ಯಾತಕ್ಕೆ ದುರಾಶೆ ಎಲೆ ಮನವೆ ||ಪ||
ಎಲೆ ಮನವೆ ನೀ ತಿಳಿ ಮನವೆ ||ಅ||
ಜನ್ಮಜನ್ಮಾಂತರದ ಪೂಜೆ ಫಲವು
ಅನುಭವಿಸಲ್ಲದೆ ಬಿಡದೆಲೊ ಮನವೆ ||
ಪಣೆಯಲ್ಲಿ ಬರೆದ ಬ್ರಹ್ಮನ ಲಿಪಿಯ
ಮೀರುವುದುಂಟೆ ಜಗದೊಳು ಮನವೆ ||
ಪುರಂದರವಿಠಲನ ಚರಣಕಮಲಗಳು
ಅನುದಿನ ಭಜಿಸಿ ಬದುಕೆಲೊ ಮನವೆ ||
***
ರಾಗ ಪೂರ್ವಿ ರೂಪಕ ತಾಳ (raga tala may differ in audio)
pallavi
yAtakke durAshi ele manave
anupallavi
ele manave nI tiLi manave ninagyAtakke durAshi
caraNam 1
janma janmAntarada pUje balavu anubhavisallade biDadelo manave
caraNam 2
phaNeyalli bareda brahmaNa lipiya mIruvudunTe jagadoLu manave
caraNam 3
purandara viTTalana caraNa kamalagaLa anudina bhajisi badukelo manave
***
No comments:
Post a Comment