Saturday, 28 December 2019

ರಥದಿಂದ ರಥಕೆ ಬಾರೋ ankita gurugopala vittala ವೆಂಕಟೇಶ ಸ್ತೋತ್ರ RATHIDINDA RATHAKE BAARO VENKATESHA STOTRA

Audio by Mrs. Nandini Sripad

ಶ್ರೀ ಗುರುಗೋಪಾಲವಿಠಲದಾಸರ ಕೃತಿ 

 ದೇಹಾಖ್ಯರಥ - ಅಧ್ಯಾತ್ಮ ಪ್ರಮೇಯ 
 ಶ್ರೀ ವೆಂಕಟೇಶದೇವರ ಸ್ತೋತ್ರ 

 ರಾಗ ಮೋಹನ              ಆದಿತಾಳ 

ರಥದಿಂದ ರಥಕೆ ಬಾರೋ ಹರಿಯೇ । ಸುರರಿಗೆ ಸಿಂಧು ।
ಮಥಿಸಿ ಪೀಯೂಷವನಿತ್ತ ಧೊರಿಯೆ । ಶಂಖ ಗದಾಬ್ಜ ।
ರಥಾಂಗಧಾರಿ ದುರಿತ ಗಜಕೇಸರಿಯೇ । ಲೋಕಮೋಹಕ ।
ಮನ್ಮಥನಯ್ಯ ನಿನಗಾರು ಸರಿಯೆ। ಸೌಭಾಗ್ಯದ ಸಿರಿಯೇ ॥ ಪ ॥
ಪೃಥುವಿಕ್ರಮ ದಶರಥ ನೃಪಸುತ ಜಯ ।
ದ್ರಥರಿಪು ಸಖ ಹರಿ ಪ್ರಥಮಾಂಗನಯ್ಯ ॥ ಅ ಪ॥

ಆರು ಮೂರು ದ್ವಾರದ ಪುರದಲ್ಲಿ । ನಾಡಿ ವನದೊಳಗೆ ।
ವಾರಿಜಾತ್ಮಕ ಚಿತ್ರಬೀದಿಯಲಿ । ಮಂಡಿತ ಕಲ್ಪ ।
ಭೂರುಹ ನೆಳಲಿನ ತಂಪಿನಲ್ಲಿ । ನವರತ್ನ ಖಚಿತ ।
ನೂರು ಸ್ತಂಭದ ತೇರಿಪ್ಪುದಲ್ಲಿ । ಚಾಮೀಕರ ಪಲ್ಲವ ॥
ತೋರಣ ಮೌಕ್ತಿಕ ಹಾರ ಚಂಪಕ ಮಂ - ।
ದಾರ ಕುಸುಮಹಾರ ವಾರದಿಂದೊಪ್ಪಲು ।
ಧೀರ ಶೇಷಮಯ ವೀರಪೀಠದಿ ನಿನ್ನ ।
ನಾರೇರಿಂದೊಪ್ಪುತ ಮೂರುತಿ ಮುದದಿ ॥ 1 ॥

ಛತ್ರ ಚಾಮರ ಧ್ವಜ ಹಾವಿಗೆಯು । ಕಾಳಂಜಿ ದರ್ಪಣ ।
ವೇತ್ರಾದಿ ಉಪಸ್ಕರ ಬಹುಪರಿಯು । ಧರಿಸಿದ ಬ್ರಹ್ಮ ।
ಸೂತ್ರ ತ್ರಿನೇತ್ರಾಹಿ ಖಗಪತಿಯು । ಸ್ಮರಸುರಪ ತಮ ತಮ್ಮ ।
ಪತ್ನೇರಿಂದೊಪ್ಪುತ ಸೇವಿಪ ಸಿರಿಯು । ದಿಕ್ಪಾಲಕ ತತಿಯು ॥
ಮಿತ್ರ ಉಡುಪ ವೀತಿ ಹೋತ್ರ ಮಂಡಲವಪ್ಪೆ ।
ಅತ್ರಿ ಪ್ರಮುಖ ವಿಧಿ ಪುತ್ರ ಪೌತ್ರ ಬ್ರಹ್ಮ ।
ಸೂತ್ರ ತ್ರಯೀಯಿಂದ ಸ್ತೋತ್ರ ಮಾಡುತಲಿರೆ ।
ಚಿತ್ರ ವಿಚಿತ್ರ ಚರಿತ್ರ ಸುಗಾತ್ರ ॥ 2 ॥

