Friday 27 December 2019

ನಿನ್ನ ನಂಬಿದೆನೋ ಬ್ರಹ್ಮಣ್ಯ ankita narasimha vittala NINNA NAMBIDENO BRAHMANYA BRAHMANYA TEERTHA STUTIH


ಶ್ರೀ ನರಸಿಂಹದಾಸರ ಕೃತಿ 
( ಶ್ರೀ ಜಗನ್ನಾಥದಾಸರ ತಂದೆ )

 ರಾಗ ಕಲ್ಯಾಣವಸಂತ      ಆದಿತಾಳ 

ನಿನ್ನ ನಂಬಿದೆನೋ ಬ್ರಹ್ಮಣ್ಯತೀರ್ಥಾರ್ಯ ।
ಸನ್ನುತ ಚರಣ ಪಾವನ ಸುಚರ್ಯಾ ॥ ಪ ॥
ಘನ್ನ ಭವದ ಭಯವನ್ನು ಕಳೆದು ಯತಿ - ।
ರನ್ನ ಯೆನ್ನನು ಧನ್ಯನ ಮಾಡೋ ॥ ಅ ಪ ॥

ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ ।
ದುರಿತೌಘ ಜೀಮೂತ ಚಂಡ ಸಮೀರ ।
ಸುರರುಚಿ ತುಳಸೀ ಪಂಕಜಮಣಿ ಹಾರ ।
ಧರಿಸಿ ಮೆರೆವೋ ದಿನಕರನವತಾರ ।
ಕರುಣದಿ ತವ ಶ್ರೀಕರ ಚರಣಾಂಬುಜ ।
ದರುಶನವ ಕೊಡು ಗುಣಗಣ ನಿಧಿಯೇ ॥ 1 ॥

ಸೇವಿಪ ಜನರಿಗೆ ದೇವತರುವೆನಿಪ ।
ಶ್ರೀವಿಠ್ಠಲನ ಪಾದ ತಾವರೆ ಮಧುಪಾ ।
ಕೋವಿದ ಜನರು ಸಂಭಾವಿಸಿ ಸ್ತುತಿಪ ।
ಪಾವನ್ನ ಪಾದಾರ್ಚಿತ ಭಾವಜ ಮುನಿಪಾ ।
ಪಾವನ ಸುಮತನ ಜೀವರ ಚಂದ್ರನೆ ।
ಪಾವನ ಮತಿ ಕೊಡು ನೀ ಒಲಿದೆನಗೆ ॥ 2 ॥

ಹರಿಭಕ್ತಿ ವೈರಾಗ್ಯ ಪರತತ್ತ್ವಜ್ಞಾನ ।
ವರವ ಪಾಲಿಸು ಸರ್ವವಿದ್ಯಾ ಪ್ರವೀಣ ।
 ನರಸಿಂಹವಿಠ್ಠಲ ಶ್ರೀಹರಿ ಸನ್ನಿಧಾನ ।
ಕರುಣಾಪಾತ್ರನೇ ದಿವ್ಯವರ ಪೂರ್ಣ ಜ್ಞಾನ ।
ಹರಿಗುರು ಭಜನ ತ್ವತ್ಪದ ವ್ಯಾಸಾರ್ಯರ ।
ಗುರುವೆಂದೆನಿಸಿದೆ ಧರೆಯೊಳು ಮೆರೆದೆ ॥ 3 ॥
********

"ನಿನ್ನ ನಂಬಿದೆನೋ ಶ್ರೀಬ್ರಹ್ಮಣ್ಯತೀರ್ಥಾರ್ಯ...."
ರಚನೆ : ಶ್ರೀನರಸಿಂಹದಾಸರು(1685-1765)


No comments:

Post a Comment