Sunday, 29 November 2020

ಹರಿಕಥಾಮೃತಸಾರ ಸಂಧಿ 09 ankita jagannatha vittala ಉದಾತ್ತಾನುದಾತ್ತ ಸಂಧಿ HARIKATHAMRUTASARA SANDHI 9 UDAATTAANUDAATTA SANDHI

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


  ಮಾತೃಕಾ ಸಂಧಿ 9
"ಹರಿಯು ಪಂಚಾಶದ್ವರಣ ಸುಸ್ವರ " ,
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ಉದಾತ್ತಾನುದಾತ್ತ ಸಂಧಿ , ರಾಗ ಸಿಂಹೇಂದ್ರಮಧ್ಯಮ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಹರಿಯೆ ಪಂಚಾಶದ್ವರ್ಣ ಸುಸ್ವರವು ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ಇರುವ
ತನ್ನಾಮ ರೂಪಗಳರಿತು ಉಪಾಸನೆಗೈವರು ಇಳೆಯೊಳು
ಸುರರೆ ಸರಿ ನರರಲ್ಲ ಅವರು ಆಡುವುದೇ ವೇದಾರ್ಥ||1||

ಈಶನಲಿ ವಿಜ್ಞಾನ ಭಗವದ್ದಾಸರಲಿ ಸದ್ಭಕ್ತಿ ವಿಷಯ ನಿರಾಶೆ
ಮಿಥ್ಯಾ ವಾದದಲಿ ಪ್ರದ್ವೇಷ ನಿತ್ಯದಲಿ ಈ ಸಮಸ್ತ ಪ್ರಾಣಿಗಳಲಿ
ರಮೇಶನು ಇಹನೆಂದು ಅರಿದು ಅವರ ಅಭಿಲಾಷೆಗಳ ಪೂರೈಸುವುದೆ
ಮಹಾಯಜ್ಞೆ ಹರಿಪೂಜೆ||2||

ತ್ರಿದಶ ಏಕಾತ್ಮಕನು ಎನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರು ಎನಿಸುವ ಮುಖ್ಯ ಪ್ರಾಣ ಆದಿತ್ಯರೊಳು ನೆಲೆಸಿ
ವಿದಿತನಾಗಿದ್ದು ಅನವರತ ನಿರವಧಿಕ ಮಹಿಮನು
ಸಕಲ ವಿಷಯವ ನಿಧನ ನಾಮಕ ಸಂಕರುಷಣ ಅಹ್ವಯನು ಸ್ವೀಕರಿಪ||3||

ದೈಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು
ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ
ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ
ಅಹರ್ ಅಹರ್ ಭಗವಂತಗರ್ಪಿಸು ಪರಮ ಭಕುತಿಯಲಿ||4||

ಮೂರುವಿಧ ಕರ್ಮಗಳ ಒಳಗೆ ಕಂಸಾರಿ ಭಾರ್ಗವ ಹಯವದನ
ಸಂಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ
ಸೂರಿ ಮಾನವ ದಾನವರೊಳು ವಿಕಾರ ಶೂನ್ಯನು ಮಾಡಿ ಮಾಡಿಸಿ
ಸಾರಭೋಕ್ತನು ಸ್ವೀಕರಿಸಿ ಕೊಡುತ ಇಪ್ಪ ಜೀವರಿಗೆ||5||

ಅನಳ ಪಕ್ವವ ಗೈಸಿದ ಅನ್ನವ ಅನಳನೊಳು ಹೋಮಿಸುವ ತೆರದಂತೆ
ಅನಿಮಿಶೇಷನು ಮಾಡಿ ಮಾಡಿಸಿದಖಿಳ ಕರ್ಮಗಳ ಮನವಚನ ಕಾಯದಲಿ ತಿಳಿದು
ಅನುದಿನದಿ ಕೊಡು ಶಂಕಿಸದೆ ವೃಜಿನ ಅರ್ದನ
ಸದಾ ಕೈಕೊಂಡು ಸಂತೈಸುವನು ತನ್ನವರ||6||

ಕುದುರೆ ಬಾಲದ ಕೊನೆಯ ಕೂದಲು ತುದಿ ವಿಭಾಗವ ಮಾಡಿ ಶತವಿಧವು
ಅದರೊಳೊಂದನು ನೂರು ಭಾಗವ ಮಾಡಲು ಎಂತಿಹುದೋ
ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ
ತೃಣಾಂತ ಜೀವರೊಳಧಿಕ ನ್ಯೂನತೆಯಿಲ್ಲವು ಎಂದಿಗೂ ಜೀವ ಪರಮಾಣು||7||

