Saturday, 11 December 2021

ಜಿಷ್ಣುಸಖನೆ ಕೃಷ್ಣನೆ ಕೃಷ್ಣ ಕರಿಯ ಕಾಯ್ದ ಕರುಣಿ ankita hayavadana JISHNUSAKHANE KRISHNANE KRISHNA KARIYA KAAYDA KARUNI



ಶ್ರೀ ವಾದಿರಾಜ ತೀರ್ಥರ ಕೃತಿ

ಜಿಷ್ಣು ಶಖನೆ ಕೃಷ್ಣನೆ/ 
ಕೃಷ್ಣ ಕರಿಯ ಕಾಯ್ದ ಕರುಣಿ//
ಕೃಷ್ಣ ಪೊರೆಯೊ ಎನ್ನ ವಿಷಯ--
ತೃಷ್ಣೆ ಯಿಂ ಸಾಯಲೆ ದಮ್ಮಯ್ಯ//

ಹಿಂದೆ ಮಾಡಿದ ಕರ್ಮದಡವಿಯೆಂದಿಗೆ ಸವರುವೆನೊ ಗೋ--
ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊ/
ಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ  ನೀನು/
ಕುಂ೧ದು ಕುಜನ ದೂರ  ನಿನ್ನ ಕಂದನೆಂದು ಸಲಹೋ ತಂದೆ//೧//

ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ--
ಸ್ಸೀಮ ಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆ/
ಭ್ರಮಿತನಾದೆ ಬಲು ಪ್ರೇಮವ ತಪ್ಪಿಸಿ ಸುರಕ್ತಾನು ಹೇ
ದೈವ ಎನ್ನ ಆ ಮಹಾಭಯವ ನಿವಾರಿಸೊ//೨//

ಸುಖ ದುಃಖ ಜೀವನಕೆ  ಕಕ್ಕು ಬಕ್ಕು ಭಯದ ಬೇಸ-
ರಕ್ಕೆ ಬಿಡದೆ ಬಿಡದೆ ನಿನ್ನ ಲೆಕ್ಕ ಮಾಡಲಿಯ್ಯದೊ
ಚಿಕ್ಕತನದಿ ಸಿಕ್ಕಿ ದುರ್ವಿಷಯದಿ ನೊಂದೆ ಮೈ-
ಯಿಕ್ಕದಂತೆ ಮಾಡೊ ಹಯವದನ ದಕ್ಕಿಸೆನ್ನ ಅನುದಿನ//
***********

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.
ಶ್ರೀ ವಾದಿರಾಜಾಯ ನಮಃ.

No comments:

Post a Comment