Friday 27 December 2019

ಕರುಣಸಾಗರರ ನೋಡಿದೆಯಾ ಮಹಾ ಪುರುಷ ankita indiresha KARUNASAAGARARA NODIDEYAA MAHAA PURUSHA APPAVARA STUTIH

Audio by Mrs. Nandini Sripad

ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ರಾಮಾಚಾರ್ಯರು ರಚಿಸಿದ ಕೃತಿ 
 ( ಇಂದಿರೇಶ ಅಂಕಿತ ) 

 ರಾಗ ತೋಡಿ                  ಆದಿತಾಳ 

ಕರುಣಾಸಾಗರರ ನೋಡಿದೆಯಾ , ಮಹಾ ।
ಪುರುಷರಿಗೊಂದಿಸಿ ವರವ ಬೇಡಿದೆಯಾ ॥ ಪ ॥
ಹರಿಭಕ್ತರಾಗ್ರಣಿಯ ಗುಣಗಳ ।
ಅರಿಯದವರು ಇವರನಾಡಿಕೊಂಡರೆ । 
ಕೊರತೆಯಾಗುವುದೇನು ಇಭರಾಮ - ।
ಪುರ ನಿಲಯ ಕೃಷ್ಣಾರ್ಯರ ॥ ಅ ಪ ॥

ಅವಾವ ಯೋಗಿಗಳವತಾರ ಎಂದು ।
ನಾ ವರ್ಣಿಸಲು ಪರಿಮಳ ಶರೀರ ।
ಸೇವಿಪ ಸುಜನ ಮಂದಾರ ತರು ।
ಪಾವನಾತ್ಮಕ ಪುಣ್ಯ ಪುರುಷ ಉದಾರ ॥
ಈ ವಿಧದ ಮಹಿಮೆಗಳು ಮ - ।
ತ್ತಾವ ನರರಿಗೆ ದೊರಕುವುದು ಶ್ರೀ - ।
ದೇವಿರಮಣ ಸಹಾಯದಿಂದ ಧ - ।
ರಾವಲಯದಿ ದಿಗ್ವಿಜಯ ಗೈಸಿದ ॥ 1 ॥

ಹರಿಯ ಧ್ಯಾನದೊಳಿದ್ದು ನಲಿವಾ ತನ್ನ ।
ಚರಣ ಸೇವಕರಿಗೆ ಸುಲಭದಿಂದೊಲಿವಾ ।
ದುರುಳ ದುಷ್ಕೃತಗಳಳಿವಾ ತನ್ನ - ।
ವರ ಸಮಯಕೆ ಸ್ವಪ್ನದಿ ಬಂದು ನಿಲುವಾ ॥
ಮರುತ ದೇವರು ಇವರ ಹೃನ್ಮಂ - ।
ದಿರದೊಳಗೆ ನೆಲೆಸಿ ನಿಜಾಭಿಮಾನದ - ।
ಲ್ಲಿರುವ ಕಾರಣದಿಂದಿವರ ಸಂ - ।
ದರುಶನವೇ ಸ್ವರ್ಗಾದಿ ಸಾಧನ ॥ 2 ॥

ದೋಷರಾಶಿಗಳೆಲ್ಲಾ ತರಿವಾ ತನ್ನ ।
ದಾಸ ಜನರಿಗೆ ಅಭೀಷ್ಠೆಯಗರೆವಾ ।
ತಾ ಸುರಿಸುತಾ ಸೌಖ್ಯಗರಿವಾ 
 ಇಂದಿರೇಶನ ಚರಣಾರಾಧಕರಾಗಿ ಮೆರೆವಾ ॥
ದೇಶ ದೇಶದಲ್ಲಿವರ ಕೀರುತಿ ।
ಸೂಸಿ ತುಂಬುವುದನ್ನು ತಿಳಿದು ನಿ - । 
ರ್ದೋಷಿಯಲಿ ಕುಹಕವನು ಕ - । 
ಲ್ಪಿಸಲಾಗುವುದರಿಂದವರಿಗೇನು ॥ 3 ॥
********

No comments:

Post a Comment