗುರುಶ್ರೀಶವಿಠಲದಾಸಾರ್ಯರ ರಚನೆ
ರಾಗ : ಕಾನಡ ತಾಳ : ಆದಿ
ದಾಸನಾಗೋ ಮನವೆ ಶ್ರೀಹರಿ
ದಾಸನಾಗೋ ಮನವೆ ॥ಪ॥
ದಾಸನಾಗಿ ವಿಷಯದಾಸಿಗೆ ಸಿಲ್ಕಿ ನೀ
ಮೋಸ ಹೋಗಿ ನರದಾಸನಾಗದೆ ॥ಅ.ಪ॥
ಅನ್ಯಾಯೋಚನೆ ಮಾಡದೆ
ಶ್ರೀ ಹರಿಪಾದವನ್ನು ಕೊಂಡಾಡಿದರೆ
ಘನ್ನಮಹಿಮ ಕ್ಷಣ ತನ್ನವರಗಲದೆ
ಚನ್ನಾಗಿ ಸಲಹುವನೆಂದು ತಿಳಿದು ॥೧॥
ಎಲ್ಲಿ ನೋಡಿದರಲ್ಲಿ ನಮ್ಮ
ಶ್ರೀ ಲಕ್ಷ್ಮೀವಲ್ಲಭಾ ನಿಲ್ಲದಿಲ್ಲಾ
ಪುಲ್ಲನಾಭನ ಮರದಲ್ಲೀಹ ಜೀವಗೆ
ಹಲ್ಲು ತೆರೆಯಕೊಡಬಲ್ಲನೇನೋ ॥೨॥
ದಾಸಾಭಾಸಕನಾಗಾದೆ ಮನದಿ
ಶ್ರೀನಿವಾಸನ್ನ ನೆನಸು ಕಂಡ್ಯಾ
ವಾಸುದೇವನ ನಿಜದಾಸರ ಪಾದ ಸೇ-
ವಿಸು ಬಿಡದೆ ಗುರುಶ್ರೀಶವಿಠಲನ ॥೩॥
*******
No comments:
Post a Comment