Sunday, 8 December 2019

ಈತನಾತುಮ ಮೂರುತಿ vijaya vittala suladi ತಿರುವೆಂಗಳೇಶ ಸುಳಾದಿ EETANAATUMA MOORUTI TIRUVENGALESHA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ತಿರುವೆಂಗಳೇಶ ಸುಳಾದಿ 

 ರಾಗ ಸಾರಂಗ 

 ಧ್ರುವತಾಳ 

ಈತನಾತುಮ ಮೂರುತಿ ಈತನಂತರಾತುಮಾ |
ಈತನೆ ಪರಮಾತುಮ ಈತನೆ ಜ್ಞಾನಾತುಮ |
ಈತನೆ ಅನ್ಮಯಾದಿ ಮೂರುತಿ |
ಈತನೆ ಪ್ರಾಜ್ಞಾದಿ ಮೂರುತಿ ಕಾಣೊ |
ಈತನೆ ಅಂಗುಷ್ಟ ಪರಿಮಿತ ಮೊದಲಾತ |
ಈತನೆ ಹೃದಯಾಂಬುಜ ನಿವಾಸ ಪ್ರ - |
ಖ್ಯಾತ ಮೂರುತಿ ಜಗಕಾಶ್ಚರ್ಯ ಮೂರುತಿ |
ಈ ತಿರುವೆಂಗಳ ತಿಮ್ಮಪ್ಪ ಎನ್ನಪ್ಪ |
ವಾತ ವಂದಿತ ಸಿರಿ ವಿಜಯವಿಠಲ ಪರಮಾ |
ಪ್ರೀತನು ಸಕಲಸುರ ವ್ರಾತಕನುದಿನ ॥ 1 ॥

 ಮಟ್ಟತಾಳ 

ಹರಣದೊಳಗೆ ನೀನು ಇರಳು ಹಗಲು ಬಿಡದೆ |
ತರುಣಿ ಪುರುಷವೇಷ ಧರಿಸಿದೆ ಪ್ರತಿದಿನ |
ಮೆರದು ಉನ್ನತದಲ್ಲಿ ಸುರರೊಳು ಪೆಸರಾದ |
ವರಗಿರಿಯ ವಾಸ ತಿರುವೆಂಗಳೇಶ ವಿಜಯವಿಠಲ ಧೀಶಾ |
ಕರುಣಾಕರ ಸುಜನರ ಮನೋರಥ ದೇವಾ ॥ 2 ॥

 ತ್ರಿವಿಡಿತಾಳ 

ಅನಿರುದ್ಧಾದಿ ಮೂರುತಿ ಅಜಾದಿ ಮೂರುತಿ |
ಅನಿಮಿಷರೊಳಗೆ ಬಲುಪೊಳವ ಮೂರ್ತಿ |
ಮನ ಮೊದಲಾದ ಇಂದ್ರಿಯಂಗಳವರಲ್ಲಿ |
ಮಿನುಗುವ ಮೂರುತಿ ಪರಿಪೂರ್ಣ ಮೂರುತಿ |
ಪುನಗು ಮಘಮಘಿಸುವ ತಿರುವೆಂಗಳೇಶ ಸಾ - |
ಧನ ತೋರಿಕೊಡುವ ವಿಜಯವಿಠಲರೇಯಾ ॥ 3 ॥

 ಅಟ್ಟತಾಳ 

ಕೇಶವಾದಿ ತತ್ವನ್ಯಾಸದವರೊಳು |
ವಾಸವಾಗಿದ್ದ ಹೃಷಿಕೇಶ ಮೂರುತಿ |
ಸಾಸಿರ ಮೂರುತಿ ವಾಸುದೇವಾ ಆ - |
ಕಾಶ ಹೃದಯದೊಳು ಸೂಸುವಾ ಮೂರುತಿ |
ಸಾಸಿರಾಸೀತಿ ಭೂಷಣಂಗುಲಿ ಪರ್ವ ಈ ಸಮಸ್ತ ಮೂರ್ತಿ |
ಶೇಷಗಿರಿ ವೆಂಕಟೇಶ ವಿಜಯವಿಠಲ |
ಲೇಶ ಮೂರ್ತಿ ಪಂಚಕೋಶದ ಮಹಿಮಾ ॥ 4 ॥

 ಆದಿತಾಳ 

ಶರೀರದೊಳಗೆ ನಖ ಶಿರಸಾ ಪರಿಯಂತ |
ಭರಿತವಾಗಿ ರೋಮಾಂತರದ ಮಧ್ಯದಲಾವಾಂ - |
ತರದ ಸಹಿತ ನಿರಂತರ ಮಾಯವಾಗಿಪ್ಪೆ |
ಹರಿಯೆ ನೀನೆ ಇಲ್ಲಿ ತಿರುಮಲನಾಗಿ ಮೆರೆವೆ |
ವರಗಿರಿವಾಸ ಶ್ರೀನಿವಾಸ ವೆಂಕಟೇಶ |
ಸುರತರುವೆ ಭಕ್ತರಿಗೆ ನಿರ್ಜರನಿಕರಪಾಲಾ ॥ 5 ॥

 ಜತೆ 

ತಿರುವೆಂಗಳೇಶನಂತರದೊಳು ಚಿಂತಿಸಿ |
ವರಗಿರಿ ಸಿರಿ ವಿಜಯವಿಠಲನ ಮನದಲ್ಲಿ ಕಂಡೆ ॥
************

No comments:

Post a Comment