Saturday, 4 December 2021

ಮುಳ್ಳು ಕೊನೆಯಲಿ ಕೊನೆಯ ಮೇಲೆ ಮೂರು purandara vittala MULLU KONEYALI KONEYA MELE MOORU ಮುಂಡಿಗೆ MUNDIGE





CHECK similar song under neleyadikeshava ankita

ಮುಳ್ಳು ಕೊನೆಯಲಿ ಮೂರು ಕೆರೆಯ ಕಟ್ಟಿ
ಎರಡು ತುಂಬದು ಒಂದು ತುಂಬಲಿಲ್ಲ ||೧|

ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು
ಇಬ್ಬರು ಕುಂಟರು ಒಬ್ಬಗೆ ಕಾಲೆ ಇಲ್ಲ ||೨||

ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು ಒಂದಕ್ಕೆ ಕರುವೆ ಇಲ್ಲ ||೩||

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು ಒಂದು ಚಾಲೆ ಇಲ್ಲ ||೪||

ಚಾಲದಾ ಹೊನ್ನುಗಳಿಗೆ ಬಂದರು ಮೂರು ನೋಟಗರು
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ||೫||

ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ಊರು ಒಂದಕ್ಕೆ ಒಕ್ಕಲೆ ಇಲ್ಲ ||೬||

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಚೊಂಟರು ಒಬ್ಬಗೆ ಕೈಯೆ ಇಲ್ಲ ||೭||

ಕೈಯಿಲ್ಲದ ಕುಂಬಾರಾರು ಮಾಡ್ಯಾರು ಮೂರು ಮಡಕೆಗಳ
ಎರಡು ಒಡಕುಗಳು ಒಂದಕ್ಕೆ ಬುಡವೆ ಇಲ್ಲ ||೮||

ಬುಡವಿಲ್ಲದ ಗಡಿಗಗೆ ಹಾಕಿದರು ಅಕ್ಕಿಗಳ
ಎರಡು ಹಂಜಕ್ಕಿ ಒಂದು ಬೇಯಲಿಲ್ಲ ||೯||

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ಒಬ್ಬಗೆ ಹಸಿವೆ ಇಲ್ಲ ||೧೦ ||

ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕವು ಒಂದು ತಾಕಲೆ ಇಲ್ಲ
ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ
ಅನ್ಯರ್ಯಾರು ತಿಳಿದವರಿಲ್ಲ ||೧೧||
***

ರಾಗ ಫರಜು ಆದಿ ತಾಳ (raga tala may differ in audio)

pallavi

muLLu koneya. rAgA: paraju. Adi tALA

1: muLLu koneya mEle mUru kereya kaTTi eraDu baridu ondu tumbalilla

caraNam 2

tumbalillada karege bandaru mUvaroDDaru ibbaru kuNTaru obbage kAle illa

caraNam 3

kAlillada oDDarige koTTaru mUru emmegaLa eraDu baraDu ondakke karuve illa

caraNam 4

karuvillada emmege koTTaru mUru honnugaLa eraDu savakalu ondu sallale illa

caraNam 5

salladA honnugaLige bandaru mUru nOTagaru ibbaru kuruDaru obbage kaNNE illa

caraNam 6

kaNNillada nODagarige koTTaru mUru UrugaLa eraDu hALu Uru ondakke okkale illa

caraNam 7

okkalillada Urige bandaru mUvaru kumbAraru ibbaru coNTaru obbage kaiye illa

caraNam 8

kaiyillada kumbarAru mADyAru mUru maDakegaLa eraDu oDagu ondakke buDave illa

caraNam 9

buDavillada gaDigage hAkidaru akkigaLa eraDu hanjikki ondu bEyalilla

caraNam 10

bEyalillada akkige bandaru mUvaru neNTaru ibbaru uNNaru obbage hasive illa

caraNam 11

hasivillada neNTarige koTTru mUru ToNebegaLa eraDu sOkavu ondu tAkale illa
1
caraNam 2

innu I arthagaLella purandara viTTala balla anyar-yAru tiLidavarilla
***






meaning
ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ತುಂಬದು - ಒಂದು ತುಂಬಲೇ ಇಲ್ಲ
ತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರು
ಇಬ್ಬರು ಕುಂಟರು - ಒಬ್ಬಗೆ ಕಾಲೇ ಇಲ್ಲ
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು - ಒಂದಕೆ ಕರುವೇ ಇಲ್ಲ
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು - ಒಂದು ಸಲ್ಲಲೇ ಇಲ್ಲ
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು
ಇಬ್ಬರು ಕುರುಡರು - ಒಬ್ಬಗೆ ಕಣ್ಣೇ ಇಲ್ಲ
ಕಣ್ಣಿಲ್ಲದ ನೋಟಗಾರರಿಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು - ಒಂದಕೆ ಒಕ್ಕಲೇ ಇಲ್ಲ
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಚೊಂಚರು - ಒಬ್ಬಗೆ ಕೈಯ್ಯೇ ಇಲ್ಲ
ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು - ಒಂದಕೆ ಬುಡವೇ ಇಲ್ಲ
ಬುಡವಿಲ್ಲದ ಮಡಕೆಗೆ ಹಾಕಿದರ್ಮೂರಕ್ಕಿ ಕಾಳ
ಎರಡು ಬೇಯದು - ಒಂದು ಬೇಯಲೇ ಇಲ್ಲ
ಬೇಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು - ಒಬ್ಬಗೆ ಹಸಿವೇ ಇಲ್ಲ
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು - ಒಂದು ತಾಕಲೇ ಇಲ್ಲ
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ
ನೀಯಬೇಕು - ಪುರಂದರವಿಟ್ಠಲ ನೀನು

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ

ಶ್ರೀಪುರಂದರದಾಸರ ಪ್ರಸಿದ್ಧ ಮುಂಡಿಗೆ ಇದು.


ಮುಂದುವರೆದುದು

ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ

ಸಂಚಿತ ಕರ್ಮವಾಗಲಿ ಆಗಾಮಿ ಕರ್ಮವಾಗಲಿ ಅವುಗಳ ಪರಿಚಯ ನಮಗಿಲ್ಲ.  ನಮಗೆ ಅವು ಕಾಣಿಸುವುದೂ ಇಲ್ಲ.  ಸಂಚಿತ ಕರ್ಮ ಎಷ್ಟಿದೆ, ಎಂತಹದಿದೆ ಕಾಣಲಾರದು.  ಅವುಗಳ ಫಲ, ಪರಿಣಾಮ ನಮಗೆ ತಿಳಿಯದು.  ಅವು ನಮಗೆ ಅರಿವಿಲ್ಲದಂತೆ ನಮ್ಮ ಬದುಕಿನಲ್ಲಿ ಫಲ, ಪರಿಣಾಮ ನೀಡುವವು. ಪ್ರಸಂಗವನ್ನಾಗಲೀ, ಹಿಂದುಮುಂಡೆಯಾಗಲೀ ಆ ಎರಡೂ ಕರ್ಮಗಳು ನೋಡುವದೇ ಇಲ್ಲ.  ಅಂತೆಯೇ ಅವರಿಬ್ಬರನ್ನು ಕುರುಡರೆಂದು ಕರೆದಿದ್ದಾರೆ.

