Wednesday, 15 December 2021

ತನುವ ನೀರೊಳಗದ್ದಿ ಫಲವೇನು ಮನದಲ್ಲಿ ದೃಢ purandara vittala TANUVA NEEROLAGADDI PHALAVENU MANADALLI DHRUDA







ತನುವ ನೀರೊಳಗದ್ದಿ ಫಲವೇನು
ಮನದಲ್ಲಿ ದೃಢ ಭಕ್ತಿ ಇಲ್ಲದ ಮನುಜನು

ದಾನ ಧರ್ಮಗಳನ್ನು ಮಾಡುವುದೆ ಸ್ನಾನ
ಜ್ಞಾನ ತತ್ವಂಗಳ ತಿಳಿವುದೆ ಸ್ನಾನ
ಹೀನ ಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನೋಡುವುದೆ ಸ್ನಾನ

ಗುರುಗಳ ಪಾದ ದರ್ಶನವೆ ಸ್ನಾನ
ಹಿರಿಯರ ದರ್ಶನ ಮಾಡುವುದೇ ಸ್ನಾನ
ಕರೆದು ಅನ್ನವನಿಕ್ಕುವುದೊಂದು ಸ್ನಾನ
ನರಹರಿ ಚರಣ ನಂಬುವುದೆ ಸ್ನಾನ

ದುಷ್ಟರ ಸಂಗವ ಬಿಡುವುದೆ ಸ್ನಾನ
ಶಿಷ್ಟರ ಸಹವಾಸ ಮಾಡುವುದೆ ಸ್ನಾನ
ಸೃಷ್ಟಿಯೊಳಗೆ ಸಿರಿ ಪುರಂದರ ವಿಠಲನ
ಮುಟ್ಟಿ ಭಜಿಸಿದರೆ ವಿರಜಾ ಸ್ನಾನ
***

ರಾಗ ಮಧ್ಯಮಾವತಿ ಅಟ ತಾಳ (raga, taala may differ in audio)

pallavi

tanuva nIroLagittu balavEnu manadalli drDha bhakti illada manujanu

caraNam 1

dAna dharmagaLannu mADuvude snAna jnAna tatvangaLa tiLivude snAna
hIna pApangaLa biDuvude snAna dhyAnadi mAdhavana nODuvude snAna

caraNam 2

gurugaLa pAda darshanava snAna hariyara darshana mADuvude snAna
karedu annavanikkuvudondu snAna narahari caraNa nambuvude snAna

caraNam 3

duSTara sangava biDuvude snAna shiSTara sahavAsa mADuvude snAna
shrSTiyoLage siri purandara viTTalana muTTi bhajisidare virajA snAna
***

ತನುವ ನೀರೊಳಗದ್ದಿ ಫಲವೇನು 
ಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.

ಧಾನ - ಧರ್ಮಗಳನು ಮಾಡುವುದೇ ಸ್ನಾನಜಾÕನ - ತತ್ತ್ವಂಗಳ ತಿಳಿಯುವುದೇ ಸ್ನಾನಹೀನಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನಂಬುವುದೆ ಸ್ನಾನ 1

ಗುರುಗಳ ಶ್ರೀಪಾದತೀರ್ಥವೆ ಸ್ನಾನಹಿರಿಯರ ದರುಶನ ಮಾಡುವುದೆ ಸ್ನಾನಕರೆದು ಅನ್ನವನು ಇಕ್ಕುವುದೊಂದು ಸ್ನಾನಸಿರಿಹರಿತರಣ ನಂಬುವುದೊಂದು ಸ್ನಾನ 2

ದುಷ್ಟರ ಸಂಗವ ಬಿಡುವುದೊಂದು ಸ್ನಾನಕಷ್ಟಪಾಪಂಗಳನು ಹರಿವುದೆ ಸ್ನಾನಸೃಷ್ಟಿಯೊಳಗೆ ಸಿರಿಪುರಂದರವಿಠಲನಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ 3
******

No comments:

Post a Comment