Monday, 9 December 2019

ರಂಗ ರಂಗ ವಿಹಂಗ vijaya vittala ankita suladi ರಂಗನಾಥ ಮಹಾತ್ಮೆ ಸುಳಾದಿ RANGA RANGA VIHANGA RANGANATHA MAHATME SULADI

Audio by Mrs. Nandini Sripad

ವಿಜಯದಾಸಾರ್ಯ ವಿರಚಿತ ರಂಗನಾಥ ಮಹಾತ್ಮೆ ಸುಳಾದಿ 

 ರಾಗ ವರಾಳಿ 

 ಧ್ರುವತಾಳ 

ರಂಗ ರಂಗ ವಿಹಂಗ ತುರಂಗ ತು -
ರಂಗ ವದನ ತುರಂಗ ಖಳರ ಮರ್ದನ 
ರಂಗ ಭಕ್ತರಂಗದೊಡಿಯಾ ಶಾ -
ರಂಗ ಚಾಪಪಾಣಿ ಸಂಗೀತಲೋಲ 
ಮಂಗಳಾಂಗ ಪ್ಲವಂಗ ನಾಯಕ ತಾ -
ರಂಗ ಮಹಿಮ ಪಾತಂಗ ಕುಲೋದ್ಭವ 
ರಂಗ ನಿಸ್ಸಂಗ ದೋಷಸಂಗಾ ಸತತ ದೂರಾ 
ತುಂಗ ವಿಕ್ರಮ ಭುಜಂಗಶಯನಾ ಮಾ -
ತಂಗ ವರದ ದೈತ್ಯಭಂಗ ಹೃತ್ಸರಸಿಜ 
ಭೃಂಗ ಭಾನುತೇಜ ಗಂಗಾಜನಕ 
ಜಂಗಮ ಸ್ಥಾವರ ಜಂಗುಳೀ ಪರಿಪಾಲ 
ರಂಗ ಮಂದಿರ ವಾಸರ ರಂಗ ರಂಗೇಶಾ 
ರಂಗ ಮೂರುತಿ ನೀಲಾಂಗ ವಿಜಯವಿಠಲ 
ಡಿಂಗರಿಗೊಲಿವ ತಿರುವೆಂಗಳೇಶಾ ॥ 1 ॥

 ಮಟ್ಟತಾಳ 

ಸರಸಿಜಭವನಿಂದ ನಿರುತ ಪೂಜಿಗೊಂಬ 
ವರ ಶ್ರೀರಂಗದೇವಾ ಧರಣಿಯೊಳಗೆ ಸವಿತರವಂಶಕೆ ಬಂದು 
ಪರಿಪರಿವಿಧದಲಿ ಮೆರೆದು ಪಾರಂಪರೆಯ 
ಅರಸರಸರ ಕೂಡ ಪರಮತೋಷದಲಿದ್ದ 
ಕರುಣಾಂಬುಧಿರಂಗ ವರಮಂದಿರವಾಸ ವಿಜಯವಿಠಲರೇಯಾ 
ಶರಣರ ಮನಕೆ ಗೋಚರವಾಗುವ ದೈವಾ ॥ 2 ॥

 ರೂಪಕತಾಳ 

ಅಜರಾಯನುದರದಲಿ ಸೃಜಿಸಿ ದಶರಥರಾಯಾ 
ಭಜಿಸಿ ಪಡದಾನಂದು ತ್ರಿಜಗದ ಒಡಿಯನ್ನ 
ಅಜನ ತಾತನು ಪುಟ್ಟಿ ರಜನಿ ಚಾರನು ಕುಟ್ಟಿ 
ನಿಜಸತಿಯಾ ಕೂಡ ಪರಂಜನೇತ್ರ ಮೆರೆದಾನು 
ರಜದೂರ ವಿಜಯವಿಠಲ ರಂಗ ರಾಮಾ 
ಭಜಿಸುವರ ಮನೋವ್ರಜಾವಂಧದೂರ ॥ 3 ॥

