Thursday 5 December 2019

ನಾ ಮುಂದೆ ರಂಗ ಕೃಷ್ಣ ನೀ ಎನ್ನ ಹಿಂದೆ purandara vittala

ಪುರಂದರದಾಸರು
ರಾಗ ಕಾಂಭೋಜಿ. ಝಂಪೆ ತಾಳ 

ನಾ ಮುಂದೆ ರಂಗ ನೀ ಎನ್ನ ಹಿಂದೆ
ಎಂದೆಂದು ನಿನ್ನ ನಾಮವ ಎಂದಂಬೆ ||ಪ||

ಅನಾಥನು ನಾನು ಎನಗೆ ಬಂಧು ನೀನು
ಹೀನನು ನಾನು ದಯವಂತ ನೀನು
ಧ್ಯಾನಮಂತ್ರನು ನೀನು ಧ್ಯಾನಿಸುವನು ನಾನು
ಜ್ಞಾನಗಮ್ಯನು ನೀನು ಅಜ್ಞಾನಿ ನಾನು ||

ಸುರತರುವೆ ನೀನು ಫಲ ಬಯಸುವಂಥವ ನಾನು
ಸುರಧೇನು ನೀನು ಕರೆದುಂಬೆ ನಾನು
ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು
ಶರಧಿಕ್ಷೀರನೆ ನೀನು ತರಳನು ನಾನು ||

ಒಂದರೊಳೊಂದೊಂದು ಅವಗುಣವ ಹೊಂದಿದೆ
ಕಂದನೆಂದೆತ್ತಿಕೊ ಸಲಹೊ ಬೇಗ
ತಂದೆ ಶ್ರೀಪುರಂದರವಿಠಲರಾಯ ನೀ
ಬಂದೆನ್ನ ಮನದಲಿ ನಲಿನಲಿದಾಡು ||
***

pallavi

nA munde ranga nI enna hinde endendu ninna nAmava endambe

caraNam 1

anAthanu nAnu enage bandhu nInu hInanu nAnu dayavanta nInu
dhyAna mantranu nInu dhyAnisuvanu nAnu jnAna gamyanu nInu ajnAni nAnu

caraNam 2

surataruve nInu bala bhayasuvanthava nAnu suradhEnu nInu karadumbe nAnu
vara cintAmaNi nInu pari cintisuve nAnu sharadhi kSIrane nInu taraLanu nAnu

caraNam 3

ondaroLondondu avaguNava hondide kandanendettiko salaho bEga
tande purandara viTTalarAya nI bandenna manadali nali nalidADu
***

ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|ನಾಮವೆ ಕಾಯಿತು ನಾನೇನೆಂದೆ ಪ

ಸುರತರುನೀನು ಫಲ ಬಯಸುವೆ ನಾನು |ಸುರಧೇನುನೀನು ಕರೆದುಂಬೆ ನಾನು ||ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |ಶರಧಿಕ್ಷೀರನು ನೀನು ತರಳನೈ ನಾನು 1

ಅನಾಥನೈ ನಾನು ಎನಗೆ ಬಂಧುವು ನೀನು |ದೀನಮಾನವನಾನು ದಯವಂತ ನೀನು ||ದಾನವಂತಕ ನೀನು ಧೇನಿಸುವೆನು ನಾನು |ಜ್ಞಾನಗಂಭೀರ ನೀನು ಅಙ್ಞÕನಿ ನಾನು 2

ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||ತಂದೆ ಪುರಂದರವಿಠಲರಾಯ ನೀ |ಬಂದೆನ್ನ ಮನದಲ್ಲಿ ನಲಿನಲಿದಾಡೊ 3
********

No comments:

Post a Comment