Tuesday, 3 December 2019

ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ purandara vittala

ರಾಗ ಪೂರ್ವಿ ಅಟತಾಳ

ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ
ಸುಮ್ಮನಿದ್ದರೆ ದಾರು ಕೇಳುವರಿಲ್ಲ ||ಪ||

ಏಡಿ ಕಡಗವಿಟ್ಟು ಫಲವೇನಿಲ್ಲ
ಬೇಡ ಮುತ್ತಿನ ಬೆಲೆ ಏನು ತಾ ಬಲ್ಲ
ಕಾಡ್ಹಳ್ಳಿ ಗೌಡ ತಾನರಸಾಗಲಿಲ್ಲ
ವೇದಶಾಸ್ತ್ರಕೆ ಮೂಢ ತಲೆದೂಗಲಿಲ್ಲ ||

ಮೂಕ ತಾ ಮಾತಿನ ಸವಿಯೇನು ಬಲ್ಲ
ಲೌಕಿಕ ಬೇನೆ ಸನ್ಯಾಸಿ ಏನು ಬಲ್ಲ
ಕಾಕುಮಾನವ ಪುಣ್ಯಪಾಪೇನು ಬಲ್ಲ
ಶ್ರೀ ಕೃಷ್ಣನ ನೆನೆಯದವ ಮಾನವನಲ್ಲ ||

ಕತ್ತೆಗೆ ಹೂರಣದ ರುಚಿ ತಿಳಿಯಲಿಲ್ಲ
ತೊತ್ತಿಗೆ ಪತಿವ್ರತೆ ಗುಣ ಬರಲಿಲ್ಲ
ಮುತ್ತಿನ ಹಾರ ಕಪಿಗೆ ಹಾಕ ಸಲ್ಲ
ಕುತ್ತಿಗೆ ಕೊಯ್ವಗೆ ಕರುಣವೇ ಇಲ್ಲ ||

ಅಚ್ಚ ಹೆಣ್ಣಿನ ಸಂಗ ಷಂಡೇನು ಬಲ್ಲ
ಮುಚ್ಚಿ ಮಾತ್ಹೇಳಿದರೆ ನ್ಯಾಯೇನು ಇಲ್ಲ
ಸ್ವಚ್ಛ ದೀಪದ ಬೆಲಕು ಕುರುಡೇನು ಬಲ್ಲ
ಮೊಚ್ಚೆಗಾರ ಸಕಲಾತ್ಯೇನು ಬಲ್ಲ ||

ಹೆಣ್ಣಿಗೆ ಜಾರತ್ವ ಗುಣ ತರವಲ್ಲ
ತಣ್ಣೀರು ಬೇಸಿಗ್ಗೆ ಗುಣ ತೋರಿತಲ್ಲ
ಘನ್ನ ಪುರಂದರವಿಠಲನ ಭಕ್ತರೇ
ಅನ್ಯಾಯವರಿಯದೇ ಭವನೀಗ್ವರಲ್ಲ ||
***

pallavi

illi namma shAstra mAruvudilla summaniddare dAru kELuvarilla

caraNam 1

Edi kaDagaviTTu phalavEnilla bEDa tA muttina bEle Enu balla
kADhaLLigauDa tAnarasAgavilla vEda shAstrake mUDha tale tUgalilla

caraNam 2

mUka tA mAtina saviyEnu balla laukika bEne sanyAsEnu balla
kAkumAnava puNya pApEnu balla shrI krSNana neneyatava mAnavanalla

caraNam 3

kattege huNarada ruci tiLiyalilla tottige pati vrate guNa baralilla
muttina hAra kapige hAka salla kuttige koivage karuNave illa

caraNam 4

acca heNNina sanga SaNDEnu balla mucci mAthELidare nyAyEnu illa
svaccha dIpada beLagu kuraDEnu balla moccegAra sakalAtyEnu balla

caraNam 5

heNNige jAratva guNa taravalla taNNIru bEsigge guNa tOritalla
ghanna purandara viTTalana bhaktarE anyAyavoreyade bhava nIgvarella
***

No comments:

Post a Comment