ರಾಗ ರೇಗುಪ್ತಿ. ಝಂಪೆ ತಾಳ
ಏನು ಮಾಡುವುದಿಲ್ಲವಮ್ಮ
ನಾನಂತು ನೋಡುವುದಿಲ್ಲವಮ್ಮ ||ಪ||
ನಾನು ಗೋಪರಿಗಾಗಿ ಮನೆಮನೆ ಸುಳಿದರೆ
ಮಾನಿನೀರೆಲ್ಲರು ದೂರುಮಾಡುತೈದಾರೆ ||ಅ||
ಕಣ್ಣುಮುಚ್ಚಾಟಕೆ ನಾನು ಅವರ
ಬಣ್ಣದ ಸೀರೆಯಲ್ಲಡಗಿದೆನು
ಸಣ್ಣವಣಾಟಕ್ಕೆ ನವನೀತ ಮೆದ್ದರೆ
ಬೆಣ್ಣೆಕಳ್ಳನೆಂದು ಬಾಯಿ ಮಾಡುತೈದಾರೆ ||
ವಿಷದ ಚಳಿಗಂಜಿ ಯಶೋದೆ, ನಾ
ಬೆದರಿ ಸೆರಗನೆ ಪಿಡಿದೆ
ಕುಸುರದ ಚೆಂಡೆಂತ ಕುಚಗಳ ಪಿಡಿದರೆ
ಶಶಿಮುಖೇರೆಲ್ಲರು ಸಾರಿ ದೂರುತೈದಾರೆ ||
ಗಿಳಿಬಿದ್ದು ಕಂಡು ಬೆದರಿ, ಅವರ
ತೋಳುಗಳ ನಾ ಪಿಡಿದೆ
ಆಲದ ಹಣ್ಣೆಂದು ತುಟಿಗಳ ಸವಿದರೆ
ಬಾಲೆಯರೆಲ್ಲ ಬಾಯಿಮಾಡುತೈದಾರೆ ||
ಹಾವಿನ ಹೆಡೆಗಂಜಿ ಬೆದರಿ, ಅವರ
ನಿರಿಗಳ ನಾ ಪಿಡಿದೆ
ಮಾವಿನ ಹಣ್ಣೆಂದು ಗಲ್ಲವ ಕಡಿದರೆ
ಭಾವೆಯರೆಲ್ಲರು ಬಹಳ ದೂರುತೈದಾರೆ ||
ಗೆಳೆಯರ ಕಂಡು ನಾ ಬಂದೆ, ನಾ
ಸುಳಿದೆ ಅವರ ಮನೆಯ ಮುಂದೆ
ಇಳೆಯೊಳು ಪುರಂದರವಿಠಲರಾಯನ
ಒಳಗೆ ಬಾಯೆಂದು ವನಿತೆ ಕೂತಿದ್ದಾರೆ ||
***
ಏನು ಮಾಡುವುದಿಲ್ಲವಮ್ಮ
ನಾನಂತು ನೋಡುವುದಿಲ್ಲವಮ್ಮ ||ಪ||
ನಾನು ಗೋಪರಿಗಾಗಿ ಮನೆಮನೆ ಸುಳಿದರೆ
ಮಾನಿನೀರೆಲ್ಲರು ದೂರುಮಾಡುತೈದಾರೆ ||ಅ||
ಕಣ್ಣುಮುಚ್ಚಾಟಕೆ ನಾನು ಅವರ
ಬಣ್ಣದ ಸೀರೆಯಲ್ಲಡಗಿದೆನು
ಸಣ್ಣವಣಾಟಕ್ಕೆ ನವನೀತ ಮೆದ್ದರೆ
ಬೆಣ್ಣೆಕಳ್ಳನೆಂದು ಬಾಯಿ ಮಾಡುತೈದಾರೆ ||
ವಿಷದ ಚಳಿಗಂಜಿ ಯಶೋದೆ, ನಾ
ಬೆದರಿ ಸೆರಗನೆ ಪಿಡಿದೆ
ಕುಸುರದ ಚೆಂಡೆಂತ ಕುಚಗಳ ಪಿಡಿದರೆ
ಶಶಿಮುಖೇರೆಲ್ಲರು ಸಾರಿ ದೂರುತೈದಾರೆ ||
ಗಿಳಿಬಿದ್ದು ಕಂಡು ಬೆದರಿ, ಅವರ
ತೋಳುಗಳ ನಾ ಪಿಡಿದೆ
ಆಲದ ಹಣ್ಣೆಂದು ತುಟಿಗಳ ಸವಿದರೆ
ಬಾಲೆಯರೆಲ್ಲ ಬಾಯಿಮಾಡುತೈದಾರೆ ||
ಹಾವಿನ ಹೆಡೆಗಂಜಿ ಬೆದರಿ, ಅವರ
ನಿರಿಗಳ ನಾ ಪಿಡಿದೆ
ಮಾವಿನ ಹಣ್ಣೆಂದು ಗಲ್ಲವ ಕಡಿದರೆ
ಭಾವೆಯರೆಲ್ಲರು ಬಹಳ ದೂರುತೈದಾರೆ ||
ಗೆಳೆಯರ ಕಂಡು ನಾ ಬಂದೆ, ನಾ
ಸುಳಿದೆ ಅವರ ಮನೆಯ ಮುಂದೆ
ಇಳೆಯೊಳು ಪುರಂದರವಿಠಲರಾಯನ
ಒಳಗೆ ಬಾಯೆಂದು ವನಿತೆ ಕೂತಿದ್ದಾರೆ ||
***
pallavi
Enu mADuvudilliavamma nAnantu nODuvudillavamma
anupallavi
nAnu gOparigAgi manemane suLidare mAninIrellaru dUrumADutaidAre
caraNam 1
kaNNumuccATake nAnu avara baNNada sIreyallaDagidenu
saNNavaNATakke navanIta meddare beNNe kaLLanendu bAyi mADutaidAre
caraNam 2
viSada caLiganji yashOde nA bedari seragane piDide kusurada
ceNDenda kucagaLa piDidare shashi mukhErellaru sAri dUrutaidAre
caraNam 3
giLibiddu kaNDu bedari avara tOLugaLa nA piDide Alada
haNNendu tuDigaLa savidare bAleyarella bAyi mADutaidAre
caraNam 4
hAvina heDeganji bedari avara nirigaLa nA piDide mAvina
haNNendu gallava kaDidare bhAveyarella bahaLa dUrutaidAre
caraNam 5
geLeyara kaNDu nA bande nAnu suLide avara maneya munde
iLeyoLu purandara viTTalarAyana oLage bAyendu vanite kUtiddAre
***
No comments:
Post a Comment