Wednesday 15 December 2021

ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯ purandara vittala HARINAAMA KEERTANE ANUDINA MAALPAGE NARAKA BHAYA

ರಾಗ ಧನ್ಯಾಸಿ ತಾಳ ಆದಿ 


ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ ||ಪ||

ಹರಿನಾಮವೊಂದೆ ಯಮನಾಳ್ಗಳನೊದೆದು 
ಅಜಮಿಳನಿಗೆ ಸುಕ್ಷೇಮವಿತ್ತ ಹರಿ ||ಅ||

ಕೇಸರಿಗಂಜದ ಮೃಗವುಂಟೆ ದಿನೇಶನಿಗಂಜದ ತಮವುಂಟೆ
ವಾಸುದೇವ ವೈಕುಂಠ ಜಗನ್ಮಯ ಕೇಶವ ಕೃಷ್ಣಾ ಎಂದುಚ್ಚರಿಸುತ ||

ಕುಲಿಶಕ್ಕೆದುರಹ ಗಿರಿಯುಂಟೆ ಬಲು ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನಾರ್ದನ ಕಲುಷಹರಣ ಕರಿರಾಜ ವರದನೆಂದು ||

ಗರುಡನಿಗಂಜದ ಫಣಿಯುಂಟೆ ದಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ದಾಮೋದರ ಪುರಂದರವಿಠಲನೆಂದುಚ್ಚರಿಸುತ ||
****

ರಾಗ ಧನಶ್ರೀ. ಆದಿತಾಳ (raga, taala may differ in audio)

ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ |ನರಕ ಭಯಗಳುಂಟೆ? ಪ

ಕೇಸರಿಗಂಜದ ಮೃಗವುಂಟೆ?-ದಿ-|ನೇಶನಿಗಂಜದ ತನುವುಂಟೆ? ||ವಾಸದೇವ ವೈಕುಂಠ ಜಗನ್ಮಯ |ಕೇಶವ ಕೃಷ್ಣ ನೀನೆಂದುಚ್ಚರಿಸುವ1

ಕುಲಿಶವನೆದುರಿಪ ಗಿರಿಯುಂಟೆ?-ಬಲು |ಪ್ರಳಯ ಬಂದಾಗ ಜೀವಿಪರುಂಟೆ?ಜಲಜನಾಭ ಗೋವಿಂದ ಜನಾರ್ಧನ |ಕಲುಷಹರಣಕರಿರಾಜ ರಕ್ಷಕನೆಂಬ 2

ಗರುಡಗೆ ಅಂಜದ ಫಣಿಯುಂಟೆ? -ದ-|ಳ್ಳುರಿಯಲಿ ಬೇಯದ ತೃಣವುಂಟೆ? ||ನರಹರಿನಾರಾಯಣ ಕೃಷ್ಣ ಕೇಶವ |ಪುರಂದರವಿಠಲ ನೀನೆಂದುಚ್ಚರಿಸುವ3
***

rendered by
shrI Ananda rAo, srIrangam
to aid learning the dAsara pada for beginners

rAga: danyAsi
tALa: Adi

nAma kIrtane anudina mALpage naraka bhayagaluNTe |
nAmavonde yamanALgaLanodedu
ajAmiLanige sUkShEmavitta hari ||


kEsariga~njada mRgavuNTe
dinEshaniga~njada tamavuNTe |
vAsudEva vaikunTa jaganmaya
kEshava kRShNA enduccarisuta || nAma kIrtane ... ||


kulishakkeduriha giriyuNTe balu
praLaya bandAga jIviparuNTe |
jalajanAbha gOvinda janArdana
kaluShaharaNa karirAja varadanendu || nAma kIrtane ... ||


garudaniga~njada phaNiyuNTe
daLLuriyali bEyada tRNavuNTe |
narahari nArAyaNa dAmOdara
purandara viTThalanenduccarisuta || nAma kIrtane ... ||
***

No comments:

Post a Comment