ನೀನಿರುಳೆಲ್ಲಿದ್ದಿ ಹೇಳಯ್ಯ॥ ಪ ॥
ಶ್ರೀನಿವಾಸಮೂರುತಿ ಗೋವಳರಾಯ ॥ ಅ ಪ ॥
ಪಾಲಸಾಗರದಿ ಹಾವಿನ ಮ್ಯಾಲೆ ತಳಿ - ।
ರಾಲದೆಲೆಯ ಮ್ಯಾಲೆ ಯಶೋದೆಯ ॥
ತೋಳಿನ ಮ್ಯಾಲೆ ಗೋಪಿಯರಲ್ಲಿ ಕ್ರತು - ।
ಶಾಲೆಯೊಳರಸಿ ನೋಡಿದರಿಲ್ಲ ॥ 1 ॥
ಕಡೆವಲ್ಲಿ ತುರುವಿಂಡುಗಳಲ್ಲಿ ಸತ್ಯ ।
ನುಡಿವಲ್ಲಿ ಎಡೆಗಾಣಿಸದಲ್ಲಿ ॥
ಮಡದಿ ರುಗ್ಮಿಣಿ ಜಾಂಬವತಿಯರಲ್ಲಿ ನಿ - ।
ನ್ನಡಿಗಡಿಗರಸಿ ನೋಡಿದರಿಲ್ಲ ॥ 2 ॥
ಏಕಾದಶಿಯ ಜಾಗರದಲ್ಲಿ ಪುಣ್ಯ - ।
ಲೋಕಪಾವನ ಭಾಗವತರಲ್ಲಿ ॥
ವ್ಯಾಖ್ಯಾನ ತೆಗೆದು ನೋಡಿದರಿಲ್ಲ. ಜಗ - ।
ದೇಕ ಪುರಂದರವಿಠ್ಠಲ ॥ 3 ॥
***
ಶ್ರೀರಾಗ ಮಿಶ್ರಛಾಪುತಾಳ (raga, taala may differ in audio)
ರಾಗ ಶ್ರೀ ಅಟ ತಾಳ
pallavi
nIniruLellidde hELayya shrInivAsa mUruti gOvaLarAya
caraNam 1
pAla sAgaradi hAvina mEle taLilAradeleya mEle yashOdeya
tOLina mEle gOpiyaralli karadu shAleyoLarasi nODidarilla
caraNam 2
kaDevalli turuviNDgaLalli satya nuDivalli eNe kANisadalli
maDadi rukmiNi jAmbavatiyaralli ninnaDigaDigarasi nODidarilla
caraNam 3
EkAdashiya jAgaradalli puNya lOka pAvana bhAgavataralli
vyAkhyAna tegedu nODidarilla jagadEka purandara viTTala
***
ನೀನಿರುಳೆಲ್ಲಿದ್ದೆ ಹೇಳಯ್ಯ
ಶ್ರೀನಿವಾಸ ಮೂರುತಿ ಗೋವಳರಾಯ ||ಪ||
ಪಾಲ ಸಾಗರದಿ ಹಾವಿನ ಮೇಲೆ ತಳಿ-
ರಾಲದೆಲೆಯ ಮೇಲೆ ಯಶೋದೆಯ
ತೋಳಿನ ಮೇಲೆ ಗೋಪಿಯರಲಿ, ಕ್ರತು
ಶಾಲೆಯೊಳರಸಿ ನೋಡಿದರಿಲ್ಲ ||
ಕಡೆವಲ್ಲಿ ತುರುವಿಂಡುಗಳಲ್ಲಿ, ಸತ್ಯ
ನುಡಿವಲ್ಲಿ ಎಣೆಗಾಣಿಸದಲ್ಲಿ
ಮಡದಿ ರುಕ್ಮಿಣಿ ಜಾಂಬವತಿಯರಲ್ಲಿ ನಿ-
ನ್ನಡಿಗಡಿಗರಸಿ ನೋಡಿದರಿಲ್ಲ ||
ಏಕಾದಶಿಯ ಜಾಗರದಲ್ಲಿ, ಪುಣ್ಯ-
ಲೋಕಪಾವನ ಭಾಗವತರಲ್ಲಿ
ವ್ಯಾಖ್ಯಾನ ತೆಗೆದು ನೋಡಿದರಿಲ್ಲ. ಜಗ-
ದೇಕ ಪುರಂದರ ವಿಠಲ ||
*******
ನೀನಿರುಳೆಲ್ಲಿದ್ದೆ ಹೇಳಯ್ಯ
ಶ್ರೀನಿವಾಸ ಮೂರುತಿ ಗೋವಳರಾಯ ||ಪ||
ಪಾಲ ಸಾಗರದಿ ಹಾವಿನ ಮೇಲೆ ತಳಿ-
ರಾಲದೆಲೆಯ ಮೇಲೆ ಯಶೋದೆಯ
ತೋಳಿನ ಮೇಲೆ ಗೋಪಿಯರಲಿ, ಕ್ರತು
ಶಾಲೆಯೊಳರಸಿ ನೋಡಿದರಿಲ್ಲ ||
ಕಡೆವಲ್ಲಿ ತುರುವಿಂಡುಗಳಲ್ಲಿ, ಸತ್ಯ
ನುಡಿವಲ್ಲಿ ಎಣೆಗಾಣಿಸದಲ್ಲಿ
ಮಡದಿ ರುಕ್ಮಿಣಿ ಜಾಂಬವತಿಯರಲ್ಲಿ ನಿ-
ನ್ನಡಿಗಡಿಗರಸಿ ನೋಡಿದರಿಲ್ಲ ||
ಏಕಾದಶಿಯ ಜಾಗರದಲ್ಲಿ, ಪುಣ್ಯ-
ಲೋಕಪಾವನ ಭಾಗವತರಲ್ಲಿ
ವ್ಯಾಖ್ಯಾನ ತೆಗೆದು ನೋಡಿದರಿಲ್ಲ. ಜಗ-
ದೇಕ ಪುರಂದರ ವಿಠಲ ||
*******
No comments:
Post a Comment