ಭೂತ ಮತ್ತು ಭವಿಷ್ಯಗಳು ಅಷ್ಟೆ.  ಭೂತ ಕಾಣಿಸುವುದಿಲ್ಲ.  ಭವಿಷ್ಯ ಗೊತ್ತಿಲ್ಲ.  ನೋಡುವ ನಾವೂ ಕುರುಡರು, ಒದಗಿ ಬರುವ ಇವೆರಡರ ಪ್ರಸಂಗಗಳೂ ಕುರುಡ.  ಅಂತೆಯೇ ನಾವಿಬ್ಬರೂ ಕುರುಡರು.  ಭೂತದ ಗರ್ಭದಲ್ಲಿ ಅಡಗಿದ್ದನ್ನು ಯಾರೂ ತಿಳಿಯರು.  ಭವಿಷ್ಯದಲ್ಲಿ ಏನಾಗುವದೋ ಯಾರೂ ಕಾಣರು.  ಅವು ಕೂಡಾ ಪ್ರಸಂಗ ನೋಡಿ ಬರುವದಿಲ್ಲ.  ಅನಿರೀಕ್ಷಿತವಾದ ಕುರುದರ ವ್ಯವಹಾರ.  ಅಂತೆಯೇ ಅವರಿಬ್ಬರೂ ಕುರುಡರು.

ಒಬ್ಬಗೆ ಕಣ್ಣೆ ಇಲ್ಲ

ಕಣ್ಣೇ ಇಲ್ಲದ ಕುರುಡ ವರ್ತಮಾನ.

ಅದು ಯಾವ ಸ್ಥಿತಿಯ ಬಗ್ಗೆಯೂ ಕರುಣೆಯ ಕಣ್ಣು ಇಲ್ಲದ್ದು.

ಅದು ನಿಷ್ಠುರ.

ಆದರೆ ವಸ್ತುನಿಷ್ಠ.

ವರ್ತಮಾನ ಕರ್ಮ, ವರ್ತಮಾನ ಜೀವನ, ವರ್ತಮಾನ ಸಂಪತ್ತು ಕುರುಡರಂತೆ ಇದೆ.

ಕುರುಡರಂತೆಯೇ ಅದರ ಪಯಣ.  

ನಿಶ್ಚಿತವಾದ ದಾರಿಯಿಲ್ಲ.  

ಸಾಧಿಸಲು ಧ್ಯೇಯವಿಲ್ಲ, ಗೊತ್ತು ಗುರಿ ಗೊತ್ತಿಲ್ಲ.

ನಡೆದದ್ದೇ ದಾರಿ.

ಕಾಲು ಕಿಟ್ಟಿ ಇಟ್ಟದ್ದೇ ಹಾದಿ.

ಹೋಗುವುದೆಲ್ಲಿ, ತಿಳಿಯದು.

ಕುರುಡರಂತೆ ದಿಗ್ಮೂಢ ಅವಸ್ಥೆ.

ದಿಕ್ಕು ಕಾಣದ ಪ್ರವಾಸ.

ಎಲ್ಲಿ ಬೀಳುವರೋ ಎಲ್ಲಿ ಏಳುವರೋ ಗೊತ್ತಿಲ್ಲ.

ಅಂತೆಯೇ ವರ್ತಮಾನ ಕರ್ಮ, ವರ್ತಮಾನ ಜೀವನ ಈ ಪ್ರಾರಬ್ಧ ಕರ್ಮ.  

ಕಣ್ಣೇ ಇಲ್ಲದ ವ್ಯಕ್ತಿ ಪ್ರಾರಬ್ಧ ಇದು.

ಬಂದದ್ದನ್ನು ಕೇವಲ ಅನುಭವಿಸಲೇಬೇಕಾದ ಅವಸ್ಥೆ.

ವರ್ತಮಾನಕ್ಕೆ ದಯೆ, ಮಾಯೆ ಇಲ್ಲ.  ಪ್ರಾರಬ್ಧಕ್ಕೆ ಕರುಣೆ, ಪ್ರೀತಿ ಇಲ್ಲ.  ಹಾಗಾಗಿ ಕುರುಡ.  ವರ್ತಮಾನ ಜೀವನದ ಪ್ರತಿಯೊಂದು ಸುಖ ದುಃಖಗಳನ್ನು ವಿಷಯ ಸನ್ನಿವೇಶಗಳನ್ನು ಅನುಮಾನ, ಆಗಮಗಳ ಮೂಲಕವಾಗಿ, ಅನುಭವದ ಮೂಲಕವಾಗಿ ಧರ್ಮ ಅಧರ್ಮಗಳನ್ನು ತಿಳಿಯುವದು ಕಣ್ಣಿದ್ದವರ ಕೆಲಸ.  ಜ್ಞಾನದ ಕಣ್ಣಿಲ್ಲದವರು ಕುರುಡರು.  ಕಣ್ಣಿದ್ದವರಾದರೆ ಪ್ರತಿಯೊಂದು ಪರಿಸ್ಥಿತಿಗೆ ಮೂಲ ಕಾರಣವನ್ನು ಹುಡುಕುವರು.  ವರ್ತಮಾನದಲ್ಲಿ ವಿಚಾರದ ಕಣ್ಣೇ ಇಲ್ಲ.

ಬಂದದ್ದಕ್ಕೆ ಹೊಂದಿಕೊಳ್ಳುವದೋ ಬಂದದ್ದನ್ನು ಅನಿವಾರ್ಯವಾಗಿ ಅನುಭವಿಸುವದೇ ಕಣ್ಣೇ ಇಲ್ಲದ ವರ್ತಮಾನ, ಕಣ್ಣೆ ಇಲ್ಲದ ಪ್ರಾರಬ್ಧ.  ವರ್ತಮಾನ ವಿಷಯ ಸುಖದಲ್ಲಿ ಮುಳುಗಿದ ಜೀವ ತನ್ನ ಕಷ್ಟ ಸುಖಗಳು ತನ್ನ ಪ್ರಾಚೀನ ಕರ್ಮದಾತನ್ನದೆ ಆದ ಆಕರ್ಮ ವಿಕರ್ಮಗಳ ಫಲವೆಂದು ತಿಳಿಯುತ್ತಿಲ್ಲ.  ಪರಿಸ್ಥಿತಿ ಕಂಡರೂ ಪರಿಹಾರಕ್ಕೆ ಯತ್ನಿಸುತ್ತಿಲ್ಲ.  ಇದು ಕಣ್ಣಿದ್ದೂ ಕುರುಡನಂತಿರುವ ಕಣ್ಣೇ ಇಲ್ಲದ ವರ್ತಮಾನ.  ಇದೇ ಪ್ರಾರಬ್ಧ ಕರ್ಮ.  