ಜೀವನ ಅಂಗುಷ್ಠ ಆಗ್ರಾ ಮೂರುತಿ ಜೀವನ ಅಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು
ಎವಮಾದಿ ಅನಂತ ರೂಪದಿ ಯಾವತ್ ಅವಯವಗಳೊಳು ವ್ಯಾಪಿಸಿ ಕಾವ
ಕರುಣಾಳುಗಳ ದೇವನು ಈ ಜಗತ್ರಯವ||8||

ಬಿಂಬ ಜೀವ ಅಂಗುಷ್ಠ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂಕ್ಷ್ಮ ಅಂಬರದಿ
ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ
ಎಂಬರು ಈತಗೆ ಕೋವಿದರು ವಿಶ್ವಂಭರಾತ್ಮಕ ಪ್ರಾಜ್ಞ
ಭಟಕ ಕುಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು||9||

ಪುರುಷನಾಮಕ ಸರ್ವ ಜೀವರೊಳಿರುವ ದೇಹ ಆಕಾರ ರೂಪದಿ
ಕರುಣ ನಿಯಾಮಕ ಹೃಷೀಕಪನು ಇಂದ್ರಿಯಂಗಳಲಿ
ತುರಿಯ ನಾಮಕ ವಿಶ್ವ ತಾ ಹನ್ನೆರಡು ಬೆರಳುಳಿದು ಉತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವರಿಯಾ ನಾಡಿಯೊಳಗಿಪ್ಪ||10||

ವ್ಯಾಪಕನು ತಾನಾಗಿ ಜೀವ ಸ್ವರೂಪ ದೇಹದ ಒಳಹೊರಗೆ ನಿರ್ಲೇಪನು ಆಗಿಹ
ಜೀವಕೃತ ಕರ್ಮಗಳನು ಆಚರಿಸಿ
ಶ್ರೀ ಪಯೋಜಭವ ಈರರಿಂದ ಪ್ರದೀಪವರ್ಣ ಸ್ವಮೂರ್ತಿ ಮಧ್ಯಗ ತಾ ಪೊಳೆವ
ವಿಶ್ವಾದಿ ರೂಪದಿ ಸೇವೆ ಕೈಕೊಳುತ||11||

ಗರುಡ ಶೇಷ ಭವಾದಿ ನಾಮವ ಧರಿಸಿ ಪವನ
ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ
ಸರಸಿಜಾಸನ ವಾಣಿ ಭಾರತಿ ಭರತನಿಂದ ಒಡಗೂಡಿ
ಲಿಂಗದಿ ಇರುತಿಹನು ಮಿಕ್ಕ ಆದಿತೇಯರಿಗೆ ಇಲ್ಲವು ಆಸ್ಥಾನ||12||

ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಚೆಯಲಿ
ಕೇವಲ ಜಡ ಪ್ರಕೃತಿಯಿದಕೆ ಅಧಿದೇವತೆಯು ಮಹಾಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು||13||

ಆರಧಿಕ ದಶಕಳೆಗಳು ಉಳ್ಳ ಶರೀರವು ಅನಿರುದ್ಧಗಳ ಮಧ್ಯದಿ ಸೇರಿ ಇಪ್ಪದು
ಜೀವ ಪರಮಾಚ್ಚಾದಿಕ ದ್ವಯವು
ಬಾರದಂದದಿ ದಾನವರನು ಅತಿ ದೂರಗೈಸುತ ಶ್ರೀಜನಾರ್ಧನ
ಮೂರು ಗುಣದೊಳಗಿಪ್ಪನು ಎಂದಿಗು ತ್ರಿವೃತುಯೆಂದೆನಿಸಿ||14||

ರುದ್ರ ಮೊದಲಾದ ಅಮರರಿಗೆ ಅನಿರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರು ಅಲ್ಲಿಂದ ಇತ್ತ ಸ್ಥೂಲದಲಿ ಕ್ರುದ್ಧ ಅಖಿಲ ದಿವಿಜರು
ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸಮೃದ್ಧಿಗಳನು
ಆಚರಿಸುವರು ಪ್ರಾಣೇಶನ ಆಜ್ಞೆಯಲಿ||15||

