ರಾಗ ಸಾವೇರಿ ಝಂಪೆ ತಾಳ
ಆರು ಸರಿ ನಿನಗೆ ಬೊಮ್ಮಾಂಡದೊಳಗೆ
ವೀರ ರಾಮನ ಬಂಟ ಧೀರ ಹನುಮಂತ ||ಪ||
ತೆಂಕ ಜಲಧಿಯ ಲಘುವಿಂದ ದಾಟಿ ಅಕ-
ಳಂಕ ರಾಮನ ಬೆರಳ ಮುದ್ರಿಕೆಯನು
ಲಂಕಾವಿದೆಂದು ಕೊಟ್ಟವನಿಜೆಯ ಸಂತೈಸಿ
ಲಂಕೆಯನುರುಪಿದೆ ನಿಶ್ಶಂಕ ಹನುಮಂತ ||
ಅಂಡಲೆದು ದಶವದನನ ಸುರಪಡೆಗಳ ಕಡಿದು
ಖಂಡತುಂಡನು ಮಾಡಿ ಕಲಿ ರಾಮರ
ದಂಡಿಲೊಬ್ಬರ ನೋಯದಂತೆ ಕಾದಿಸಿ ಖಳರ
ಹಿಂಡುಗಳ ಕೂಡ ಉದ್ದಂಡ ಹನುಮಂತ ||
ಅಸುರ ಬಲ ವಾನರರ ಕುಸುರಿ ಅರಿಯಲು ಭರ-
ವಸೆಯಿಂದ ಸಂಜೀವನವ ತಂದು
ಅಸುಬಿ ವಾನರರಿಗೋಸುಗ ಗಿರಿಯನೆತ್ತಿ ಚಿ-
ಮ್ಮಿಸಿ ನೆಲಕೆ ನಿಲಿಸಿದೆ ನೀ ಅಸಮ ಹನುಮಂತ ||
ಪರರಿಗಸದಳವೆನಿಪ ನಿಜಬಲರೊಡೆಯ ಪಂಥ
ಸಿರಿಯುರಕ್ಕೆರಗಿ ಎಸೆದಾಗ ಬೀಳೆ
ಅರಸು ರಾಮರ ಪಂಥಕಡ್ಡಲಾದೆನು ಎಂದು
ಮರುಗಿದ ಮಹಾತ್ಮನುದ್ದುರುಟು ಹನುಮಂತ ||
ಭೂಮಿಜಾತೆಯ ಮುಖಾಂಬುಜಮಿತ್ರನಾದ ಸಿರಿ
ರಾಮ ಗುರು ಪುರಂದರ ವಿಠಲನು
ತಾ ಮನದಿ ನಿಶ್ಚಯಿಸಿ ಬೇಡೆನಲು ತವ ಪಾದ
ದಾ ಮಹಾಸೇವೆ ಸಾಕೆಂದ ಹನುಮಂತ ||
***
ಆರು ಸರಿ ನಿನಗೆ ಬೊಮ್ಮಾಂಡದೊಳಗೆ
ವೀರ ರಾಮನ ಬಂಟ ಧೀರ ಹನುಮಂತ ||ಪ||
ತೆಂಕ ಜಲಧಿಯ ಲಘುವಿಂದ ದಾಟಿ ಅಕ-
ಳಂಕ ರಾಮನ ಬೆರಳ ಮುದ್ರಿಕೆಯನು
ಲಂಕಾವಿದೆಂದು ಕೊಟ್ಟವನಿಜೆಯ ಸಂತೈಸಿ
ಲಂಕೆಯನುರುಪಿದೆ ನಿಶ್ಶಂಕ ಹನುಮಂತ ||
ಅಂಡಲೆದು ದಶವದನನ ಸುರಪಡೆಗಳ ಕಡಿದು
ಖಂಡತುಂಡನು ಮಾಡಿ ಕಲಿ ರಾಮರ
ದಂಡಿಲೊಬ್ಬರ ನೋಯದಂತೆ ಕಾದಿಸಿ ಖಳರ
ಹಿಂಡುಗಳ ಕೂಡ ಉದ್ದಂಡ ಹನುಮಂತ ||
ಅಸುರ ಬಲ ವಾನರರ ಕುಸುರಿ ಅರಿಯಲು ಭರ-
ವಸೆಯಿಂದ ಸಂಜೀವನವ ತಂದು
ಅಸುಬಿ ವಾನರರಿಗೋಸುಗ ಗಿರಿಯನೆತ್ತಿ ಚಿ-
ಮ್ಮಿಸಿ ನೆಲಕೆ ನಿಲಿಸಿದೆ ನೀ ಅಸಮ ಹನುಮಂತ ||
ಪರರಿಗಸದಳವೆನಿಪ ನಿಜಬಲರೊಡೆಯ ಪಂಥ
ಸಿರಿಯುರಕ್ಕೆರಗಿ ಎಸೆದಾಗ ಬೀಳೆ
ಅರಸು ರಾಮರ ಪಂಥಕಡ್ಡಲಾದೆನು ಎಂದು
ಮರುಗಿದ ಮಹಾತ್ಮನುದ್ದುರುಟು ಹನುಮಂತ ||
ಭೂಮಿಜಾತೆಯ ಮುಖಾಂಬುಜಮಿತ್ರನಾದ ಸಿರಿ
ರಾಮ ಗುರು ಪುರಂದರ ವಿಠಲನು
ತಾ ಮನದಿ ನಿಶ್ಚಯಿಸಿ ಬೇಡೆನಲು ತವ ಪಾದ
ದಾ ಮಹಾಸೇವೆ ಸಾಕೆಂದ ಹನುಮಂತ ||
***
pallavi
Aru sari ninage bommANDadolage vIra rAmana baNTa dhIra hanumanta
caraNam 1
tenga jaladhiya laghuvinda dATi akaLanka rAmana beraLa murikeyanu
lankAvidendu koTTavanijeya santayisi lankeyanarupide nishhsanka hanumanta
caraNam 2
aNDaledu dasha vadanana sura paDegaLe kaDidu khaNDaduNdanu mADi kali rAmara
daNDilobbara nOyadante kAdisi khaLara hiNDugaLa kUDa uddaNDa hanumanta
caraNam 3
asura bala vAnarara kusuridariyalu bhara vaseyinda sanjIvanava tandu
asubi vAnarigOsuga giriyanetti cimmisi nelake niliside nI asama hanumanta
caraNam 4
parariga sadaLavenipa nijabalaroDeya bandha siriyurakkeragi esedAga bILe
arasu rAmara bandhakaDDalAdenu endu marugida mahAtamanudduruDu hanumanta
caraNam 5
bhUmi jAteya mukhAmbuja mitranAda siri rAma guru purandara viTTalanu
tA manadi nishcayisi beDenalu tava pAda tA mahA sEve sAkenda hanumanta
***
No comments:
Post a Comment