ವರ್ತಮಾನ ಜೀವನವನ್ನು ಅನುಭವಿಸುವ ಪ್ರಾರಬ್ಧ ಕರ್ಮವನ್ನು, ವಿಷಯದ ಉಪಭೋಗವನ್ನು, ವಿಹಿತ ಕರ್ಮಗಳನ್ನು ಭಗವಂತನಿಗೆ ಅರ್ಪಿತ ಎನ್ನಬಹುದಾಗಿತ್ತು.  ಆದರೆ ಅದಾವದನ್ನು ಮಾಡಲಿಲ್ಲ.  ಎಲ್ಲದರಲ್ಲಿಯೂ ದೇವರನ್ನು ಕಾಣಬಹುದಾಗಿತ್ತು.

ಎಲ್ಲವೂ ಅವನ ಪ್ರೇರಣೆ ಎಂದು ತಿಳಿಯಬಹುದಾಗಿತ್ತು.  ಆದರೆ ಉನ್ಮಾದದ ಈ ವರ್ತಮಾನಕ್ಕೆ ಇವನ್ನೆಲ್ಲ ಕಾಣುವ ಕಣ್ಣೇ ಇಲ್ಲ.  ಏನೂ ಸಾಧನವನ್ನೇ ಮಾಡಲಿಲ್ಲ.  ವಿಜಯರಾಯರ ಮಾತು,

"ಸಾಧನಕೆ ಬಗೆಗಾಣೆ ಎನ್ನಬಹುದೇ ಸಾದರದಿ ಗುರುಕರುಣ ತಾ ಪಡೆದ ಬಳಿಕ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ".

ಉಂಡು ಉಟ್ಟಿದ್ದೆಲ್ಲ ವಿಷ್ಣು ಪೂಜೆ
ತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
ಹಿಂಡು ಮಾತುಗಳೆಲ್ಲ ಹರಿಯನಾಮ
ಮೈಮರೆತು ಮಲಗುವದೆ ಧರಣಿಗೆ ನಮಸ್ಕಾರ
ಕೈಮೀರಿ ಹೋದದ್ದೇ ಕೃಷ್ಣಾರ್ಪಣ
ವಾಗತ್ಯ ಪಡುವದೆ ವಿಧಿನಿಷೇಧಾಚರಣೆ
ರೋಗಾನುಭವವೆಲ್ಲ ಉಗ್ರತಾಪವು
ಆಗದವರಾಡಿಕೊಂಬುವದೆ ಆಶೀರ್ವಾದ 
ಬೀಗರುಪಚಾರವೆ ಭೂತದಯೆಯು 
ಹಿಡಿದ ಹಠ ಪೂರೈಸಲದು ಹಿರಿಯ ಸಂಕಲ್ಪ
ನಡೆದಾಡುವದೆಲ್ಲ ತೀರ್ಥಯಾತ್ರೆ
ಬಡತನವು ಬರಲದೆ ಭಗವದ್ಭಜನೆಯೋಗ
ಸಡಗರದಲಿಪ್ಪುದೆ ಶ್ರೀಶನಾಜ್ಞೆ

ಹೀಗೆ ಶ್ರೀವಿಜಯದಾಸರು ವರ್ತಮಾನಕ್ಕೆ ಇರಬೇಕಾದ ಕಣ್ಣನ್ನು ಹೇಳಿದ್ದಾರೆ.  ಈ ಕಣ್ಣು ಇದ್ದರೆ ಜೀವನವೆ ಯಜ್ಞ ಜೀವನವೇ ಪೂಜೆ ಆಗುತ್ತಿತ್ತು.  ಆದರೆ ಈ ಕಣ್ಣೇ ಬರಲಿಲ್ಲ.  ಹಾಗಾಗಿ ವರ್ತಮಾನ ಮತ್ತು ಪ್ರಾರಬ್ಧ ಕರ್ಮ ಇವೆರಡೂ ಕಣ್ಣಿಲ್ಲದ ಕುರುಡರಾದರು.  ಅಂತೆಯೆ ದಾಸರು ಈ ಒಬ್ಬಗೆ ಕಣ್ಣೆ ಇಲ್ಲ ಎಂದರು.

ಕಣ್ಣಿಲ್ಲದ ನೋಡಗಾರಗೆ ಕೊಟ್ಟರು ಮೂರು ಊರುಗಳ

ವರ್ತಮಾನ ಅಥವಾ ಪ್ರಾರಬ್ಧ ಕರ್ಮವೆ ಕಣ್ಣಿಲ್ಲದ ನೋಟಗಾರ.  ಈತನೊಬ್ಬ ವ್ಯಾಪಾರಿ.  ನೋಡಿ ನೋಡಿ ಪುಣ್ಯಪಾಪಗಳನ್ನು ಕೊಂಡುಕೊಳ್ಳುವವ.  ಆದರೂ ಕಣ್ಣಿಲ್ಲದ ಕುರುಡನೇ ಇವನು.

ಇವನಿಗೆ ಏನನ್ನು ಮಾಡಬೇಕೆಂಬ ವಿವೇಕ ಕಡಿಮೆ.  ಈತ ಕಣ್ಣಿಲ್ಲದ ಕುರುಡ.  ಇವನಿಗೆ ಮೂರು ವಿಧದ ಕರ್ಮಗಳನ್ನು ಮಾಡಲು ಅವನ ವ್ಯಾಪಾರಕ್ಕೆ ಅನುಕೂಲವಾಗಲೆಂದು ಈ ಮೂರು ಊರುಗಳ ಕೊಡುಗೆ.

೧.ಸತ್ವಗುಣ, ೨. ರಜೋಗುಣ, ೩. ತಮೋಗುಣ.  ವರ್ತಮಾನದ ಪ್ರಾರಬ್ಧ ಕರ್ಮಗಳು ಹುಟ್ಟಲು ಈ ಊರುಗಳೇ ಕಾರಣ.  ಇವು ವಿಶಾಲವಾಗಿ ವ್ಯಾಪ್ತವಾಗಿವೆ.  ಎಲ್ಲೆಡೆಗೂ ಇವರದ್ದೆ ವ್ಯಾಪ್ತಿ.  ಅಂತೆಯೇ ಇವು ಊರುಗಳಷ್ಟು ದೊಡ್ಡವು.  ಜ್ಞಾನಕ್ಕೆ, ಭಕ್ತಿಗೆ, ಪುಣ್ಯಕ್ಕೆ ಸತ್ವಗುಣವೆ ಕಾರಣ.

