Saturday, 4 December 2021

ಒಳ್ಳಿತೀ ಶಕುನ ಫಲವಿಂದೆಮಗೆ ಲಕ್ಷ್ಮೀವಲ್ಲಭನ purandara vittala OLLITEE SHAKUNA PHALAVINDEMAGE LAKSHMIVALLABHA



ಒಳ್ಳಿತೀ ಶಕುನ ಫಲವಿಂದೆಮಗೆ ||ಪ||

ಲಕ್ಷ್ಮೀವಲ್ಲಭನ ಸೇವೆ ದೊರಕೊಂಬುದೇ ರಮಣಿ
(/ ಜಲಜನಾಕ್ಷನೊಲುಮೆಯಾಗುವದು ಕೇಳ್ ಕೆಳದಿ) ||ಅ||

ವಾಮ ಗರುಡನ ನೋಡು ವಾಯಸದ ಬಲ ನೋಡು
ಕೋಮಲಾಂಗಿಯರೇರ ಉದಕುಂಭ ನೋಡು
ಸಾಮಾನ್ಯವಲ್ಲ ಗೌಳಿ ಬಲಕೆ ನುಡಿಯುತಿದೆ
ಪ್ರೇಮದಿ ಮಧುರ ವಚನ ಕೇಳೆ ಕೆಳದಿ ||

ಭೇರಿ ಶಂಖವು ಘಂಟಾವಾದ್ಯವಾಗುತಲಿದೆ
ಕ್ಷೀರ ಘೃತಫಲಪುಷ್ಪ ಎದುರಾದುವು
ಭಾರದ್ವಾಜ ಪಕ್ಷಿ ಎಡವಾಗುವುದು ಕಂಡ್ಯ
ತೋರುತಿವೆ ಶುಭಶಕುನಗಳಿದಕೊ ||

ನೋಡು ವಿಪ್ರದ್ವಯರು ಎದುರಾಗುತೈದಾರೆ
ಕೈ ಕೂಡುವುದು ಮನದ ವಾಂಛಲ್ಯವೆಲ್ಲ
ಬೇಡಿದ್ವರಗಳನೀವ ಪುರಂದರವಿಠಲನ
ಕೂಡಿ ಇಹಪರ ಸುಖದಿಂದಿರುವ ರಮಣಿ ||
***

ರಾಗ ಕಾಮವರ್ಧನಿ/ಪಂತುವರಾಳಿ. ಝಂಪೆ ತಾಳ (raga tala may differ in audio)

pallavi

oLLidI shakunabhavella namage lakSmIvallabhana sEve dor kombudE ramaNi

caraNam 1

vAma garuDana nODu vAyasada bala gUDu kOmalAngiyaridiru pUrNa kumbha
sAmAnyavEnavilu balanAgi kuNivutide prEmadali madhura vacanava kELu ramaNi

caraNam 2

moLagutide bhEri dundubi vAdya shankhagaLu bala puSpadadhigaLidi rAgutite kO
celuva bhAradvAja hanganeneDanAgutide geLLi balanAgi nuDivutite ramaNi

caraNam 3

nODu Irvaru vipra ritirAgi bahuda kai kUDutide manada sankalpavella
bEDidoragaLanIva purandara viTTala namma kUDe santOSadali naliva ramaNi
***

No comments:

Post a Comment