Sunday 8 December 2019

ಕಮಲಾ ಕಮಲಾಸನದಿಂದೊಪ್ಪುವ vijaya vittala ankita suladi ವೆಂಕಟೇಶನ ಉದರ ಸುಳಾದಿ KAMALA KAMALASANADIDOPPUVA VENKATESHA UDARA SULADI

Audio by Mrs. Nandini Sripad
 

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವೆಂಕಟೇಶನ ಉದರ ಸುಳಾದಿ 


 ರಾಗ ಬೇಹಾಗ್ 


 ಧ್ರುವತಾಳ 


ಕಮಲಾ ಕಮಲಾಸನದಿಂದೊಪ್ಪುವ ಪೊಕ್ಕ -

ಳಮಲವಾಗಿ ಮೆರೆವ ಬಲುಕಾಂತಿಯಾದ ಉದರ 

ಸಮ ವಿಷಮವಿಲ್ಲದೆ ನೋಳ್ಪರ ಕಂಗಳಿಗೆ 

ಸಮತಳವಾಗಿ ವಿರಾಜಿಸುವ ಉದರ 

ಶಮದಮವಾನಂತ ಗುಣಪರಿಪೂರ್ಣವಾದ 

ಪ್ರಮೆಗಳು ತುಂಬಿದ ಕಲುಷಹರ ಉದರ 

ದಮುನಾಮ ನಮ್ಮ ವಿಜಯವಿಟ್ಠಲೇಶನ 

ನಮಿಸಿದವರ ಮನಕೆ ಬೆಡಗುತೋರುವ ಉದರ ॥ 1 ॥


 ಮಟ್ಟತಾಳ 


ಕುವರತನದಲ್ಲಿರೆ ವಡಲ ವಳಗೆ 

ಅವನಿಯನ್ನು ಸವರಿದ ಉದರ

ಪವಳತಿ ಮಾಣಿಕ ನವ ಮೌಕ್ತಿಕ ಹಾರ 

ರವಿಯಂದದಲಿ ತೂಗುವ ಶೃಂಗಾರುದರ 

ನಿವರ್ತಾತ್ಮಾ ನಾಮಾ ವಿಜಯವಿಟ್ಠಲರೇಯಾ 

ಭುವನತ್ರಯದೊಳಗೆ ಧವಳವರ್ಣ ಉದರ ॥ 2 ॥


 ತ್ರಿವಿಡಿತಾಳ 


ಗುಣತ್ರಯಗಳ ಬಿಡದೆ ಪೊಂದಲಿಟ್ಟಾ ಉದರ 

ಗಣನೆಯಿಲ್ಲದ ಜೀವರಾಶಿಗಳಿದ್ದುದರ 

ಅನುವರಿತು ವೇದಗಳು ಸ್ತುತಿಸಿ ಕಾಣದ ಉದರ 

ಮುನಿಗಳ ಮತಿಗೀಗ ನಿಲಕಾದಿಪ್ಪ ಉದರ 

ಜನನಿ ಗೋಪಿಗೆ ಒಳಗೆ ಲೋಕಾ ತೋರಿದ ಉದರ 

ಅನಿಮಿಷರು ನೋಡಿ ಬೆರಗು ಬೀಳುವ ಉದರ 

ಗುಣಸಾಂದ್ರ ಸಪ್ತೈಧಾ ವಿಜಯವಿಟ್ಠಲರೇಯ 

ಮಣಿಕಾಂಚನದಂತೆ ಮಿನಗುವ ಚಲುವ ಉದರ ॥ 3 ॥


 ಅಟ್ಟತಾಳ 


ಎಂದಿಗೆಂದಿಗೆ ಕ್ಷುಧಾರಹಿತವಾದ ಉದರ 

ಗಂಧಕುಸುಮದಿಂದ ಪೂಜೆಗೊಂಬ ಉದರ 

ಒಂದೊಂದು ರೀತಿಯಲಿ ಬೆಳಕಾಗುವ ಉದರ 

ಮಂದಮತಿಗೆ ಜ್ಞಾನವನೀವ ಉದರ 

ಅಂದು ಪರ್ವತ ಪೊತ್ತು ಮೃದುವಾದ ಉದರ 

ತಂದರ್ಪಿಸಿದ ಮಿತಾಶನದ ಉದರ 

ಸುಂದರ ಶ್ರೀರಂಗ ವಿಜಯವಿಟ್ಠಲ ನಿನ್ನ 

ಚಂದಾದ ತ್ರಿವಳಿ ಎಸೆವಂಥ ಉದರ ॥ 4  ॥


 ಆದಿತಾಳ 


ಜೊಲ್ಲು ಜೊಲ್ಲು ಸುರಿವಧಾರಿಯಲ್ಲಿ ಶೋಭಿಸುವ ಉದರ 

ಸಲ್ಲಲಿತವಾದ ಭಕ್ತರೆಲ್ಲರಭೀಷ್ಟೆಯ ಉದರ 

ಕಲ್ಲಿಬೋನಾ ಸವಿದು ಸವಿದು ಡೊಳ್ಳು ಬೆಳಿಸಿಕೊಂಡ ಉದರ 

ಬಲ್ಲಿದ ನಾಮಾ ವಿಜಯವಿಟ್ಠಲ ಕರ್ತೃವಿನ ಉದರ ॥ 5 ॥


 ಜತೆ 


ಅನಂತಜಾಂಡದೊಳಗೆ ಬದಕುಮಾಡುವ ಉದರ 

ಅನಂತ ವಿಜಯವಿಟ್ಠಲರೇಯನ ಉದರ ॥

********


No comments:

Post a Comment