Saturday 14 November 2020

ದಾತೆ ಇಂದಿರೆ ವಾರಿಜಾತ ankita pranesha vittala ಸುವ್ವಿಪದ DAATE INDIRE PAARIJAAA SUVVI PADA

 

Audio by Vidwan Sumukh Moudgalya

ಶ್ರೀ ಪ್ರಾಣೇಶದಾಸರ ರಚನೆ   (ಲಕ್ಷ್ಮೀದೇವಿಯನ್ನು ಕುರಿತು)


 ಸುವ್ವಿಪದ


 ರಾಗ : ಕಾಂಬೋಧಿ      ತಿಶ್ರನಡೆ 


ದಾತೆ ಇಂದಿರೆ ವಾರಿಜಾತ ಮಂದಿರೆ ಲೋಕ l

ನಾಥೆ ಸುಖಪೂರ್ಣೆ ವಿಖ್ಯಾತೆ ॥ ಬಿನ್ನವಿಸುವೆನೆ ಯನ್ನ l

ಮಾತು ಮನ್ನಿಪುದೇ ವಿಧಿಮಾತೆ ॥ಪ॥

ಸುವ್ವಿ.......ಸುವ್ವಿ........


ಪಾನಿಯಧಿ ಹರಿಗೆ ಏನು ಕೊಟ್ಟನೊ ನಿನ್ನ l

ಕಾಣಿಸುವೆ ಕಣ್ಣು ಕುಲವಿಲ್ಲ ॥ ಗೋತ್ರವಿಲ್ಲ ಹೆತ್ತವರ l

ಕ್ಷೋಣಿಯೊಳಗೊಬ್ಬರರಿತಿಲ್ಲ ॥೧॥

ಸುವ್ವಿ.....ಸುವ್ವಿ.....


ಏನು ಮರುಳಾದೆವ್ವ ಶ್ರೀನಾರಿಯಿಂಥವಗೆ l

ಹೀನಳುಚ್ಛಿಷ್ಟ ಫಲಮೆದ್ದ ॥ಬಡ ಬ್ರಾಹ್ಮಣೊದ್ದರೆ l

ಮಾನವೆ ಇಲ್ಲ ನಗುತಿದ್ದ ॥೨॥

ಸುವ್ವಿ......ಸುವ್ವಿ.....


ಅವಚೋರ ಬಹುಜಾರ ಸವತಿಯರು ಬಲುಮಂದಿ l

ಅವರಿಗಾತ್ಮಜರು ಹತ್ತತ್ತು ॥ ನಿನ್ನೊಗತನದೊಳಿದ್ದ l

ಅವಿವೇಕ ಮೂಲೋಕಕೆ ಗುರುತು ॥೩॥

ಸುವ್ವಿ......ಸುವ್ವಿ......


ಅತ್ತೆ ಮಾವಗಳಿಲ್ಲ l ವೃತ್ತಿ ಕ್ಷೇತ್ರಗಳಿಲ್ಲ l

ಹಸಿದರನ್ನಿಲ್ಲ ಮನೆಯಲ್ಲಿ ॥ ಈ ಗಂಡನೊಡನೆಯೇ l

ನರ್ಥಿ ಪಡುತಿಹೆಯೇ ನೀ ಬಲ್ಲೆ ॥೪॥

ಸುವ್ವೀ......ಸುವ್ವಿ......


ಸೇರಿದನು ಪತಿ ನಿನ್ನ l ತೌರು ಮನೆ ನೋಡಲ್ಕೆ l

ಧಾರಿಣಿಯೊಳಗೆ ಬಹು ನಿಂದಾ ॥ಭಕ್ತಿಯಿಂದವನ ಹ್ಯಾl

ಗಾರಾಧಿಸುವದೋ ಸುರವೃಂದಾ ॥೫॥

ಸುವ್ವೀ.......ಸುವ್ವಿ.....


ಶಿಶು ಹಿಂಸಕತಿ ಕಠಿಣ lಹಸನ್ಮುಖನಲ್ಲರ್ಭಕ ಹೆಂ l

ಗಸರಳಿದ ಪುಕ್ಕಾ ಬಹು ಠಕ್ಕಾ ॥ ಕಲಹಗಂಟೇನು ಸೇ l

ವಿಸಿದ್ಯೋ ವ್ರತಗಳನು ಇವಸಿಕ್ಕಾ ॥೬॥

ಸುವ್ವೀ.......ಸುವ್ವೀ.....


ಎಲ್ಲೆಲ್ಲಿ ನೋಡಿದರು ಇಲ್ಲ ಪ್ರಾಣೇಶವಿ l

 ಠಲ ನಂಥವರೂ ಏನೆಂಬೆ ॥ ಮುದದಿಂದ ಬಿಡದೆ ಅವ l

ನಲ್ಲಿ ಪೊಂದಿರ್ಪೆ ಜಗದಂಬೆ ॥೭॥

ಸುವ್ವೀ.......ಸುವ್ವೀ......

*******


No comments:

Post a Comment