ಮಹಿಯೊಳಗೆ ಸುಕ್ಷೇತ್ರ ತೀರ್ಥವು ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕ ತ್ರಯ ಧರ್ಮಕರ್ಮಗಳ
ದ್ರುಹಿಣ ಮೊದಲಾದ ಅಮರರು ಎಲ್ಲರ ವಹಿಸಿಸ್ ಗುಣಗಳನು ಅನುಸರಿಸಿ
ಸನ್ನಿಹಿತರು ಆಗಿದ್ದು ಎಲ್ಲರೊಳು ಮಾಡುವರು ವ್ಯಾಪಾರ||16||

ಕೇಶ ಸಾಸಿರ ವಿಧ ವಿಭಾಗವಗೈಸಲು ಎನತು ಅನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದು ಈ ದೇಹಮಧ್ಯದಲಿ
ಆ ಸುಷುಮ್ನಕೆ ವಜ್ರಕಾರ್ಯ ಪ್ರಕಾಶಿನೀ ವೈದ್ಯುತಿಗಳಿಹವು
ಪ್ರದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ||17||

ಆ ನಳಿನ ಭವ ನಾಡಿಯೊಳಗೆ ತ್ರಿಕೋಣ ಚಕ್ರವು ಇಪ್ಪುದು
ಅಲ್ಲಿ ಕೃಶಾನು ಮಂಡಲ ಮಧ್ಯಗನು ಸಂಕರುಷಣ ಆಹ್ವಯನು
ಹೀನ ಪಾಪಾತ್ಮಕ ಪುರುಷನ ದಹಾನ ಗೈಸುತ ದಿನದಿನದಿ
ವಿಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣಿ||18||

ಮಧ್ಯ ನಾಡಿಯ ಮಧ್ಯದಲಿ ಹೃತ್ಪದ್ಮ ಮೂಲದಿ ಮೂಲಪತಿ ಪದಪದ್ಮ
ಮೂಲದಲಿ ಇಪ್ಪ ಪವನನ ಪಾದಮೂಲದಲಿ ಹೊಂದಿಕೊಂಡಿಹ ಜೀವ
ಲಿಂಗಾನಿರುದ್ಧ ದೇಹ ವಿಶಿಷ್ಟನಾಗಿ
ಕಪರ್ದಿ ಮೊದಲಾದ ಅಮರರು ಎಲ್ಲರು ಕಾದುಕೊಂಡಿಹರು||19||

ನಾಳ ಮಧ್ಯದಲಿ ಇಪ್ಪ ಹೃತ್ಕೀಲಾಲಜದೊಳಿಪ್ಪ ಅಷ್ಟದಳದಿ
ಕುಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು
ಕಾಲ ಕಾಲಗಳಲ್ಲಿ ಯೆಣ್ದೆಸೆ ಪಾಲಕರ ಕೈಸೇವೆಗೊಳುತ ಕೃಪಾಳು
ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ||20||

ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನ ಅರ್ದನ ಅಮಲ ಜಲಾಶಯ ಆಲಯ
ಹಯವದನ ಶ್ರೀಕಪಿಲ ನರಸಿಂಹ
ಈ ಸುರೂಪದಿ ಅವರವರ ಸಂತೋಷ ಬಡಿಸುತ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನು ಎಂದೆನಿಸಿ||21||

ಸುರಪನ ಆಲಯಕೆ ಐದಿದರೆ ಮನವು ಎರಗುವುದು ಸತ್ಪುಣ್ಯ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರೆ ಆಲಸ್ಯ ಹಸಿ ತೃಷೆಯು
ತರಣಿ ತನಯ ನಿಕೇತನದಿ ಸಂಭರಿತ ಕೋಪಾಟೋಪ ತೋರುವುದು
ಅರವಿದೂರನು ನಿರ್ಋತಿಯಲಿರೆ ಪಾಪಗಳ ಮಾಳ್ಪ||22||

ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ
ಹಿಮಕರ ಧನಾಧಿಪರಲ್ಲಿ ಧರ್ಮದ ಜನಿಸುವುದು
ಹರನ ಮಂದಿರದಲ್ಲಿ ಗೋ ಧನ ಧರಣಿ ಕನ್ಯಾದಾನಗಳು
ಒಂದರಘಳಿಗೆ ತಡೆಯದಲೇ ಕೊಡುತಿಹ ಚಿತ್ತ ಪುಟ್ಟುವುದು||23||

