Tuesday, 3 December 2019

ಏನು ವ್ರತವೇನು ಸಾಧನಗಳೇನೊ purandara vittala

ರಾಗ ಕಾಂಭೋಜ. ಅಟ ತಾಳ

ಏನು ವ್ರತವೇನು ಸಾಧನಗಳೇನೊ ||
ಸ್ವಾನುಭವದಜ್ಞಾನ ಹೀನ ಮಾನವನೆ ||ಅ||

ಶಾಕವ್ರತವೆನುತ ಫಲ ಶಾಕಗಳ ಬಿಡುವಂತೆ
ಬೇಕಾದ ಆಕಾಂಕ್ಷೆ ಬಿಡಬಾರದೆ
ಸಾಕೆನಿಸಿದೆ ರತಿಗೆ ಸತತ ಮನ ಕೊಡುವಂತೆ
ಶ್ರೀಕಾಂತನೊಳು ಮನವನಿಡಬಾರದೆ ||

ನೇಮಗಳ ಮಾಡಿ ಪರಪಾಕವನು ಬಿಡುವಂತೆ
ಕಾಮ ಕ್ರೋಧಂಗಳನು ಬಿಡಬಾರದೆ
ತಾಮಸರ ಕಣ್ಣಿಂದ ನೋಡೆನೆಂಬುವ ನಿಷ್ಠೆ-
ನೇಮವನು ಪರಸತಿಯೊಳಿಡಬಾರದೆ ||

ಹೇಸಿ ದುರ್ಗಂಧಗಳಿಗೋಸರಿಸುವಂದದಲಿ
ಆಶಾಪಾಶಾದಿಗಳ ಬಿಡಬಾರದೆ
ಈಶ ಶ್ರೀ ಪುರಂದರವಿಟ್ಠಲನ ಸೇವೆಯೇ
ಲೇಸೆನುತ ಸಂತೋಷಿಸಲು ಬಾರದೆ ||
***

pallavi

Enu vratavEnu sAdhanagaLEno

anupallavi

svAnu bhavada jnAna hIna mAnavane

caraNam 1

shAka vratavenuta bala shAkagaLa biDuvante bEkAda AkAnkSe biDa bArade
sAkeniside ratige satata mana koDuvante shrIkAntanoLu manavaniDa bArade

caraNam 2

nEmagaLa mADi parapAkavanu biDuvante kAma krOdhangaLanu biDa bArade
tAmasara kaNNinda nODenembuva niSTe nEmavanu parasatiyoLiDa bArade

caraNam 3

hEsi durgandhagaLigOsarisu vandadali AshApAshAdhigaLa biDa bArade
Isha shrI purandara viTTalana sEveye lEsenuta santOSisalu bArade
***

No comments:

Post a Comment