ಜ್ಞಾನದ ಕಾರ್ಯ ನಡೆಯುವ ಊರು ಈ ಸತ್ವಗುಣ.  ಸತ್ವಗುಣದಿಂದ ಸಾತ್ವಿಕ ಕಾರ್ಯಗಳೇ ನಡೆಯುವವು.  ಎಲ್ಲ ವಿಧದ ಕ್ರಿಯೆಗಳು, ಕರ್ಮಗಳು ರಾಜಸ ಕರ್ಮವು ನಡೆಯಲು ರಜೋಗುಣವೆ ಕಾರಣ.  ಅಜ್ಞಾನ, ಹಸಿವೆ, ನೀರಡಿಕೆ, ಕಾಮ ಕ್ರೋಧಗಳು ತಮೋಗುಣದ ಕಾರ್ಯ.  ತಾಮಸ ಕಾರ್ಯ ತಮೋಗುಣದ ಪರಿಣಾಮ.

ಅನಂತ ಜೀವರ ಅನಾದಿ ಕಾಲದ ಲಿಂಗದೇಹದಿಂದ ಇಂದಿನ ಜೀವನದವರೆಗೆ ಎಲ್ಲವೂ ಈ ಮೂರು ಊರುಗಳಲ್ಲಿ, ಈ ಮೂರು  ಊರುಗಳಿಂದಲೇ ನಡೆಯುವದು.  ಎಲ್ಲೆಡೆಗೂ ಈ ತ್ರಿಗುಣಗಳದೇ ವ್ಯಾಪ್ತಿ.  ತ್ರಿಗುಣಗಳದ್ದೇ ವ್ಯಾಪಾರ.

ಸದ್ಗುಣಗಳಿಂದ ಕರ್ಮ ನಡೆಯುವದು.  ರಜೋಗುಣದಿಂದ ಅಕರ್ಮ ನಡೆಯುವದು.  ತಮೋಗುಣದಿಂದ ವಿಕರ್ಮ ನಡೆಯುವದು.  ಅನಂತ ಕರ್ಮಗಳ ವಾಸಕ್ಕೆ ಈ ಮೂರು ಊರುಗಳು ಬೇಕೇ ಬೇಕು.

ಎರಡು ಹಾಳು, ಒಂದಕೆ ಒಕ್ಕಲೇ ಇಲ್ಲ

ರಜೋಗುಣವು ಕ್ರಿಯೆಗೆ ಕಾರಣ.  ರಜೋಗುಣದ ಸೂಕ್ಷ್ಮಭಾಗದಿಂದ ಭಗವಂತನ ಉಪಾಸನಾ, ಸಾಧನ ನಡೆಯಬಹುದು. ಸ್ಥೂಲಭಾಗಗಿಂದ ಬದುಕಿಗಾಗಿ, ಸಂಪಾದನೆಗಾಗಿ ವಿವಿಧ ಕ್ರಿಯೆಗಳು ನಿರಂತರವಾಗಿ ನಡೆಯುವವು.

ರಜೋಗುಣದ ಕಾರ್ಯವು ವ್ಯಾಪಕ.  ಜ್ಞಾನವು, ಕರ್ಮ, ಕರ್ತಾ, ಆಹಾರ, ತಪಸ್ಸು, ದಾನ, ಯಜ್ಞ ಎಲ್ಲವೂ ತ್ರಿಗುಣಗಳಿಗೆ ಅನುಗುಣವಾಗಿದೆ.  ಯಕ್ಷ  ರಾಕ್ಷಸರನ್ನು ಪೂಜಿಸುವರು.  ಅತಿಕಾರ,ಅತಿಹುಳಿ, ತುಂಬ ಬಿಸಿ, ಬಿರುಸು, ನೀರಸ, ದುಃಖ, ದುಮ್ಮಾನ, ಕಷ್ಟ  ಸಂಕಟಗಳನ್ನು ತರುವಂತಹದು ರಾಜಸ ಆಹಾರ.

ಫಲದ ಅಪೇಕ್ಷೆಯಿಂದ ಪ್ರಯೋಜನದ ದೃಷ್ಟಿಯಿಂದ, ಸಕಾಮವಾಗಿ, ಡಾಂಭಿಕವಾಗಿ ಮಾಡುವ ಯಜ್ಞವಯ್ ರಾಜಸಯಜ್ಞ, ಕೀರ್ತಿ, ಮರ್ಯಾದೆ, ಹೊಗಳಿಕೆಗಾಗಿ, ಗೌರವಕ್ಕಾಗಿ, ಮೊಸಕ್ಕಾಗಿ ಕಪಟ ತಪಸ್ಸು ರಾಜಸವೆನಿಸುವದು.  ಫಲದ ಆಸೆಗೆ, ಉಪಕಾರ ಬಯಸಿ, ಕೊಡುವದು ಅನಿವಾರ್ಯವಾಯಿತಲ್ಲ ಎಂದು ಬಗೆದು ನೀಡುವ ದಾನ ರಾಜಸದಾನ.  ಮಾಡುವದಕ್ಕೆ ಮೈ ಬಗ್ಗದೇ, ದೇಹಕ್ಕೆ ಶ್ರಮವಾಗುವದೆಂದು ಭ್ರಮಿಸಿ ಕರ್ಮ ಬಿಡುವದು ರಾಜಸ ತ್ಯಾಗ.

ಜೀವರಲ್ಲಿ ಭೇದವಿದ್ದರೂ ಭಗವಂತನಲ್ಲಿ, ಅವನ, ಗುಣ, ಕ್ರಿಯಾದಿಗಳಲ್ಲಿ ಭೇದವನ್ನು ಕಾಣುವದು ರಾಜಸಜ್ಞಾನ.  ಫಲದ ಆಸೆಯಿಂದ, ಅಹಂಕಾರದಿಂದ  ದೇಹವನ್ನು ಬಳಲಿಸಿ, ದಂಡಿಸುವ ಕರ್ಮ ರಾಜಸ ಕರ್ಮ.  ಸಂಶಯಾತ್ಮಕ ಬುದ್ಧಿ ರಾಜಸಬುದ್ಧಿ.  ಇದೆಲ್ಲವೂ ರಾಜಸ ಗುಣದ ಊರಿನ ಕಥೆ.

ಇದರಿಂದ ಧರ್ಮ ಸಾಧನೆಯು ಆಗುವುದಿಲ್ಲ.  ನಿಷ್ಕಾಮ ಕರ್ಮಗಳು ನಡೆಯಲಾರವು.  ಮೋಕ್ಷ ದೊರೆಯಲಾರದು.  ಮೋಕ್ಷದ ಯಾವ ಸಾಧನವೂ ರಜೋಗುಣದಿಂದ ನಡೆಯುವುದಿಲ್ಲ.  ಇದು ಮೋಕ್ಷ ಬಯಸುವವರ ಪಾಲಿಗೆ ಹಾಳಾದ ಊರು.  ಏನೂ ಪ್ರಯೋಜನವಿಲ್ಲದ ಊರು.