ಹೃದಯದೊಳಗೆ ವಿರಕ್ತಿ ಕೇಸರಕೆ ಒದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬಾರೆ ಜಾಗ್ರತೆಯು ಪುಟ್ಟುವುದು
ಸುದರುಶನ ಮೊದಲಾದ ಅಷ್ಟ ಆಯುಧವ ಪಿಡಿದು
ದಿಶಾಧಿಪತಿಗಳ ಸದನದಲಿ ಸಂಚರಿಸುತ ಈಪರಿ ಬುದ್ಧಿಗಳ ಕೊಡುವ||24||

ಸೂತ್ರನಾಮಕ ಪ್ರಾಣಪತಿ ಗಾಯತ್ರಿ ಸಂಪ್ರತಿಪಾದ್ಯನು ಆಗಿ ಈ ಗಾತ್ರದೊಳು ನೆಲೆಸಿರಲು
ತಿಳಿಯದೆ ಕಂಡ ಕಂಡಲ್ಲಿ ಧಾತ್ರಿಯೊಳು ಸಂಚರಿಸಿ
ಪುತ್ರ ಕಳತ್ರ ಸಹಿತ ಅನುದಿನದಿ
ತೀರ್ಥಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು||25||

ನಾರಸಿಂಹ ಸ್ವರೂಪದೊಳಗೆ ಶರೀರ ನಾಮದಿ ಕರೆಸುವನು
ಹದಿನಾರು ಕಳೆಗಳು ಉಳ್ಳ ಲಿಂಗದಿ ಪುರುಷ ನಾಮಕನು
ತೋರುವನು ಅನಿರುದ್ಧದೊಳು ಶಾಂತೀರಮಣ ಅನಿರುದ್ಧ ರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು||26||

ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜನವು ಅಸ್ಥಿಗಳು
ಇದರೊಳಗೆ ಏಕ ಊನ ಪಂಚಾಶತ್ ಮರುದ್ಗಣವು
ನಿಧನ ಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತ
ಒಂಭತ್ತಧಿಕ ನಾಲ್ವತ್ತು ಎನಿಪ ರೂಪದಿ ಧಾತುಗಳೊಳಿಪ್ಪ||27||

ಸಪ್ತಧಾತುಗಳ ಒಳ ಹೊರಗೆ ಸಂತಪ್ತ ಲೋಹಗತ ಅಗ್ನಿಯಂದದಿ
ಸಪ್ತ ಸಾಮಗನು ಇಪ್ಪ ಅನ್ನಮಯಾದಿ ಕೋಶದೊಳು
ಲಿಪ್ತನಾಗದೆ ತತ್ತತ್ತಾಹ್ವಯ ಕ್ಲುಪ್ತಭೋಗವ ಕೊಡುತ
ಸ್ವಪ್ನ ಸುಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ||28||

ತೀವಿಕೊಂಡಿಹವು ಅಲ್ಲಿ ಮಜ್ಜ ಕಳೇವರದಿ ಅಂಗುಳಿಯ ಪರ್ವದ ಟಾವಿನಲಿ
ಮುನ್ನೂರು ಅರವತ್ತು ಎನಿಪ ತ್ರಿಸ್ಥಳದಿ
ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ
ದೇವತೆಗಳ ಒಡಗೂಡಿ ಕ್ರೀಡಿಸುವನು ರಮಾರಮಣ||29||

ಕೀಟ ಪೇಶಸ್ಕಾರ ನೆನವಿಲಿ ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನು ಐದಿಯಾಡುವ ತೆರದಿ
ಭಕುತಿಯಲಿ ಕೈಟಭಾರಿಯ ಧ್ಯಾನದಿಂದ ಭವಾಟವಿಯನು ಅತಿ ಶೀಘ್ರದಿಂದಲಿ ದಾಟಿ
ಸಾರೂಪ್ಯವನು ಐದುವರು ಅಲ್ಪ ಜೀವಿಗಳು||30||

ಈ ಪರೀ ದೇಹದೊಳು ಭಗವದ್ರೂಪಗಳ ಮರೆಯದಲೆ ಮನದಿ
ಪದೊಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ
ಗೋಪತಿ ಜಗನ್ನಾಥ ವಿಠಲ ಸಮೀಪಗನು ತಾನಾಗಿ
ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ||31||
*******

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

hariye pancASadvarNa susvaravu udAttAnudAtta pracaya
svarita sandhi visarga bindugaLoLage tadvAcya iruva
tannAma rUpagaLaritu upAsanegaivaru iLeyoLu
surare sari nararalla avaru ADuvudE vEdArtha||1||

