ಅಕ್ಕ ನಂದಗೋಪನ ಅರಮನೆಯೊಳಗೊಬ್ಬ |
ಅಕ್ರೂರ ಬಂದನಂತೆ ಪ
ಹೊಕ್ಕು ಬಳಕೆಯಿಲ್ಲ ಹೊಸಬನು ಇವನಂತೆ |
ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ ಅ.ಪ
ಮಧುರಾ ಪಟ್ಟಣವಂತೆ ಮಾವನ ಮನೆಯಂತೆ |ನದಿಯ ದಾಟಲುಬೇಕಂತೆ ||ಎದುರು ಅರಿವಿಲ್ಲದಂತೆ ಏನೆಂಬೆ ಏಣಾಕ್ಷಿ |ಉದಯದಿ ಪಯಣವಂತೆ 1
ಒಳ್ಳೆ ವೇಳೆಗಳಂತೆ ಬಿಲ್ಲುಹಬ್ಬಗಳಂತೆ |ಎಲ್ಲಾ ಬೀದಿ ಸಿಂಗರವಂತೆ ||ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆ |ಅಲ್ಲೆ ತಾಯ್ತಂದೆಗಳ ಕಾಲಿಗೆ ನಿಗಳವಂತೆ 2
ಮತ್ತೆ ಪಾಂಡವರಂತೆ ಮೋಹದ ಸೋದರರಂತೆ |ಅತ್ತೆಯ ಮಕ್ಕಳಂತೆ ||ಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆ |ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ 3
ಅಲ್ಲಿ ಪುಟ್ಟಿದನಂತೆ ಅರಸನಳಿಯನಂತೆ |ಇಲ್ಲಿಗೆ ಬಂದನಂತೆ ||ಕಳ್ಳಕಪಟನಂತೆ ಎಂದಿಗೂ ಹೀಗಂತೆ |ನಿಲ್ಲದೆ ಯಶೋದೆಗೆ ಕಣ್ಣ ನೀರಂತೆ 4
ತಾಳಲಾರೆವು ನಾವು ಪುರಂದರವಿಠಲನ |ಕಾಣದೆ ನಿಲಲಾರೆವೆ ||ಕಾಲದಲೊಂದಾಗಿ ಕಾಮಿನಿಯರು ಕೂಡಿ |ಆಲಸ್ಯವಿಲ್ಲದೆ ಆಣೆಯಿಡುವ ಬನ್ನಿ * 5
****
pallavi
akka nandagOpana aramaneyoLagobba akrUra bandanante hokku baLasuvaLalla husiyanADuvaLalla akkO bAgila mundIga rathava kaNDe
caraNam 1
madhurA paTTaNavande mAva karesidanante nadiya dATalu bEkante
badalu mAtillavante Enembe ENAkSi udayadi payaNavante hE kAnte
caraNam 2
mallara kUTavante matte kALagavante ballida gajagaLante
ella kapaTavante ellU hIgillavante nillade yashOde kaNNige nIrante
caraNam 3
matte pANDavarante mOhada sOdara atteya makkaLante
suttu shatrugaLante sakala kAryagaLante cittajanayyana cittaveraDAdavante
caraNam 4
tALalAreve nAvu purandara viTTalana bAlatanadinda bhALa nambidevamma
kAladali ondAgi kAmini janarella AlOcane mADi AneyiDuva banni
***
following is kruti by vadirajaru also
ಶ್ರೀಕೃಷ್ಣಸಂಕೀರ್ತನೆ
ಅಕ್ಕ ನಂದಗೋಪನ ಅರಮನೆಯೊಳಗೊಬ್ಬಅಕ್ರೂರ ಬಂದನಂತೆಹೊಕ್ಕು ಬಳಸಲಿಲ್ಲ ಹುಸಿಯನಾಡುವಳಲ್ಲಇಕ್ಕೋ ಬಾಗಿಲಮುಂದೆ ಈಗ ರಥವ ಕಂಡೆ ಪ.