ತಾಮಸ ಊರು.  ಆಡು ಹಾಳೂರೇ ಕಾಮ ಕ್ರೋಧಗಳು ಈ ಊರಿನ ವ್ಯಾಪ್ತಿಯಲ್ಲಿ, ಅಹಂಕಾರ, ಮಮಕಾರ, ಹಸಿವೆ, ನೀರಡಿಕೆಗಳೆಲ್ಲ ಈ ಊರಿನ ಮನೆಗಳು.  ವಿಹಿತವಾದ, ಉಚಿತವಾದ, ನಿಯತವಾದ ಕರ್ತವ್ಯ ಕರ್ಮಗಳನ್ನು ತಪ್ಪಾಗಿ ತಿಳಿದು ಬಿಡುವದು ತಾಮಸತ್ಯಾಗ ಜೀವರನ್ನು ಭಗವಂತನೆಂದು ಭಾವಿಸುವದು ತಾಮಸ ಜ್ಞಾನ.

ಪರಿಣಾಮವನ್ನು, ಹಾಳಾಗುವಿಕೆಯನ್ನು, ತನ್ನ ನಾಶ, ತನಗಾಗುವ ಹಿಂಸೆಯನ್ನು ಗಮನಿಸದೇ, ತನ್ನ ಶಕ್ತಿ ಮೀರಿದ ಕಾರ್ಯದಲ್ಲಿ ತಿಳಿಯದೇ ತೊಡಗುವದು ತಾಮಸ ಕರ್ಮ.

ಉದ್ಧಟ, ಮೋಸಗಾರ, ಅಹಂಕಾರಿ, ಇನ್ನೊಬ್ಬರ ತಪ್ಪನ್ನೇ ಹುಡುಕುವ ಭಕ್ತಿ ಇಲ್ಲದ ಕರ್ತಾ ತಾಮಸಕರ್ತಾ.  ಅನೇಕ ದಿನಕಳೆದ ಆಹಾರ, ರುಚಿ ಇಲ್ಲದ, ಹಳಸಿದ, ತಂಗುಣ, ಎಂಜಲವಾದ ಆಹಾರವು ತಾಮಸ ಆಹಾರ.  ಶಾಸ್ತ್ರ ವಿರುದ್ಧವಾಗಿ, ಅನ್ನದಾನವಿಲ್ಲದೇ ಮಂತ್ರವಿಲ್ಲದೇ, ದಕ್ಷಿಣೆ ಇಲ್ಲದೇ, ನಂಬಿಕೆ ಇಲ್ಲದೇ ಮಾಡುವ ಕ್ರಿಯೆ ತಾಮಸಯಜ್ಞ.

ನಿದ್ರೆ, ಅಂಜಿಕೆ, ದುಗುಡ, ನಿರುತ್ಸಾಹ ಸೊಕ್ಕು ಬಿಡದ ಧೈರ್ಯ ತಾಮಸ ಧೈರ್ಯ.  ಈ ರಾಜಸ ತಾಮಸ ಊರುಗಳು ದೊಡ್ಡದಿವೆ.  ಆದರೆ ಇವೆರಡೂ ಹಾಳುಬಿದ್ದ ಊರುಗಳು.  ಇವುಗಳಿಂದ ಮೋಕ್ಷ ಮಾರ್ಗದ ಯಾವ ಸಾಧನಗಳೂ ನಡೆಯುವುದಿಲ್ಲ.  ಇಲ್ಲಿ ಮುಮುಕ್ಷುಗಳು ಯಾರೂ ವಾಸಿಸುವುದಿಲ್ಲ.  ಇರಲು ಬಯಸುವುದಿಲ್ಲ.  ಅಂತೆಯೇ ಇವು ಹಾಳುಬಿದ್ದ ಊರುಗಳಾಗಿವೆ.  ನಿರ್ಜನ ಪ್ರದೇಶ.  ಹಾಳುಬಿದ್ದ ಸ್ಥಳವಾಗಿವೆ.  ಒಂದು ಸಂಸಾರಕ್ಕೆ, ಇನ್ನೊಂದು ದುಃಖ ದುರವಸ್ಥೆಯು ಬರಲು ಈ ಊರುಗಳು ಕಾರಣ.  ಇವು ಸಾತ್ತ್ವಿಕರ ಬದುಕನ್ನು ಹಾಳು ಮಾಡುವ ಊರುಗಳು.

ಒಂದಕ್ಕೆ ಒಕ್ಕಲೇ ಇಲ್ಲ

ಸತ್ತ್ವಗುಣ ಉತ್ತಮವಾದ ಊರು.  ಆದರೆ ಇಲ್ಲಿ ಯಾರೂ ವಾಸಿಸುವದಿಲ್ಲ.  ಜ್ಞಾನಕ್ಕೆ, ಬುದ್ಧಿಯ ವಿಕಾಸಕ್ಕೆ ಇದೇ ಕಾರಣ.  ಪುಣ್ಯವು ಇದರಿಂದಲೇ ಪ್ರಾಪ್ತಿ.  ಆದರೆ ಮನುಷ್ಯ ಜೀವನದಲ್ಲಿ ಸತ್ತ್ವಗುಣದ ಊರಿನಿಂದಾ ಯಾವ ಸಾತ್ತ್ವಿಕ ಸಾಧನೆಯೇ ಆಗಲಿಲ್ಲ.  ಎಲ್ಲ ವ್ಯರ್ಥವಾಯಿತು.  ಸಾತ್ವಿಕ ಕರ್ಮಗಳಿಂದಲೇ ಜ್ಞಾನ ಸಾಧನೆ.  "ಸ್ವ ಉಚಿತ, ವಿಹಿತವಾದ, ಫಲವನ್ನೇನೂ ಬಯಸದ, ಭಗವಂತನ ಪೂಜಾರೂಪವಾದ ಕರ್ಮಗಳು ಸಾತ್ವಿಕ.  ಇವೇ ಜ್ಞಾನ ಸಾಧನಗಳು.

ಎಲ್ಲ ಜೀವಿಗಳಲ್ಲಿರುವ ದೇವರು ಒಬ್ಬನೇ.  ವಸ್ತುಗಳು ಅನೇಕವಿದ್ದರೂ ಒಳಗಿರುವ ದೇವನೊಬ್ಬನೇ ಎನ್ನುವುದು ಸಾತ್ವಿಕ ಜ್ಞಾನ.  ರಾಗದ್ವೇಷ ರಹಿತವಾದ, ಫಲವನ್ನು ಬಯಸದ, ವಿಹಿತವಾದ ಕರ್ಮ ಸಾತ್ತ್ವಿಕ.  ಅಹಂಕಾರವಿಲ್ಲದ, ವಿರಕ್ತನಾದ ಕರ್ತಾಸಾತ್ತ್ವಿಕ.  ಇಹದ ಧರ್ಮ, ಪರಧರ್ಮ, ಮಾಡಬೇಕಾದದ್ದನ್ನು ಮಾಡಬಾರದ್ದನ್ನು ನಿರ್ಧರಿಸುವ ಬುದ್ಧಿ ಸಾತ್ತ್ವಿಕ ಬುದ್ಧಿ.