ISanali vij~jAna BagavaddAsarali sadBakti viShaya nirASe
mithyA vAdadali pradvESha nityadali I samasta prANigaLali
ramESanu ihanendu aridu avara aBilAShegaLa pUraisuvude
mahAyaj~je haripUje||2||

tridaSa EkAtmakanu enisi BU udaka SiKiyoLu hattu karaNadi
adhiparu enisuva muKya prANa AdityaroLu nelesi
viditanAgiddu anavarata niravadhika mahimanu
sakala viShayava nidhana nAmaka sankaruShaNa ahvayanu svIkaripa||3||

daihika daiSika kAlikatraya gahana karmagaLunTu
idaroLu vihita karmagaLaritu niShkAmakanu nInAgi
bRuhati nAmaka BAratISana mahitarUpava nenedu manadali
ahar ahar Bagavantagarpisu parama Bakutiyali||4||

mUruvidha karmagaLa oLage kaMsAri BArgava hayavadana
saMprErakanu tAnAgi navarUpangaLanu dharisi
sUri mAnava dAnavaroLu vikAra SUnyanu mADi mADisi
sAraBOktanu svIkarisi koDuta ippa jIvarige||5||

anaLa pakvava gaisida annava anaLanoLu hOmisuva teradante
animiSEShanu mADi mADisidaKiLa karmagaLa manavacana kAyadali tiLidu
anudinadi koDu Sankisade vRujina ardana
sadA kaikoMDu santaisuvanu tannavara||6||

kudure bAlada koneya kUdalu tudi viBAgava mADi Satavidhavu
adaroLondanu nUru BAgava mADalu entihudO
vidhi BavAdi samasta divijara modalu mADi
tRuNAnta jIvaroLadhika nyUnateyillavu endigU jIva paramANu||7||

jIvana aMguShTha AgrA mUruti jIvana aMguTa mAtra mUruti
jIvana prAdESa jIvAkAra mUrtigaLu
evamAdi anaMta rUpadi yAvat avayavagaLoLu vyApisi kAva
karuNALugaLa dEvanu I jagatrayava||8||

biMba jIva anguShTha mAtradi iMbugoMDiha sarvaroLu sUkShma aMbaradi
hRutkamala madhya nivAsiyendenisi
eMbaru Itage kOvidaru viSvaMBarAtmaka prAj~ja
BaTaka kuTuMbi santaisuvanu I pari balla Bajakaranu||9||

puruShanAmaka sarva jIvaroLiruva dEha AkAra rUpadi
karuNa niyAmaka hRuShIkapanu indriyangaLali
turiya nAmaka viSva tA hanneraDu beraLuLidu uttamAngadi
eraDadhika eppattu sAvariyA nADiyoLagippa||10||

vyApakanu tAnAgi jIva svarUpa dEhada oLahorage nirlEpanu Agiha
jIvakRuta karmagaLanu Acarisi
SrI payOjaBava Irarinda pradIpavarNa svamUrti madhyaga tA poLeva
viSvAdi rUpadi sEve kaikoLuta||11||

garuDa SESha BavAdi nAmava dharisi pavana
svarUpa dEhadi karaNa niyAmakanu tAnAgippa hariyante
sarasijAsana vANi BArati Barataninda oDagUDi
lingadi irutihanu mikka AditEyarige illavu AsthAna||12||

jIvanake tuShadante lingavu sAvakASadi pondi suttalu
prAvaraNa rUpadali ippudu Bagavadicceyali
kEvala jaDa prakRutiyidake adhidEvateyu mahAlakumiyenipaLu
A virajeya snAna pariyantaradi hattihudu||13||

Aradhika daSakaLegaLu uLLa SarIravu aniruddhagaLa madhyadi sEri ippadu
jIva paramAccAdika dvayavu
bAradandadi dAnavaranu ati dUragaisuta SrIjanArdhana
mUru guNadoLagippanu endigu trivRutuyendenisi||14||

rudra modalAda amararige aniruddha dEhave maneyenisuvudu
iddu kelasava mADaru allinda itta sthUladali kruddha aKila divijaru
paraspara spardheyiMdali dvandva karma samRuddhigaLanu
Acarisuvaru prANESana Aj~jeyali||15||

mahiyoLage sukShEtra tIrthavu tuhina varuSha vasantakAladi
dahika daiSika kAlika traya dharmakarmagaLa
druhiNa modalAda amararu ellara vahisis guNagaLanu anusarisi
sannihitaru Agiddu ellaroLu mADuvaru vyApAra||16||

kESa sAsira vidha viBAgavagaisalu enatu anitiha suShumnavu
A SirAntadi vyApisihudu I dEhamadhyadali
A suShumnake vajrakArya prakASinI vaidyutigaLihavu
pradESadali paScimake uttara pUrva dakShiNake||17||

