Thursday, 5 December 2019

ನಳಿನ ಜಾಂಡತಲೆಯದೂಗೆ purandara vittala

ಪುರಂದರದಾಸರು
ನಳಿನ ಜಾಂಡತಲೆಯದೂಗೆ |ಇಳೆಯು ನಲಿದು ಮೋಹಿಸುತಿರಲು ||ಕೊಳಲ ಪಿಡಿದು ಬಾರಿಸಿದನು |ಚೆಲುವ ಕೃಷ್ಣರಾಯನು ಪ

ಪೊಳೆವ ಪೊಂಬಟ್ಟೆಯ ದಟ್ಟಿ |ಅಳವಡಿಸಿ ನೆಗಹಿನಿಂದ ||ಹಲವು ರನ್ನದುಂಗುರವಿಟ್ಟ |ಚೆಲುವ ಬೆರಳ ನಟಿಸುತ |||ಲಲಿತವಾಮಭಾಗತೋಳ-|ಲೊಲಿದು ಓರೆನೋಟದಿಂದ ||ಬಲದಪಾದಎಡಕೆ ಚಾಚೆ |ನಳಿನಪದಗಳೊಪ್ಪುತಿರಲು 1

ಸೆಳನಡುವಿನೊಳಗೆ ಕತ್ತರಿ |ಕಳೆಯ ಸಂಚಿ, ಗಜುಗು ಚೀಲ ||ಬಿಳಿಯ ಮಣಿಯು ಗುಳ್ಳೆಗಳಿರಲು |ಮಲಯಜಾನು ಲೇಪನ ||ಜಲಜನೇತ್ರ ಕೌಸ್ತುಬಾಧಿ-|ಗಳದಿ ಸ್ವರಗಳೊಪ್ಪುತಿರಲು ||ಲಲಿತವೇಣುಕಲ್ಪನೆಯಲಿ ಗೋ-|ವಳರೆಲ್ಲರು ಕುಣಿಯಲು 2

ಮಾರವಿ ದೇಸಿ ಗುರ್ಜರಿ ಭೈರವಿ |ಗೌರಿನಾಟಿಸಾವೇರಿ ಆಹೇರಿ ||ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|ಶಕರಾಭರಣ ರಾಗದಿ ||ಪೂರವಿ ಕಲ್ಯಾಣಿ ವಸಂತ ತೋಡಿ |ವರಾಳಿ ಗುಂಡಕ್ರಿ ಸಾರಂಗ ಸಾಳಗ ||---------------------ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3

ಹರುಷದಿ ಬಾರಿಸುವ ರವಕೆ |ಪುರದ ಸ್ತ್ರೀ ಜನರು ಎಲ್ಲ ||ಮರೆದು ಮಕ್ಕಳ ಮನೆಯ ಕೆಲಸ |ಮರೆದು ಹರಿಯ ಬಳಸಲು ||ಕರಿಯು ಮೃಗವುಕೇಸರಿಶರಭ|ಹರಿಣ ನವಿಲುಉರಗಮೋಹಿಸಿ ||ನೆರೆದು ಮರೆದು ಜಾತಿವೈರವ |ಸ್ವರವ ಕೇಳುತಿರಲು 4

ಕರಗೆ ಗಿರಿಯ ಕಲ್ಲು ತರುಗ-|ಳೆರಗಿ ಪಕ್ಷಿ ತತಿಗಳಿರಲು ||ಸುರರುಸುಮನ ಸುರಿಯುತಿರಲು |ಧರೆಯು ಮುದದಿ ಕುಣಿಯುತಿರಲು ||ಶರಧಿಉಕ್ಕಿಸರಿತುಸೊಕ್ಕಿ |ಪುರರಿಪುವಿಧಿಪೊಗಳುತಿರಲು ||ವಿರಚಿಸಿದ ಪುರಂದರವಿಠಲ |ಮುರಲಿಗಾನ ಮಾಡಿದ 5
********

No comments:

Post a Comment