ಆರೋಗ್ಯಕ್ಕೆ ಹಿತಕರ, ದೇಹಕ್ಕೆ ಒಳ್ಳೆಯದು, ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ, ತಿಂದಾಗಲೆಲ್ಲ ರುಚಿಯಾದ, ಮತ್ತೆ ಮತ್ತೆ ಬೇಕೆನ್ನಿಸುವ ಆಹಾರವೇ ಸಾತ್ತ್ವಿಕ.  ಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ, ನಿಷ್ಕಾಮವಾಗಿ, ಕರ್ತವ್ಯ ಭಾವನೆಯಿಂದ ಮಾಡಿದ ಯಜ್ಞವೇ ಸಾತ್ತ್ವಿಕವು.  ಪ್ರತ್ಯುಪಕಾರದ ದೃಷ್ಟಿ ಇಲ್ಲದೇ, ಕರ್ತವ್ಯ ಪ್ರಜ್ಞೆಯಿಂದ ಉಚಿತ ದೇಶ, ಉಚಿತ ಕಾಲ, ಉಚಿತ ಪಾತ್ರದಲ್ಲಿ ಮಾಡುವ ದಾನ ಸಾತ್ತ್ವಿಕವು.  ಇಷ್ಟು ದೊಡ್ಡದಾದದ್ದು ಈ ಸಾತ್ತ್ವಿಕ ಊರು.  ಆದರೆ ಇಲ್ಲಿ ಯಾರೂ ವಾಸವೇ ಮಾಡಿಲ್ಲ.  ಇರಲು ಒಬ್ಬರೂ ಒಂದೇ ಇಲ್ಲ.

ಇಂತಹ ರೀತಿಯ, ಸಾತ್ತ್ವಿಕ ಜೀವನ, ಸಾತ್ತ್ವಿಕ ಆಹಾರ, ದಾನ, ಕರ್ಮ, ತಪಸ್ಸು, ಯಜ್ಞಗಳನ್ನು ತಿಳಿದರೂ ಒಬ್ಬರೂ ಮಾಡುತ್ತಿಲ್ಲ.  ಅದರಿಂದಾಗಿ ಯಾರಲ್ಲಿಯೂ ಧರ್ಮ, ಕರ್ಮ, ಜ್ಞಾನ ಸಾಧನ, ಭಕ್ತಿಯು ಪರಪಕ್ವವಾಗುತ್ತಿಲ್ಲ.  ಹಾಗಾಗಿ ಇಲ್ಲಿ ಯಾವುದೇ ಜನವಸತಿಯೇ ಇಲ್ಲ.  ಒಕ್ಕಲೇ ಇಲ್ಲ.  ಮೋಕ್ಷದ ಹೆದ್ದಾರಿ ನಿರ್ಜನವಾಗಿದೆ.

ಸಾಧನಕ್ಕೆ ಯೋಗ್ಯವಾಗಿದ್ದರೂ ಸಂಸಾರದ ವಿಷಯವಾಸನೆಗೆ ಬಲಿಯಾದ, ಬಿರುಗಾಳಿಗೆ ಸಿಕ್ಕ ಈ ಸಾತ್ತ್ವಿಕ ಊರು ಹಾಳಾಗಿದೆ.  ಒಕ್ಕಲೇ ಇಲ್ಲ.  ವಾಸಿಸಲು ಯಾರಿಗೂ ಬಯಕೆಯಿಲ್ಲದ ಊರು.

ಮುಂದುವರೆಯುವುದು
**
ಮುಂದುವರೆದುದು

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು

ಸತ್ತ್ವಗುಣವು ಒಕ್ಕಲಿಲ್ಲದ ಊರು.  ವಾಸವೇ ಇಲ್ಲದ ಊರು.  ಇಲ್ಲಿರಲು  ಮೂವರು ಕುಂಬಾರರು ಬಂದರು.

ಸತ್ವಗುಣಾಧಿಪತಿ ಶ್ರೀಹರಿ.  ರಜೋಗುಣಾಧಿಪತಿ ಚತುರ್ಮುಖ, ತಮೋಗುಣಾಧಿಪತಿ ಪಂಚಮುಖದ ರುದ್ರರು. ಸತ್ತ್ವಗುಣದಿಂದ ಪಾಲನೆ, ರಜೋಗುಣದಿಂದ ಸೃಷ್ಟಿ, ತಮೋಗುಣದಿಂದ ನಾಶವು.  ಸಂಹಾರಕ್ರಿಯಾ.  ಬ್ರಹ್ಮನಲ್ಲಿ ಅಜನಾಮಕ ಶ್ರೀಹರಿ, ರುದ್ರನಲ್ಲಿ ಸಂಕರ್ಷಣಾಭಿನ್ನ ಲಕ್ಷ್ಮೀನರಸಿಂಹ ದೇವರು.

ಬ್ರಹ್ಮ ಮಹತ್ತತ್ವಕ್ಕೆ ಅಭಿಮಾನಿ.  ರುದ್ರದೇವ ಅಹಂಕಾರ ತತ್ತ್ವಕ್ಕೆ ಅಭಿಮಾನಿ.  ಇವರೇ ಜಗದ ಹುಟ್ಟು,   ಪಾಲನೋ ಸಂಹಾರಗಳಿಗೆ ಕಾರಣ ಕರ್ತರಾದ ಕುಂಬಾರರು.  ಕಟ್ಟುವ, ಕಾಪಾಡುವ, ಕೆಡಿಸುವ ಗುಣಗಳನ್ನು ಹೊಂದಿದವರು.  ಬ್ರಹ್ಮ, ವಿಷ್ಣು, ಮಹೇಶ್ವರರೇ ಇಲ್ಲಿಗೆ ಬಂದ ಕುಂಬಾರರು.  ಕಾರಣಕರ್ತರು.

ಇಬ್ಬರು ಚೊಂಚರು

ಚತುರ್ಮುಖ, ಪಂಚಮುಖರಾದ, ಮಹತ್ತತ್ತ್ವ, ಅಹಂಕಾರ ತತ್ತ್ವಾಭಿಮಾನಿಗಳಾದ, ಬ್ರಹ್ಮರುದ್ರರು ಎಲ್ಲರೂ ಬಯಸಿದ ಬೇಡಿದ ವರ ನೀಡಲು ಸಾಧ್ಯವಿಲ್ಲ.  ಕೆಲವು ಸ್ವತಂತ್ರನಾದ ಪರಮಾತ್ಮನ ಬಳಿಯಲ್ಲಿಯೇ ಸಾಧ್ಯ. ಇವರಿಬ್ಬರೂ ಸ್ವತಂತ್ರರಲ್ಲ.  ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಇಲ್ಲದವರು.  ಶ್ರೀಹರಿಯೇ ಇವರಲ್ಲಿದ್ದು ಕರ್ಮ ಮಾಡಿಸಬೇಕು.  ಜ್ಞಾನವನ್ನು ನೀಡಬೇಕು.  ಇವರಿಗೆ ವಿಷ್ಣುವಿನಲ್ಲಿರುವ ಶಕ್ತಿಯ ಸ್ವಲ್ಪ ಶಕ್ತಿಯೂ ಬಂದಿಲ್ಲ.

