Audio by Mrs. Nandini Sripad
ರಾಗ ಕಾಂಬೋಧಿ
ಧ್ರುವತಾಳ
ಇಂದ್ರಾದಿಗಳು ತಮ್ಮ ಸಂದಣಿಯಾ ಸಮೇತ |
ಒಂದಾರು ಪ್ರಾಕಾರ ಒಂದಾರು ಬೀದಿಯೊಳು |
ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ |
ಮಂದಿರದಲ್ಲಿದ್ದ ಇಂದಿರೇಶನ ಪಾದ |
ದ್ವಂದ್ವವ ಎಣಿಸಿ ಒಂದೊಂದು ಗುಣಗಳ |
ನಂದವ ನೆನೆವುತ್ತ ಮುಂದುಗಾಣದ ಸುಖ - |
ಸಿಂಧುವಿನೊಳಿಪ್ಪರು ಕಂಧರವನ್ನು ತೂಗಿ |
ಗಂಧರ್ವ ತುಂಬುರ ನಾರಂದನು ಮಹತಿ - |
ಯಿಂದ ನುಡಿಸಿ ತಾರಾ ಮಂದರದಿಂದಲಿ |
ಕಂದೆರದೂ ಮುಚ್ಚಿ ಕಂದನ ನುಡಿಯಂತೆ |
ಒಂದೊಂದು ಕೀರ್ತಿಸಿ ವಂದನೆ ಮಾಡಲು |
ಬಂದ ಶರೀರ ಸಾಲದೆಂದೆಂಬೊ ಗಾದೆಯಾಗೆ |
ಮಂದರಧರ ಗೋವಿಂದ ವಿಜಯವಿಠ್ಠಲ |
ಸುಂದರವಿಗ್ರಹ ಒಂದೆ ದೈವವೆ ರಂಗ ॥ 1 ॥
ಮಟ್ಟತಾಳ
ರಂಗ ರಂಗ ರಂಗಾಧಾಮಾ
ರಂಗ ಕಸ್ತೂರಿರಂಗ ಕಾವೇರಿ - |
ರಂಗ ವೈಭೋಗರಂಗ ಜಗದಂತ -
ರಂಗ ರಂಗ ರಂಗನಾಥ |
ರಂಗ ಶಾರಂಗ ದುರಿತಸಂಘ ದೂರ
ರಂಗ ದನುಜಭಂಗ , ಶೌರಿ
ರಂಗರಾಮ ವಿಜಯವಿಠ್ಠಲ |
ರಂಗೇಶ ರಂಗ ಮಂದಿರವಾಸ ॥ 2 ॥
ತ್ರಿವಿಡಿತಾಳ
ಸಪುತ ಪ್ರಾಕಾರವೆ ಸಪುತಾವಾರಿಧಿ ಎನ್ನಿ |
ಸಪುತ ಬೀದಿಗಳು ಸಪ್ತದ್ವೀಪ ಎನ್ನಿ |
ತಪುತ ಕಾಂಚನಮಯ ಸುಮೇರು ಪರ್ವತ |
ಗುಪುತ ಮಹಿಮಾನಿಪ್ಪ ಸ್ಥಾನವೆನ್ನೀ |
ಸಪುತಾಶ್ವ ಚಂದ್ರಮಾ ಬಿಡದೆ ತಿರುಗುವರೆನ್ನಿ |
ಸಪುತಾಋಷಿಗಳಲ್ಲಿ ವಾಸಾವೆನ್ನಿ |
ಸಪುತೆರಡು ಲೋಕದಲಿ ಇದು ವೆಗ್ಗಳವೆನ್ನಿ |
ಶಪುತ ಮಾಡುವರೊಡಿಯಾ ವಿಜಯವಿಠ್ಠಲ ರೇಯಾ |
ಕುಪಿತರ ಸಂಹಾರಾ ಭಕುತರ ಉದ್ಧಾರಾ ॥ 3 ॥
ಅಟ್ಟತಾಳ
ಆವನಾದರು ಬಂದು ಭಾವ ಶುದ್ಧದಲ್ಲಿ |
ರಾವಣಾಂತಕನಿದ್ದ ವೈಕುಂಠದ |
ಸೇವೆಯ ಮಾಡಲು ಸಾವಿರ ಬಗೆಯಿಂದ |
ಶ್ರೀ ವಾಸುದೇವನು ತಾವೊದಗಿ ಬಂದು |
ಕೋವಿದರನ ಮಾಡಿ ಪಾವನರೊಳಿಡುವ |
ಕಾವೇರಿನಿವಾಸಾ ವಿಜಯವಿಠ್ಠಲ ರಂಗ |
ದೇವನ ಕ್ಷೇತ್ರವ ಆವ ಬಣ್ಣಿಪನು ॥ 4 ॥
ಆದಿತಾಳ
ಬಯಸಾದಿರು ಮೇಲು ಲೋಕ ಬಯಸಾದಿರು ನಾಗಲೋಕ |
ಬಯಸದಿರು ಸ್ವರ್ಗ ಸಕಲ ದಿಕ್ಪಾಲಕರ ಸುಖಗಳ |
ಬಯಸು ಮನುಜಾ ರಂಗಕ್ಷೇತ್ರದಲ್ಲಿ ಒಂದು ದಿವಸಾವಿದ್ದು |
ದಯಪಯೋನಿಧಿಯ ಪಾದ ಭಯಭಕುತಿಯಿಂದ ನೋಡೆ |
ಬಯಲಾಗುವುದು ಪಾಪಾತ್ರಯಕಾಲದಲ್ಲಿ ಒಲಿದು |
ಜಯಾ ಮೂರ್ತಿರಂಗಾ ವಿಜಯವಿಠ್ಠಲ ಸಿರಿ ರಮಣಾ |
ಈಯಬಲ್ಲ ಈ ಪರಿಗಾಯನ ಮಾಡಲು ವೇಗ ॥ 5 ॥
ಜತೆ
ವಿಧು ಪುಷ್ಕರಣಿಯಾ ನಿವಾಸ ಶೇಷಶಾಯಿ |
ಮಧುವೈರಿ ವಿಜಯವಿಠ್ಠಲ ರಂಗಧಾಮಾ ||
****************
No comments:
Post a Comment