Wednesday, 4 December 2019

ಒಲ್ಲೆನೆ ವೈದಿಕ ಗಂಡನ ಎಲ್ಲಾದರೂ purandara vittala

ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)

ಒಲ್ಲೆನೆ ವೈದಿಕ ಗಂಡನ ನಾ-
ನೆಲ್ಲಾದರು ನೀರ ಧುಮುಕುವೆನಮ್ಮ ||ಪ ||

ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ
ಕೆಟ್ಟ ಸೀರೆಯ ನಾನುಡಲಾರನೆ
ಹಿಟ್ಟು ತೊಳಿಸಿ ಎನ್ನ ರಟ್ಟೆಲ್ಲ ನೊಂದವು
ಎಷ್ಟೆಂತ ಹೇಳಲಿ ಕಷ್ಟದ ಒಗತನ ||

ಕೃಷ್ಣಾಜಿನವನ್ನು ರಟ್ಟೆಲಿ ಹಾಕಿಕೊಂಡು
ಬೆಟ್ಟಿಲಿ ಗಿಂಡಿಯ ಹಿಡಿದಿಹನೆ
ದಿಟ್ಟತನದಿ ನಾನೆದುರಿಗೆ ಹೋದರೆ
ದೃಷ್ಟಿಯಿಂದಲಿ ಎನ್ನ ನೋಡನಮ್ಮ ||

ನಿನ್ನಾಣೆ ಹುಸಿಯಲ್ಲ ಬಿನ್ನಾಣ ಮಾತಲ್ಲ
ಕಣ್ಣು ಸನ್ನೆಯಂತು ಮೊದಲೆ ಇಲ್ಲ
ಮುನ್ನಿನ ಜನ್ಮದಲ್ಲಿ ಪುರಂದರವಿಠಲನ
ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ ||
***

pallavi

ollane vaidika gaNDana nAnellAdaru nIra dhumukuvenamma

caraNam 1

uTTEnendare illa toTTEnendare illa keTTa sIreya nAnuDalArane
hiTTu toLisi enna raTTella nondavu eSTenda hELi kaSTada ogatana

caraNam 2

krSNAjinavannu kaTTeli hAki koNDu beTTili giNDiya hiDidihane
diTTatanadi nAnedurige hOdhare drSTiyindali enna nODanamma

caraNam 3

ninnANe husiyalla binnANa mAtalla kaNNu sanneyandu modale illa
munnina janmadalli purandara viTTalana cennAgi pUjeya mADalillamma
***

ಒಲ್ಲೆನೆ ವೈದಿಕ ಗಂಡನ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||

ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ

ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||

ಕೃಷ್ಣಾಜಿವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ

ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||

ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,

ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||
*******

ಪುರಂದರದಾಸರು
ಒಲ್ಲೆನೆ ವೈದಿಕ ಗಂಡನ ನಾನೆಲ್ಲಾದರೂ ನೀರ ಧುಮುಕುವೆನಮ್ಮ ಪ.

ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ |ಕೆಟ್ಟ ಸೀರೆಯ ನಾನುಡಲಾರೆನೆ ||ಹಿಟ್ಟ ತೊಳಸಿ ಎನ್ನ ರಟ್ಟೆಯಲ್ಲ ನೊಂದವು |ಎಷ್ಟೆಂದು ಹೇಳಲಿ ಕಷ್ಟದ ಒಗತನ 1

ಕೃಷ್ಣಾಜಿನವನು ರಟ್ಟೆಯಲಿ ಹಾಕಿಕೊಂಡು ||ಬೆಟ್ಟಲಿ ಗಿಂಡಿಯ ಹಿಡಿದಿಹನೆ ||ದಿಟ್ಟತನದಿ ನಾನೆದುರಿಗೆ ಹೋದರೆ |ದೃಷ್ಟಿಯಿಂದಲಿ ಎನ್ನ ನೋಡನಮ್ಮ 2

ನಿನ್ನಾಣೆ ಹುಸಿಯಲ್ಲ ಬಿನ್ನಣ ಮಾತಲ್ಲ |ಕಣ್ಣಸನ್ನೆಯಂತು ಮೊದಲೆ ಇಲ್ಲ ||ಮುನ್ನಿನ ಜನ್ಮದಲಿ ಪುರಂದರವಿಠಲನ |ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ 3

*******

No comments:

Post a Comment