ಬ್ರಹ್ಮನ ಮಾತು.  'ನಾನಾಗಲಿ, ಶಿವನಾಗಲಿ ವಿಷ್ಣುವಿನ ಅನಂತ ಶಕ್ತಿಯ ಒಂದಂಶ ಶಕ್ತಿಯನ್ನೂ ಹೊಂದಿದವರಲ್ಲ.  ಬಾಲಕರು ಆಟಿಕೆಗಳೊಡನೆ ಆಡಿದಂತೆ ನಮ್ಮೊಡನೆ ಶ್ರೀಹರಿ ಆಟವಾಡುವ' ಎನ್ನುವರು.  ಪರಬ್ರಹ್ಮನ ನಾಭಿಕಮಲದಿಂದ ಹುಟ್ಟಿದ ಈ ಬ್ರಹ್ಮನು ಎಂದಿಗೂ ಪರಮಾತ್ಮನಾಗಲಾರ.  ಸ್ವತಂತ್ರನೂ ಅಲ್ಲ.

ಶಿವನು ಅನೇಕ ಸಲ ಶ್ರೀಹರಿಯೊಡನೆ ಯುದ್ಧಕ್ಕಿಳಿದು ಸೋತಿದ್ದಾನೆ.  ಅನೇಕ ಸಲ ಶ್ರೀಹರಿಯಿಂದಲೇ ಸಂರಕ್ಷಿತನಾಗಿದ್ದಾನೆ.  ಶ್ರೀಹರಿಯ ಮಗನಾದ ಬ್ರಹ್ಮದೇವರು, ಮೊಮ್ಮಗನಾದ ಶಿವನು ಭಕ್ತರು ಬಯಸಿದ ಮೋಕ್ಷ ಕೂಡಲೇ ಯಾರಿಗೂ ಕೊಡಲಾರರು.  ಅಂತೆಯೇ ಇವರಿಬ್ಬರೂ ಚೊಂಚರು.  ಕೈಯಿಲ್ಲದವರು.  ಕೊಡಲು ಏನೂ ಸಾಮರ್ಥ್ಯವಿಲ್ಲದವರು.  ಎಲ್ಲದಕ್ಕೂ ಶ್ರೀಹರಿಯೇ ಬೇಕು.

ಒಬ್ಬಗೆ ಕೈಯೇ ಇಲ್ಲ

ಶ್ರೀವಿಷ್ಣು ಸರ್ವೋತ್ತಮ.  ಸರ್ವಾಶ್ರಯ.  ಸರ್ವಾಧಾರಿತ, ದ್ರವ್ಯ, ಮಾಡುವ ಕರ್ಮ, ಕಾಲ, ಸ್ವಭಾವ, ಗುಣ ಧರ್ಮ, ಜೀವನು ಶ್ರೀಹರಿಯ ಅನುಗ್ರಹದಿಂದಲೇ ಇರುವರು.  ವಿಷ್ಣುವು ಸರ್ವತಂತ್ರ ಸ್ವತಂತ್ರನು.  ಆದರೂ ಈ ಎಲ್ಲದರಲ್ಲಿ ಇದ್ದು ಕಾಪಾಡುವ ಶ್ರೀಹರಿಯು ಸ್ವತಂತ್ರ.  ಆದರೆ ತಾನೇ ಹಾಕಿಕೊಂಡ ಸೃಷ್ಟಿಯ ವ್ಯವಸ್ಥೆಗಳನ್ನು ತಾನು ಬದಲಾಯಿಸಲಾರನು.

ಶ್ರೀವಿಷ್ಣುವನ್ನೇ ಬ್ರಹ್ಮದೇವರು ಯಾವಾಗಲೂ ಆಶ್ರಯಿಸಿದ್ದಾರೆ.  ಬ್ರಹ್ಮದೇವರ ತೊಡೆಯ ಮೇಲೆ ರುದ್ರದೇವರ ವಾಸ.  ಇನ್ನುಳಿದ ದೇವತೆಗಳು ರುದ್ರದೇವರನ್ನು ಆಶ್ರಯಿಸಿದ್ದಾರೆ.  ವಿಷ್ಣುವೇ ಸರ್ವೋತ್ತಮ.  ಅವನಿಂದಲೇ ಎಲ್ಲರಿಗೂ ಪ್ರೇರಣೆ.  ಆದರೆ ವಿಷ್ಣು ತಾನು ಎಲ್ಲರಿಗೂ ಬಯಸಿದಂತೆ ಫಲ ನೀಡಲಾರ.

ಅನಾದಿ ನಿತ್ಯವಾದ, ಅಪೌರುಷೇಯವಾದ, ತನ್ನ ಅಧೀನವಾದ, ಸದಾ ತನ್ನ ಬುದ್ಧಿಯಲ್ಲಿರುವ, ಅದರಿಂದಲೇ ನಿತ್ಯ, ಸತ್ಯವಾದ ವೇದಗಳಿಗೆ ಅನುಗುಣವಾಗಿ ಫಲನೀಡುವ.  ಸ್ವತಂತ್ರನಾದುದರಿಂದ ತಾನು ಬೇಕಾದ ಫಲ ಕೊಡಬಲ್ಲ.  ಆದರೆ ತಾನೇ ನೀಡಿದ ಶ್ರುತಿ ಸ್ಮೃತಿಗಳನ್ನು ತನ್ನ ನಿಯಮ, ತನ್ನ ಆಜ್ಞೆಗಳನ್ನಾಗಿ ಮಾಡಿಕೊಂಡಿರುವ.  ಅವುಗಳ ವಿರುದ್ಧ ನಡೆದರೆ ಪಾಪ.  ಅದರಿಂದ ಶಿಕ್ಷೆ.  ಅವಕ್ಕೆ ಅನುಗುಣವಾಗಿ ನಡೆದರೆ ಪುಣ್ಯ.  ಅದರಿಂದ ಸುಖ ಕೊಡುವ.

ಜೀವರ ಅನಾದಿ ಯೋಗ್ಯತಾ, ಅನಾದಿ ಕರ್ಮ, ಮತ್ತು ಪ್ರಯತ್ನಗಳನ್ನು ಗಮನದಲ್ಲಿಟ್ಟು ಫಲ ಕೊಡುವ.  ಪ್ರೇರಿಸುವ.  ಎಲ್ಲವನ್ನೂ ಮಾಡಿಸುವ.  ಇದೇ ಅವನ ಸ್ವಾತಂತ್ರ್ಯ.  ಸಂಕಲ್ಪ.  ಇಲ್ಲದಲ್ಲಿ ಎಲ್ಲವೂ ಅವ್ಯವಸ್ಥೆಯಾಗುವದು.  ಅವನು "ವಿಷಯ, ಪಕ್ಷಪಾತಿ, ಕ್ರೂರನೆಂದು ಆಕ್ಷೇಪಿಸಬಹುದು.  ಆದರೆ ಭಗವಂತ ಜೀವರ ಯೋಗ್ಯತೆ" ಕರ್ಮ ನೋಡಿಯೇ ಫಲ ಕೊಡುವ ಇದನ್ನು ದಾಸರಾಯರು ವಿಷ್ಣುವಿಗೆ, ಒಬ್ಬನಿಗೇ ಕೈಯ್ಯೇ ಇಲ್ಲವೆನ್ನುವರು.

