1st Audio by Mrs. Nandini Sripad
- ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ
( ಮುದ್ದು ಮೂರುತಿ ಬಾಲ ಗೋಪಾಲ ಶ್ರೀಕೃಷ್ಣನ ರೂಪ , ವೃಂದಾವನದಲ್ಲಿ ಅವನ ಕುಣಿತ , ಅವನ ಸರ್ವೋತ್ತಮತ್ವವನ್ನು ತಿಳಿಸಿದ್ದಾರೆ. ಭಗವಂತನ ಸರ್ವಪ್ರೇರಕತ್ವ , ನಿಯಾಮಕತ್ವವನ್ನು ಸ್ತುತಿಸುತ್ತಾ , ಪರಮಾತ್ಮನ ನಾಮಸ್ಮರಣೆಯೊಂದಿಗೆ ಭಕ್ತರು ತಮ್ಮ ಇಂದ್ರಿಯಗಳನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂದು ದಾಸರು ತಿಳಿಸಿಕೊಟ್ಟಿದ್ದಾರೆ. )
ರಾಗ ಆರಭಿ
ಧ್ರುವತಾಳ
ಬಾಲಸೂರ್ಯನಿಭಮಣ್ಯಾಂಕ ಮೌಳಿ
ಹೀಲಿಯ ಪಿಂಛ ಪ್ರವಾಳ ಗುಚ್ಛ
ಮಾಲ್ಯಾಲರದಂಡೆ ಝೇಂಕರಿಪಾಳಿ
ಬಾಲರಯ್ಯನ ಮೊಗದ ಶೋಭೆ
ಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ -
ಶಾಲೇರಿ ಸಿರಿವತ್ಸ ಕೌಸ್ತುಭ
ನೀಲಮಾಣಿಕ ವಜ್ರವಲಯ ವೈಜಂತಿ ವನ -
ಮಾಲೆ ತುಲಸಿ ಗಂಧ ಮೌಕ್ತಿಕ ಸರಗಳ
ನೀಲನದ ರತುನ ದಾಮ ಪೊನ್ನ
ಚೀಲ ನೂಪುರ ಕಿರುಗೆಜ್ಜೆಯ ಗೋ -
ಪಾಲ ಪ್ರಸನ್ನವೆಂಕಟ ಶಾಮಲಕಾಯ ॥ 1 ॥
ಮಠ್ಯತಾಳ
ನಂದವ್ರಜದ ಗೋವರ ವೃಂದಾಂಬುಧಿಗೆ ಪೂ -
ರ್ಣೇಂದು ನಂದಸೂನು ಲಾಸ್ಯವಾಡೆ
ಒಂದೊಂದು ಲಯದ ಗತಿ ಹೊಂದ್ಯಮರ
ದುಂದುಭಿಗಳ್ದಂ ಧಳಧಂ ಧಂದಳೆನ್ನೆ
ಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರ -
ಬಂಧ ಹೇಳ ನಂದರಸ -
ದಿಂದಾಡುತಿರೆ ಗೋವಿಂದ ದಂದಂ
ದಂದಂ ಧಿಮಿಕೆನ್ನ ಲಂದದಿ ಮದ್ದಳೆ ತಾಳ
ಬಂದಿಮೊಗ ತುತ್ತುರಿ ಕಹಳೆ ಕಂಬುವೇಣುಗೂಡಿ
ಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ ॥ 2 ॥
ತ್ರಿವಿಡಿತಾಳ
ಶ್ರೀಕಮಲಭಭೂರ್ವ ಪಿನಾಕಿ ವಿಪಾಹಿಪ
ನಾಕಜಾದ್ಯರ ಚೇಷ್ಟಕ
ಶ್ರೀಕರ ಪ್ರಸನ್ನವೆಂಕಟ ಕೃಷ್ಣ
ಆಕಳಕಾವರ ವಶಗ ಹಾಹಾ ॥ 3 ॥
ಅಟ್ಟತಾಳ
ಅನಂತ ನಿಗಮ ನಿಕರಕೆ ನಿಲುಕದ
ಅನಂತಾನಂತ ಗುಣಪರಿಪೂರ್ಣಗೆ
ಧೇನುಕಾವರ ಪಳ್ಳಿ ಗೋಟಲೆ
ತೀಯಂ ತೀಯಂ ವೈಯ್ಯ ಅಯ್ಯಾ
ಧೇನುಕಾವರ ಪಳ್ಳಿ ಗೋಟಲೆ
ಜ್ಞಾನಿಜನಕೆ ಮೋದ ಹಾನಿ ಖಳರ್ಗೀವ
ಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ ॥ 4 ॥
ಏಕತಾಳ
ವೈಕುಂಠ ವಾರಿಜಾಕ್ಷ ಲೋಕರಕ್ಷ
ತೋಕವೇಷಧರ ಮುರಹರ ಶ್ರೀಧರ
ಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇ
ಗೋಕುಲಪತೆ ಗೋವರ್ಧನಧರ
ಪಾಕಹ ಮದನಿಕಾರಕರ ಪ್ರಸ -
ನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ ॥ 5 ॥
ಜತೆ
ಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆ
ಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ನವೆಂಕಟ ಕೃಷ್ಣಯ್ಯ ॥
***********
ಧ್ರುವತಾಳ
ಬಾಲ ಸೂರ್ಯನಿಭಮಣ್ಯಾಂಕ ಮೌಳಿಹೀಲಿಯ ಪಿಂಛಪ್ರವಾಳಗುಚ್ಛ ಮ್ಯಾಲಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿಮಕರಕುಂಡಲವಿಶಾಲೇರಿ ಸಿರಿವತ್ಸಕೌಸ್ತುಭನೀಲಮಾಣಿಕ ವಜ್ರವಲಯ ವೈಜಂತಿವನಮಾಲೆ ತುಲಸಿ ಗಂಧ ಮೌಕ್ತಿಕ ಸರಗಳನೀಲನದ ರತುನದಾಮಪೊನ್ನಚೇಲನೂಪುರ ಕಿರುಗೆಜ್ಜೆಯ ಗೋಪಾಲ ಪರಸನ್ನವೆಂಕಟ ಕೃಷ್ಣ ಶಾಮಲಕಾಯ 1
ಮಠ್ಯತಾಳ
ನಂದವ್ರಜದ ಗೋವರ ವೃಂದಾಂಬುಧಿಗೆ ಪೂರ್ಣೇಂದು ನÀಂದಸೂನು ಲಾಸ್ಯವಾಡೆಒಂದೊಂದು ಲಯದಗತಿಹೊಂದ್ಯಮರದುಂದುಭಿಗಳ್ದಂ ಧಳಧಂ ಧಂದಳೆನ್ನೆಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರಬಂಧ ಹೇಳೆ ನಂದರಸದಿಂದಾಡುತಿರೆ ಗೋವಿಂದ ದಂದಂ ದಂದಂ ಧಿಮಿಕೆನ್ನಲಂದದಿ ಮದ್ದಳೆ ತಾಳಬಂದಿಮೊಗ ? ತುತ್ತುರಿ ಕಹಳೆ ಕಂಬುವೇಣುಗೂಡಿಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ 2
ತ್ರಿವಿಡಿ ತಾಳ
ಶ್ರೀಕಮಲ ಭಭೂರ್ವಪಿನಾಕಿವಿಪಾಹಿಪನಾಕಜಾದ್ಯರ ಚೇಷ್ಟಕಶ್ರೀಕರ ಪ್ರಸನ್ನವೆಂಕಟ ಕೃಷ್ಣಆಕಳಕಾವರ ವಶಗ ಹಾಹಾ 3
ಅಟ್ಟತಾಳ
ಅನಂತನಿಗಮನಿಕರಕೆ ನಿಲುಕದಅನಂತಾನಂತ ಗುಣಪರಿ ಪೂರ್ಣಗೆಧÉೀನುಕಾವರ ಪಳ್ಳಿ ಗೋಟಲೆತೀಯಂ ತೀಯಂ ವೈಯ್ಯ ಅಯ್ಯಾಧೇನುಕಾವರ ಪಳ್ಳಿ ಗೋಟಲೆಜ್ಞಾನಿಜನಕೆಮೋದಹಾನಿ ಖಳರ್ಗೀವಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ 4
ಏಕತಾಳ
ವೈಕುಂಠ ವಾರಿಜಾಕ್ಷ ಲೋಕರಕ್ಷತೋಕವೇಷಧರಮುರಹರಶ್ರೀಧರಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇಗೋಕುಲಪತೆ ಗೋವರ್ಧನಧರಪಾಕಹ ಮದನಿಕಾರಕರ ಪ್ರಸನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ 5
ಜತೆ
ಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ವೆಂಕಟಕೃಷ್ಣಯ್ಯ
***********
No comments:
Post a Comment