 ಝಂಪೆತಾಳ 

ಭಕ್ತ ವಿಭೀಷಣನ ಭಯವನ್ನೆ ಪರಿಹರಿಸಿ 
ಉತ್ತರೋತ್ತರಿರುವಂತೆ ಅಭಯವಿತ್ತು 
ಭಕ್ತಿಗೆ ಒಲಿದು ತಿರುಗಿ ಪೋಗು ಎಂದೆನಲು 
ಉತ್ತರಕೆ ತಲೆವಾಗಿ ಬಿನ್ನೈಸಿದಾ 
ಚಿತ್ತದೊಡಿಯಾ ರಾಮಾ ನಿನ್ನನಗಲಿ ಕಾಲಕಳ -
ವುತ್ತ ಇರಬಹುದೆ ನಂಬಿದ ದಾಸರೂ 
ಭೃತ್ಯ ನುಡಿದದನು ಲಾಲಿಸಿದಾ ಸರ್ವೋತ್ತಮಾ 
ಇತ್ತಾನು ವರಮೂರ್ತಿಯನು ಪಾಲಿಸೀ 
ಸತ್ಯಸಂಕಲ್ಪರಾಮ ರಂಗ ವಿಜಯವಿಠಲ 
ಹತ್ತಾವತಾರದ ಪುರುಷ ಸಿರಿ ಅರಸಾ ॥ 4 ॥

 ತ್ರಿವಿಡಿತಾಳ 

ಪೊಡವಿಗಿಳಹದಲೆ ನಿನ್ನ ಪುರಕೆ ವೈದು 
ಕಡು ಪೂಜೆ ಮಾಡೆಂದು ಹೇಳಲಾಗಿ 
ಪೊಡವಟ್ಟು ವಿಭೀಷಣ ಶಿರಸಾ ವಹಿಸಿಕೊಂಡು 
ನಡೆದು ಬರುತಿರಲು ಹರಿ ಮಾಯದಿಂದ 
ತಡಧ್ಹಾದಿಯಲ್ಲಿ ಬಂದು ಸಾಗದಂತಾಗಲು 
ಒಡನೆ ಸಾಹಸ ಮೀರಿ ಕೀಳಾಲೇಳಾದಿರೆ 
ದೃಢಾ ಗುಂದಿ ವಿಭೀಷಣನಿಂದಿರಲೂ 
ಒಡಿಯಾ ಪುಷ್ಕರಣಿಯವಾಸಾ ರಂಗ ರಾಯಾ 
ಬಡವರದಾತ ಶ್ರೀವಿಜಯವಿಠಲರೇಯಾ 
ಸಡಗರದ ಮಹಿಮಾ ಮೆರದಾನಂದು ಮೊದಲೂ ॥ 5 ॥

 ಅಟ್ಟತಾಳ 

ಭಕುತಿಗೆ ವರವಿತ್ತು ಸುಖ ಸಾಂದ್ರರದೇವ 
ವಿಕಳಾನಾಗಾದೆ ನೀ ಸಕಲಕಾಲಾದಾಲಿ ಅರ್ಚಿತನಾಗಿರು ಎಂದು 
ಕಕುಲಾತಿ ಬಿಡಿಸಿ ಸಾರೆ ಕರೆದು ಪೇಳಿದ 
ರಕ್ಕಸರ ಪುರವಾಸಕ್ಕೆ ಸಲ್ಲಾ ಎನಗಿರ
ತಕ್ಕದಲ್ಲಾವೆಂದೂ ಲಕ್ಕುಮಿ ರಮಣ ಪೇಳೆ 
ಅಕಳಂಕ ರಂಗೇಶಾ ವಿಜಯವಿಠಲ ತಾ -
ರಕವಾ ವಿಮಾನದಲಿ ಮುಕುತಾರ್ಥ ನಲಿವಾ ॥ 6 ॥

 ಆದಿತಾಳ 

ತೇಜೋಮಯನು ಇಲ್ಲಿ ರಾಜಿಸುತ ಪವಳಿಸಿದ 
ರಾಜಾ ಸರೋವರದಲ್ಲಿ ರಾಜಾ ರಾಜಾರಂಗ ರಾಜಾ 
ರಾಜಶೇಖರ ಬೊಮ್ಮಾಸುರರಾಜ ಗಂಧರ್ವಾದಿಯಿಂದ 
ಪೂಜೆಗೊಳುತ ಪೂರ್ಣವಾಗಿ ನಿಕೂಜಿದವರ ಪೊರೆವುತ್ತಾ 
ಮೂಜ್ಜಗದೊಡಿಯಾ ರಂಗ ರಾಜಾರಾಮಾ ವಿಜಯವಿಠಲ 
ಯೋಜನಪಾರಕ್ಕೆ ನೆನಿಯ ಮಾಜಾದೆ ಸತ್ಪುಣ್ಯನೀವಾ ॥ 7 ॥

 ಜತೆ 

ಉಭಯಾ ಕಾವೇರಿಯಾ ವಾಸಾ ಅನಿಮಿಷಾಧೀಶಾ 
ವಿಭುವೆ ರಂಗ ರಾಮಾ ವಿಜಯವಿಠಲರೇಯಾ ॥
********

No comments:

Post a Comment