A naLina Bava nADiyoLage trikONa cakravu ippudu
alli kRuSAnu maMDala madhyaganu saMkaruShaNa Ahvayanu
hIna pApAtmaka puruShana dahAna gaisuta dinadinadi
vij~jAnamaya SrIvAsudEvana aidisuva karuNi||18||

madhya nADiya madhyadali hRutpadma mUladi mUlapati padapadma
mUladali ippa pavanana pAdamUladali hondikonDiha jIva
lingAniruddha dEha viSiShTanAgi
kapardi modalAda amararu ellaru kAdukonDiharu||19||

nALa madhyadali ippa hRutkIlAlajadoLippa aShTadaLadi
kulAla cakrada teradi carisuta haMsanAmakanu
kAla kAlagaLalli yeNdese pAlakara kaisEvegoLuta kRupALu
avaraBilAShegaLa pUraisi koDutippa||20||

vAsavAnuja rENukAtmaja dASarathi vRujina ardana amala jalASaya Alaya
hayavadana SrIkapila narasiMha
I surUpadi avaravara santOSha baDisuta nitya suKamaya
vAsavAgiha hRutkamaladoLu biMbanu endenisi||21||

surapana Alayake aididare manavu eraguvudu satpuNya mArgadi
baralu vahniya manege nidre Alasya hasi tRuSheyu
taraNi tanaya nikEtanadi saMBarita kOpATOpa tOruvudu
aravidUranu nir^^Rutiyalire pApagaLa mALpa||22||

varuNanalli vinOda hAsyavu marutanoLu gamanAgamana
himakara dhanAdhiparalli dharmada janisuvudu
harana mandiradalli gO dhana dharaNi kanyAdAnagaLu
oMdaraGaLige taDeyadalE koDutiha citta puTTuvudu||23||

hRudayadoLage virakti kEsarake odage svapna suShupti lingadi
madhuha karNikeyalli bAre jAgrateyu puTTuvudu
sudaruSana modalAda aShTa Ayudhava piDidu
diSAdhipatigaLa sadanadali sancarisuta Ipari buddhigaLa koDuva||24||

sUtranAmaka prANapati gAyatri sampratipAdyanu Agi I gAtradoLu nelesiralu
tiLiyade kanDa kanDalli dhAtriyoLu sancarisi
putra kaLatra sahita anudinadi
tIrthakShEtra yAtreya mADidevu endenuta higguvaru||25||

nArasiMha svarUpadoLage SarIra nAmadi karesuvanu
hadinAru kaLegaLu uLLa lingadi puruSha nAmakanu
tOruvanu aniruddhadoLu SAntIramaNa aniruddha rUpadi
prErisuva pradyumna sthUla kaLEvaradoLiddu||26||

modalu tvakcarmagaLu mAMsavu rudhira mEdO majjanavu asthigaLu
idaroLage Eka Una pancASat marudgaNavu
nidhana hiMkArAdi sAmaga adara nAmadi karesuta
oMBattadhika nAlvattu enipa rUpadi dhAtugaLoLippa||27||

saptadhAtugaLa oLa horage santapta lOhagata agniyandadi
sapta sAmaganu ippa annamayAdi kOSadoLu
liptanAgade tattattAhvaya kluptaBOgava koDuta
svapna suShupti jAgrateyIva taijasa prAj~ja viSvAKya||28||

tIvikonDihavu alli majja kaLEvaradi anguLiya parvada TAvinali
munnUru aravattu enipa tristhaLadi
sAvirada eMBattu rUpava kOvidaru pELuvaru dEhadi
dEvategaLa oDagUDi krIDisuvanu ramAramaNa||29||

kITa pESaskAra nenavili kITa BAvava toredu tadvat
KETa rUpavanu aidiyADuva teradi
Bakutiyali kaiTaBAriya dhyAnadinda BavATaviyanu ati SIGradindali dATi
sArUpyavanu aiduvaru alpa jIvigaLu||30||

I parI dEhadoLu BagavadrUpagaLa mareyadale manadi
padopadE Bakutiyali smarisutalippa BakutaranA
gOpati jagannAtha viThala samIpaganu tAnAgi
santata sAparOkShiya mADi porevanu ella kAladali||31||
*************

No comments:

Post a Comment