Monday 1 November 2021

ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ purandara vittala BRAHMANDADOLAGE ARASI NODALU NAMMOORE VASI



ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ||ಪ||
ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು ||ಅ|

ಜನನ ಮರಣವಿಲ್ಲ, ಅಲ್ಲಿ, ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ, ಅನುಮಾನದ ಸೊಲ್ಲೇ ಇಲ್ಲ ||

ನಿದ್ರೆಯು ಅಲ್ಲಿಲ್ಲ, ರೋಗೋ-ಪದ್ರಗಳಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ, ಸ-ಮುದ್ರಶಯನ ಬಲ್ಲ ಎಲ್ಲ ||

ಸಾಧು ಜನರ ಕೂಡೆ, ಮೋಕ್ಷಕೆ, ಸಾಧನೆಗಳ ಮಾಡೆ
ಮಾಧವ ಪುರಂದರವಿಟ್ಠಲರಾಯನು, ಆದರಿಸುವನೆಲ್ಲ ಬಲ್ಲೆ ||
****

ರಾಗ ಪೂರ್ವಿಕಲ್ಯಾಣಿ. ಛಾಪು ತಾಳ (raga, taala may differ in audio)

pallavi

brahmANDadoLage arasi nODalu nammUrE vAsi

anupallavi

rammeyarasanu sarvadA vAsipa summAnadi tAnu

caraNam 1

janaja maraNavilla alli uNuva dukkhavilla anuja tanujaru allilla anumAnada solle illa

caraNam 2

nidreyu allilla rOgO padragaLilla kSUdra janangaLu allilla samudra shayana balla ella

caraNam 3

sAdhu janara kUDe mOkSake sAdhane mADe mAdhava purandara viTTala rAyanu Adarisuvanella balle
***

No comments:

Post a Comment