Friday, 6 December 2019

ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ purandara vittala

ರಾಗ ಆನಂದಭೈರವಿ ಆದಿತಾಳ

ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ
ಹೀಗೆ ದಿನಂಗಳೆಂದಳೆದವನು ||ಪ||
ರಾಗದಿಂದಲಿ ಭಾಗವತರಿಗೆ
ಬಾಗದೆ ಶಿರ ಹೋಗುವಾತನ ||ಅ.ಪ||

ಅರುಣ ಉದಯಲೆದ್ದು ಹರಿಯ ನೆನೆಯದೆ ಗೊಡ್ಡು ಹರಟೆಗೆ ಹೊತ್ತು ಏರಿಸಿದವನ
ಸಿರಿತುಳಸಿಗೆ ನೀರೆರೆದು ನಿರಂತರ ಮೃತ್ತಿಕೆ ಫಣೆಯಲಿ ಧರಿಸದವನ
ಮರೆತು ಪ್ರಾತಃಸ್ನಾನ ಮಾಡದೆ ಮನೆಮನೆ ತೆರನಾಗಿ ಬೆಸಗೊಂಡು ತಿಂಬವನ
ವರಮಧ್ವಶಾಸ್ತ್ರದಲಿ ನಿಲಿಸದೆ ಬುದ್ಧಿಯ ನಿರತದಿ ಮತಿಹೀನನಾದವನ ||

ಗುರುಹಿರಿಯರ ಸೇವೆ ಜರೆದು ನಿರಂತರ ಪರನಿಂದೆ ಮಾಡಿ ನಗುತಿಪ್ಪನ
ಪರಹೆಣ್ಣು ಪರಹೊನ್ನು ಕರಗತವಾಯ್ತೆಂದು ಪರಲೋಕಭಯ ಬಿಟ್ಟು ತಿರುಗುವನ
ತರುಣಿ ಮಕ್ಕಳೆಂದು ವರಭಾಸದಲಿ ಬಂದು ಪರದೈವದಿಂದ ವಂಚನೆ ಕ್ಷುದ್ರಮಾಳ್ಪನ

ಉಣಲಿಲ್ಲ ಉಡಲಿಲ್ಲ ಮಾಡಿಲ್ಲ ಹರಿಸೇವೆ ಕೂಡಿಲ್ಲ ಸಾಧುಸಜ್ಜನರೊಡನೆ
ಕೊಡಲಿಲ್ಲ ದಾನ , ಪಡಲಿಲ್ಲ ಪುಣ್ಯ, ಕಡುಮೂರ್ಖವಿಷಯಲಲಿತನಾಗಿ
ಒಡೆಯ ಪುರಂದರವಿಠಲನ್ನ ಚರಣಕೆ ಅಡಿಗಡಿಗೆರಗದೆ ಕಡೆಗೆದೆ ಕೆಟ್ಟಂತೆಲ್ಲ ||
***

pallavi

hEge uddhAra mADyAnu shrI hari hEgE dinagaLendaLevananu

anupallavi

rAgadindali bhAgavatarige bAgade shira hOguvAtana

caraNam 1

aruNa udayadaleddu hariya neneyade goDDu haraTege hottu Eridavana
siri tuLasige nIreredu nirantara mrttige phaNeyali dharisadavana
maredu prAtah snAna mADade mane mane teranAgi besa goNDu dimbavana

caraNam 2

guru hariyara sEve jaredu nirantara para nindeya mADi nagutippana
para heNNu para honnu karagadavAitendu paralOka bhaya biTTu tiruguvana
taruNi makkaLendu vara bhAsadali bandu paradaivadinda vancane kSUdra mALpana

caraNam 3

uDalilla uNalilla mADilla hari sEve kUDilla sAdhu sajjanaroDane
koDalilla dAna baDalilla puNya kaDu mUrkha viSayalIlitanAgi oDeya
shrI purandara viTTalanna caraNage aDagaDigeragade kaDegedegeTTantella
***

No comments:

Post a Comment