ಯಾರು ಬಿಟ್ಟರು ಕೈಯ ನೀ ಬಿಡದಿರು ಕಂಡ್ಯ, ನಾರಾಯಣ, ಸ್ವಾಮಿ
ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ, ನಾರಾಯಣ ||
ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ, ನಾರಾಯಣ
ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ, ನಾರಾಯಣ
ಅದ ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ, ನಾರಾಯಣ
ಬಹು ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ, ನಾರಾಯಣ ||
ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು, ನಾರಾಯಣ, ಸ್ವಾಮಿ
ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ, ನಾರಾಯಣ
ಹಂಬಲಿಸಿದರಂಜಬೇಡವೆಂಬುವರಿಲ್ಲ, ನಾರಾಯಣ
ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ, ನಾರಾಯಣ ||
ಶಿಶು ಅವತಾರದಿ ಪಶುಗಳ ನೀ ಕಾಯ್ದೆ, ನಾರಾಯಣ, ಸ್ವಾಮಿ
ದಶ ಅವತಾರದಿ ಚಕ್ರವ ತಾಳಿದೆ, ನಾರಾಯಣ
ವಿಷದ ಕಾಳಿಂಗನ ಮಡುವ ಕಲಕಿ ಬಂದೆ, ನಾರಾಯಣ
ವಸುಧೆಯೊಳಧಿಕ ಪುರಂದರವಿಠಲನೆ, ನಾರಾಯಣ ||
***
ರಾಗ ನಾದನಾಮಕ್ರಿಯ ಆದಿತಾಳ (raga, taala may differ in audio)
pallavi
yAru biTTaru kaiya nI biDe nambide nArAyaNa
anupallavi
svAmi nI biTTare mundinnAru kAivara kANe nArAyaNa
caraNam 1
munde nODidare hebbuli bAi biDutide nArAyaNa
hinde nODidare hebbAvu nungutalide nArAyaNa
ada kaNDu maDuva bILalu alli negaLige nArAyaNa
bahu bandhanadoLu sikki baLasi nondenayya nArAyaNa
caraNam 2
nambi nA piDidare komballa muridAvu nArAyaNa svAmi
hambali sidharanja bEDavembuvarilla nArAyaNa
tumbida hoLeyalli harigOlanEride nArAyaNa
ambiganandenna daDava sEriso munna nArAyaNa
caraNam 3
shishu avatAradi pashugaLa nI kAide nArAyaNa svAmi
dasha avatAradi cakrava tALide nArAyaNa
viSada kALingana maDuva kalaki bande nArAyaNa
vasudheyoLadhika ourandara viTTalane nArAyaNa
***
No comments:
Post a Comment