Friday 5 November 2021

ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ purandara vittala TAASU BAARISUTIDE KELI HARIDASARELLA



ತಾಸು ಬಾರಿಸುತಿದೆ ಕೇಳಿ | ಹರಿದಾಸರೆಲ್ಲ || ಪ ||

ಶ್ರೀಶನ ಭಜನೆಯ ಮಾಡದ ಮನುಜನ ಆ | 
ಯುಷ್ಯವು ವ್ಯರ್ಥ ಹೋಯಿತು ಎಂದು ||ಅ.ಪ||

ಹಾಸು ಮಂಚ ಸುಪ್ಪತ್ತಿಗೆಯಲ್ಲಿ | ಹಗಲು ಇರುಳು |
ಹೇಸರಗತ್ತೆಯಂತೆ ಹೊರಳಿ | ಸ್ತ್ರೀಯರ ಕೂಡಿ |
ಬೇಸರಪಡದೆ ನಿತ್ಯ ಉರುಳಿ | ಈ ಪರಿಯಲಿ |
ಮನುಷ್ಯ ಆಯುಷ್ಯ ವೃಥಾ ವೃಥಾ ಹೋಯಿತು ಎಂದು ||

ಬಾಲ್ಯ ಯೌವನ ವೃದ್ಧಕಾಲ | ವಿವೇಕವಿಲ್ಲದೆ |
ಹಾಳಾಗಿ ಹೋಯಿತು ವ್ಯರ್ಥಕಾಲ | ಆಹಾರ ತಿಂದು |
ಭಾಳಾ ನಿದ್ರೆಯಿಂದ ಅತಿಲೋಲ | ಈ ಪರಿಯಿಂದಲಿ |
ಕಾಲನ ಮನೆಯು ಸಮೀಪವಾಯಿತು ಆಯಿತು ಎಂದು ||

ಕಂಡ ಕಂಡ ವಿಷಯವ ಕಾಮಿಸಿ |ಕಷ್ಟವ ಪಡದೆ |
ತಾಂಡವ ಶ್ರೀಕೃಷ್ಣನ ಭಜಿಸಿ | ಪುಂಡರೀಕಾಕ್ಷ |
ಪುರಾಣಪುರುಷನ ಪುರಂದರವಿಠಲನ |
ಭಜಿಸಿ ಬದುಕೆಂದು ಢಣ್ ಢಣ್ ಢಣಾ ಎಂದು ||
****

ರಾಗ ಮಧ್ಯಮವತಿ ಆದಿತಾಳ (raga, taala may differ in audio)

pallavi

tAsu bArisutide kELi dAsarella

anupallavi

shrIshana bhajaneya mADada manujava AyuSyavu vyartta hOyitu endu

caraNam 1

hAsumanca suppattigeyalli hagalu iruLu hesara katteyante horaLi strIyara kUDi bEsara
paDede nitya uruLi I pariyandali manuSya AyuSya vrudA vrudA hOyitu hOyitu endu

caraNam 2

bAlya yauvana vrddhakAla vivEkavillade hALgi hOyitu vyartta kAla AhAradindu
bALA nidreyinda atilOla I pariyindali kAlana maneyu samIpavAyitu Ayitu endu

caraNam 3

kaNDa kaNDa viSayava kAmisi kaSTavu paDade tANDava shrI krSNana bhajisi puNDanenisade
baNTadhAvatiyanu tyajisi puNDarIkAkSana purandara viTTalana bhajisibadukendu DhaN DhaN DhaNA endu
***

ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ |
ತಾಸು ಬಾರಿಸುತಿದೆಕೇಳಿ ಪ.

ಹಾಸುಮಂತ ಸುಪ್ಪತ್ತಿಗೆಯಲಿ - ಹಗಲು ಇರುಳು |ಹೇಸರಗತ್ತೆಯಂತೆ ಹೊರಳಿ - ಸ್ತ್ರೀಯರಗೂಡ |ಬೇಸರದೆ ನಿತ್ಯವು ಉರುಳಿ ||ಈಪರಿ ಕಾಲವ ಕಳೆದೆಯೊಕಾಲ ಸ |ಮೀಪವಾಯಿತು ಎಂದೀಗಲೆ 1

ವೃಧ್ಧ ಯಾವನ ಬಾಲಕಾಲ - ವಿವೇಕವಿಲ್ಲದ |ಬುದ್ಧಿ ಮಾಂದ್ಯವು ಹಲವುಕಾಲ - ಆಹಾರಸಂಗ |ನಿದ್ರೆಯಿಂದಲಿ ಅತಿಲೋಲ ||ಈಶನ ಭಜಕರ ಭಜಿಸದೆ ಮಾನುಷಾ |ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು 2

ಕಂಡ ವಿಷಯವ ಕಾಮಿಸಿ - ಕಷ್ಟಪಡದೆ |ತಾಂಡವ ಕೃಷ್ಟನ ಭೇಸಿ - ಪುಂಡನೆನಿಸದೆಭಂಡಧಾವತಿಯನು ತ್ಯಜಿಸಿ ||ಪುಂಡರೀಕಾಕ್ಷ ಪುರಂದರವಿಠಲನ |ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು 3
*******

No comments:

Post a Comment