ಮೊರೆವ ಭೇರಿ ವೀಣೆ ಮೃದಂಗ । ಕಂಸಾಳೆ ಶಂಖ ।
ಬಿರಿದೀನ ಕಾಳೆ ವಾದ್ಯದ ಸಂಘ । ಮತ್ತೇಭ ಪದಾತಿ ।
ತುರಗ ಶ್ಯಂದನಾದಿ ಚತುರಂಗ । ಸೇನ ಸೇನಾಧಿಪ ।
ಪರಿಚ್ಯಾರ ಜನ ಸತ್ಸಭ ಸಪ್ತಾಂಗ । ಊರ್ವಶಿ ಮೇನಕಿ ಅ -॥
ಪ್ಸರರು ಕುಣಿಯೆ ತುಂಬುರು ನಾರದ ಪಾಡೆ ।
ಸುರನದಿ ಮೊದಲಾದ ಸರಿತರಾರತಿಯನು ।
ಧರಿಸಿ ಮಂಗಳಪಾಠಕರು ಜಯಜಯವೆನೆ ।
ಪರಮಪುರುಷ ಮುರಹರ ಶಿರಿವರದನೆ ॥ 3 ॥

ಸ್ಥಿತ್ವಾ ಗ್ರಾಹಕ ಗತ್ವಾ ಗ್ರಾಹಕವು । ಹೃಷಿಕಾತ್ಮಕ ಹತ್ತು ।
ಉತ್ತುಮ ಹಯದಿಂದ್ಯೊಜಿತ ರಥವು । ತತ್ವೇಶರ ಬೆರದು ।
ಚೈತ್ಯಾಸಾರಥಿ ತುರ್ಯಾತ್ಮಕ ಧ್ವಜವು । ಮನವೆಂಬೊ ನಿಶಿತ ।
ಸೂತ್ರ ತ್ರಿವಿಧ ಕರ್ಮಾತ್ಮಕ ಕಶವು । ಯೋಗ್ಯತಿ ಧನುಶರ ಇಚ್ಛಾ ॥
ಸತ್ಯಮಹಿಮ ಎನ್ನ ಚಿತ್ತವೃತ್ತಿಗಳೆಂಬ ।
ಚಿತ್ರವೀಥಿಗಳಲ್ಲಿ ನಿತ್ಯ ಸಂಚರಿಸುತ್ತ ।
ಮತ್ತದೈತ್ಯರ ಚಮು ತತ್ತರಿದವರ ಸು - ।
ವಿತ್ತ ಶೆಳದು ನಿಜ ಭಕ್ತರಿಗೀವುತ ॥ 4 ॥

ಅತಿಸೂಕ್ಷ್ಮ ವಿಸ್ತಾರ ಕಾಮರೂಪ । ರಥದಲ್ಲಿ ಅಪರಿ - ।
ಮಿತ ಬಹು ಪರಿಪರಿ ನಿನ್ನ ರೂಪ । ರಮೆಯಿಂದ ಬೆರೆದು ।
ಸತತ ರಮಿಸುವ ಸುಪ್ರತಾಪ । ಎನಗೊಲಿದು ಮುದದಿ ।
ಅತಿವೇಗ ವೋಡಿಸು ಸಂತಾಪ । ಸುಜನಾಬ್ಜಕೆ ದಿನಪ ॥
ಹಿತ ಗತಿಪ್ರದ ಗುರುಗೋಪಾಲವಿಠಲ ।
ಕ್ಷಿತಿಯೊಳಗಹಿ ಪರ್ವತ ಮಂದಿರ ಶ್ರೀ ।
ಪತಿಯೆ ಎನ್ನ ಅಘ ತತಿಗಳೆಣಿಸದಲೆ ।
ಪತಿತಪಾವನ ಮಾರುತಿನುತ ವಿತತ ॥ 5 ॥
********

*********

No comments:

Post a Comment