Friday, 12 November 2021

ಹಣ್ಣು ತಾ ಬೆಣ್ಣೆ ತಾ ಗೋಪಮ್ಮ ಅಡವಿಯೊಳಗೆ purandara vittala HANNU TAA BENNE TAA GOPAMMA ADAVIYOLAGE




ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ
ಹಣ್ಣು ತಾ ಬೆಣ್ಣೆ ತಾ ||ಪ||

ಅಡವಿಯೊಳಗೆ ಅಸುರನ ಕೊಂದ ಕೈಗೆ
ಮಡುವಿನೊಳಗೆ ಮಕರನ ಸೀಳ್ದ ಕೈಗೆ
ಪೊಡವಿಯೊಳಗೆ ಚೆಂಡನಾಡಿದ ಕೈಗೆ
ಕಡುಬೇಗದಿಂದಲಿ ಬೇಡಿದ ಕೈಗೆ ||

ಶಂಖಚಕ್ರಗಳನು ಪಿಡಿದಂಥ ಕೈಗೆ
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ
ಬಿಂಕದಿಂದಲಿ ಕೊಳಲೂದುವ ಕೈಗೆ
ಪಂಕಜ ಮುಖಿಯರ ಕುಣಿಸುವ ಕೈಗೆ ||

ದಿಟ್ಟತನದಿ ಬೆಟ್ಟವೆತ್ತಿದ ಕೈಗೆ
ಸೃಷ್ಟಿಯ ದಾನವ ಬೇಡಿದ ಕೈಗೆ
ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ
ಕೆಟ್ಟ ದಾನವರನ್ನು ಬಡಿದಂಥ ಕೈಗೆ ||

ಕಾಳಿಯ ಮಡುವನು ಕಲಕಿದ ಕೈಗೆ
ಸೋಳ ಸಾಸಿರ ಗೋಪಿಯರಾಳಿದ ಕೈಗೆ
ಮೇಳದ ಭಕ್ತರುದ್ಧರಿಸುವ ಕೈಗೆ
ಏಳು ಗೂಳಿಯ ಗೆದ್ದ ಯದುಪತಿ ಕೈಗೆ ||

ಬಿಲ್ಲು ಬಾಣಗಳನ್ನು ಪಿಡಿದಂಥ ಕೈಗೆ
ಮಲ್ಲರ ಸಾಧನ ಮಾಡಿದ ಕೈಗೆ
ಎಲ್ಲ ದೇವರ ದೇವ ರಂಗನ ಕೈಗೆ
ಬಲ್ಲಿದ ಪುರಂದರವಿಠಲನ ಕೈಗೆ ||
***********

ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ
(raga, taala may differ in audio)

pallavi

haNNu tA beNNe tA gOpamma haNNu tA beNNe tA

caraNam 1

aDaviyoLage asurana konda kaige maDuvinolage makarana sILda kaige
poDaviyoLage ceNDanADida kaige kaDu bhEkadindali bEDida kaige

caraNam 2

shankha cakragaLanu piDidanda kaige shankeyillade mAvana konda kaige
binkadindali koLalUduva kaige pankaja mukhiyara kuNisuva kaige

caraNam 3

diTTatanadi beTTavettida kaige shrSTiya dAnava bEDida kaige
duSTa bhUparanella maDuhida kaige keTTa dAnavarannu baDidanda kaige

caraNam 4

kALiya maDuvanu kalakida kaige sOLa sAsira gOpiyarALida kaige
mELada bhaktaruddharisuva kaige Elu gULiya gedda yadupati kaige

caraNam 5

billu bANagaLannu piDidanda kaige mallara sAdhana mADida kaige
ella dEvara dEva rangana kaige ballida purandara viTTalana kaige
***

ಹಣ್ಣು ತಾ ಬೆಣ್ಣೆ ತಾರೆ ಗೋಪಮ್ಮ-|
ಹಣ್ಣು ತಾ ಬೆಣ್ಣೆ ತಾರೆ ಪ

ಅಡವಿಯೊಳಗೆ ಅಸುರನ ಕೊಂದ ಕೈಗೆ |
ಮಡುವಿನೊಳಗೆ ಮಕರನ ಸೀಳ್ದ ಕೈಗೆ ||
ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |
ಸಡಗರದಲಿ ಭೂಮಿ ಬೇಡಿದ ಕೈಗೆ 1

ಶಂಖ ಚಕ್ರಗಳ ಪಿಡಿದಂಥ ಕೈಗೆ |
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||
ಬಿಂಕದಿಂದಲಿ ಕೊಳಲೂದುವ ಕೈಗೆ |
ಪಂಕಜಮುಖಿಯರ ಕುಣಿಸುವ ಕೈಗೆ 2

ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|
ಸೃಷ್ಟಿಯ ದಾನವ ಬೇಡಿದ ಕೈಗೆ ||
ದುಷ್ಟಭೂಪರನೆಲ್ಲ ಮಡುಹಿದ ಕೈಗೆ |
ಕೆಟ್ಟ ದಾನವರನು ಸದೆಬಡಿದ ಕೈಗೆ 3

ಕಾಳಿಯ ಮಡುವನು ಕಲಕಿದ ಕೈಗೆ |
ಸೋಳಸಾಸಿರ ಗೋಪಿಯರಾಳಿದ ಕೈಗೆ ||
ಮೇಳದ ಭಕ್ತರುದ್ಧರಿಸುವ ಕೈಗೆ |
ಏಳು ಗೂಳಿಯ ಗೆದ್ದ ಯದುಪನ ಕೈಗೆ 4

ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |
ಮಲ್ಲಸಾಧನೆಯನು ಮಾಡಿದ ಕೈಗೆ ||
ಎಲ್ಲ ದೇವರದೇವ ರಂಗನ ಕೈಗೆ |
ಬಲ್ಲಿದಪುರಂದರವಿಠಲನ ಕೈಗೆ5
**********

No comments:

Post a Comment