ಮಧುರಾಪಟ್ಟಣವಂತೆ ಮಾವನ ಮನೆಯಂತೆನದಿಯ ದಾಟಲಿಬೇಕಂತೆಎದುರು ದಾರಿಲ್ಲವಂತೆ ಏನೆಂಬೆ ಏಣಾಕ್ಷಿಉದಯದಲ್ಲಿ ಪಯಣವಂತೆ ಒಳ್ಳೆಯ ವೇಳೆಯಂತೆ1
ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆಬಲ್ಲಿದ ಗಜಗಳಂತೆಬಿಲ್ಲಹಬ್ಬವಂತೆ ಬೀದಿ ಶೃಂಗಾರವಂತೆಅಲ್ಲಿ ತಾಯಿ[ತಂದೆಯರ]ಕಾಲಿಗೆ ನಿಗಡವಂತೆ 2
ಅಲ್ಲಿ ಹುಟ್ಟಿದನಂತೆ ಅರಸಿನ ಮಗನಂತೆಇಲ್ಲಿಗೆ ಬಂದನಂತೆಎಲ್ಲ ಕಪಟವಂತೆ ಎಂದೂ ಹೀಗಿಲ್ಲವಂತೆನಿಲ್ಲದೆ ಯಶೋದೆಯ ಕಣ್ಣಲುದಕವಂತೆ3
ಮತ್ತೆ ಪಾಂಡವರಂತೆ ಮೋಹದ ಸೋದರರಂತೆಅತ್ತೆಯ ಮಕ್ಕಳಂತೆಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆಚಿತ್ತಜನಯ್ಯನ ಚಿತ್ತವೆರಡಾದುವಂತೆ4
ತಾಳಲಾರೆವು ನಾವು ತಾಟಂಕ ಹಯವದನ*ಬಾಲಕನಗಲಿದನೆನೀಲವೇಣಿಯರೆಲ್ಲ ನಾಳೆ ಉದಯದಲ್ಲಿಆಲೋಚನೆ ಮಾಡದೆ ಆಣೆಯಿಕ್ಕಿ ತಡೆವ 5
* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ಇದೆ.
***
ಅಕ್ಕ ನಂದಗೋಪನ ಅರಮನೆಯೊಳಗೊಬ್ಬ, ಅಕ್ರೂರ ಬಂದನಂತೆ
ಹೊಕ್ಕು ಬಳಸುವಳಲ್ಲ ಹುಸಿಯನಾಡುವಳಲ್ಲ,
ಅಕ್ಕೋ ಬಾಗಿಲ ಮುಂದೀಗ ರಥವ ಕಂಡೆ ||ಪ||
ಮಧುರಾಪಟ್ಟಣವಂತೆ ಮಾವ ಕರೆಸಿದನಂತೆ
ನದಿಯ ದಾಟಲು ಬೇಕಂತೆ
ಬದಲು ಮಾತಿಲ್ಲವಂತೆ ಏನೆಂಬೆ ಏಣಾಕ್ಷಿ
ಉದಯದಿ ಪಯಣವಂತೆ ಹೇ ಕಾಂತೆ
ಮಲ್ಲರ ಕೂಟವಂತೆ, ಮತ್ತೆ ಕಾಳಗವಂತೆ
ಬಲ್ಲಿದ ಗಜಗಳಂತೆ
ಬಿಲ್ಲಹಬ್ಬಗಳಂತೆ , ಬೀದಿ ಶೃಂಗಾರವಂತೆ
ಅಲ್ಲೆ ತಾಯಿತಂದೆರ ಕಾಲಿಗೆ ನಿಗಡವಂತೆ
ಅಲ್ಲೆ ಹುಟ್ಟಿದನಂತೆ, ಅರಸನಳಿಯನಂತೆ ,
ಇಲ್ಲಿಗೆ ಬಂದನಂತೆ
ಎಲ್ಲ ಕಪಟವಂತೆ, ಎಲ್ಲೂ ಹೀಗಿಲ್ಲವಂತೆ
ನಿಲ್ಲದೆ ಯಶೋದೆ ಕಣ್ಣಿಗೆ ನೀರಂತೆ
ಮತ್ತೆ ಪಾಂಡವರಂತೆ, ಮೋಹದ ಸೋದರ
ಅತ್ತೆಯ ಮಕ್ಕಳಂತೆ
ಸುತ್ತು ಶತ್ರುಗಳಂತೆ, ಸಕಲ ಕಾರ್ಯಗಳಂತೆ
ಚಿತ್ತಜನಯ್ಯನ ಚಿತ್ತವೆರಡಾದವಂತೆ
ತಾಳಲಾರೆವೆ ನಾವು ಪುರಂದರವಿಠಲನ
ಬಾಲತನದಿಂದ ಭಾಳ ನಂಬಿದೆವಮ್ಮ
ಕಾಲದಲಿ ಒಂದಾಗಿ ಕಾಮಿನಿಜನರೆಲ್ಲ
ಆಲೋಚನೆ ಮಾಡಿ ಆಣೆಯಿಡುವ ಬನ್ನಿ
**********
ಅಕ್ಕಾ, ನಂದಗೋಪನ ಅರಮನೆಯ
ಒಳಗೊಬ್ಬ ಅಕ್ರೂರ ಬಂದನಂತೆ
ಹುಸಿಯನಾಡುವಳಲ್ಲ ಇಕ್ಕೋ,
ಮಥುರಾ ಪಟ್ಟಣವಂತೆ, ಮಾವ ಕಂಸನಂತೆ
ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ,
ಮಲ್ಲರ ಕೂಟವಂತೆ, ಮತ್ತೆ ಕಾಳಗವಂತೆ,
ತಾಳಲಾರೆವು ನಾವು, ಪುರಂದರವಿಠಲನು ಬಾಲತ್ವದಲಿ ಪೋದರೆ
No comments:
Post a Comment