ಯಾರಿಗೂ ನಿರಪೇಕ್ಷವಾಗಿ ನೀಡಲಾರ.  ಶ್ರೀಹರಿಯು ಸರ್ವೋತ್ತಮ, ಸ್ವತಂತ್ರ, ಆದರೆ ಸ್ವಚ್ಛಂದನಲ್ಲ.  ನಿಯಮಬದ್ಧ.  ತನ್ನ ಇಚ್ಛೆಯಂತೆ ವೇದದ ವಿಧಿ ನಿಷೇಧಬದ್ಧ.  ಸ್ವರೂಪಕ್ಕೆ ಅನುಗುಣವಾಗಿ ಪ್ರೇರಿಸಿ ಪ್ರೇರಣೆಯಂತೆ ಕರ್ಮ ಮಾಡಿಸಿ, ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ.  ಜೀವರ ಯೋಗ್ಯತೆ ಉತ್ತಮವೆಂದಾಕ್ಷನ ಮೋಕ್ಷಫಲ ನೀಡಲಾರ.  ಅವರಿಂದ ಅದಕ್ಕೆ ತಕ್ಕ ಸಾಧನೆ ಮಾಡಿಸಿಯೇ ನೀಡುವ.  ಯೋಗ್ಯತೆಯ ಪರಿವರ್ತನೆಯಾಗಲಿ, ಸ್ವಚ್ಛಂದ ಫಲ ನೀಡುವದಾಗಲಿ ಮಾಡಲಾರ.  ಇದೇ "ಕೈಯ್ಯೇ ಇಲ್ಲ" ಎನ್ನುವದರ ಸಂಕೇತ.

"ಪ್ರಾಪ್ತಿಹಿ ಸಾಧನ ಪೂರ್ತಿತಃ"

"ಜಿಜ್ಞಾಸೋತ್ಥ ಜ್ಞಾನಚಾತ್ತತ್ ಪ್ರಸಾದಾದೇವ ಮುಚ್ಯತೇ"

"ಬಂಧಕೋ ಭವಪಾಶೇನ ಭವಪಾಶಾಚ್ಛ ಮೋಚಕಃ"

"ವಿನಾವಿಷ್ಣುಪ್ರಸಾದತಃ ಅನಿವೃತ್ತೇಹೆ"

ಸಾಧನ ಪೂರ್ತಿಯಾದಾಗ, ಮತ್ತು ಬ್ರಹ್ಮಜಿಜ್ಞಾಸೆಯಿಂದ ಅವನ ಜ್ಞಾನ ಪಡೆದು, ಜ್ಞಾನದಿಂದ ಭಕ್ತಿ ಬಲಿತು, ಅದರಿಂದ ಭಗವಂತ ಪ್ರಸನ್ನನಾಗಿ ಈ ಭವಪಾಶದಿಂದ ಬಿಡಿಸುವ. ಅವನು ಸಾಧನವಿಲ್ಲದೇ, ಜ್ಞಾನಭಕ್ತಿಗಲಿಲ್ಲದೆ ಏನೂ ನೀಡಲಾರ.  ಎಲ್ಲವೂ ಅವನ ಅಧೀನ.  ಅವನ ನಿಯಮಗಳ ಅಧೀನ.

"ಅಹಂ ಭಕ್ತಪರಾಧೀನಃ ಅಸ್ವತಂತ್ರ ಇವ ದ್ವಿಜ"

"ನಾನು ಭಕ್ತರ ಅಧೀನ.  ಅಸ್ವತಂತ್ರನಂತೆ ಇರುವೆ" ಎನ್ನುವ ಹರಿಯ ಮಾತು ಅವನಿಗೆ ಸ್ವಚ್ಛಂದ "ಕೈಯೇ" ಇಲ್ಲದಂತೆ ಎಂದು ಹೇಳಿದಂತಲ್ಲವೇ ?

ಬ್ರಹ್ಮ, ರುದ್ರರೆಂಬ ಕುಂಬಾರರು ಹುಟ್ಟಿನಿಂದಲೇ ಕೈ ಇಲ್ಲದ, ಮೊಂಡುಗೈ ಇರುವ ಚೊಂಚರು.  ಶ್ರೀಹರಿ ಮಾತ್ರ ಸ್ವತಂತ್ರ.  ಆದರೆ ಸಾಧನೆ ಬಯಸಿಯೇ ಫಲ ಕೊಡುವ.  ಇದೇ ಕೊಡುವ ಸಾಮರ್ಥ್ಯವಿದ್ದರೂ, "ಕೈಯಿಲ್ಲದವನಾದ, ವಸ್ತುಸ್ಥಿತಿ."

ಮುಂದುವರೆಯುವುದು
*

ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಿಕೆಗಳ

ಸ್ವತಂತ್ರನಾದ ಪರಮಾತ್ಮನು, ವೇದಶಾಸ್ತ್ರಗಳಿಗೆ ಅನುಗುಣವಾಗಿ ಎಲ್ಲರು ಸಾಧನ ಮಾಡಿಕೊಳ್ಳಲು, ಮೋಕ್ಷಕ್ಕೆ ಕಾರಣವಾದ ಪ್ರಸಾದ ಪಡೆಯಲು, ತಮ್ಮ ಜೀವನದ ಫಲವನ್ನು ಪಕ್ವಮಾಡಿ ಪಡೆಯಲು  ಮೂರು ಮಡಿಕೆಗಳನು ಮಾಡಿ ನೀಡಿದ.  ಈ ಮಡಿಕೆಗಳಲ್ಲಿ ಸಾಧನ ತುಂಬಿಕೊಳ್ಳಲು ಹೇಳಿದ.

೧.ಜ್ಞಾನ, 2. ಭಕ್ತಿ, ೩. ಕರ್ಮ ಯೋಗಗಳು ಮೂರು ಮಡಿಕೆಗಳು.  ಸತ್ಕರ್ಮ, ಸದಾಚಾರದ ಮಡಿಕೆ ತುಂಬಿದಾಗ ಈ ಮಡಿಕೆಯಲ್ಲಿ ಅಡಿಗೆ ಮಾಡಿಕೊಂಡು ಮುಂದೆ ಜ್ಞಾನದ ಮಡಿಕೆಯಲ್ಲಿ ಶಾಸ್ತ್ರಜನ್ಯ ಪರೋಕ್ಷ ಜ್ಞಾನ, ಮುಂದೆ ಭಗವಂತನನ್ನು ಪ್ರತ್ಯಕ್ಷ ಕಾಣುವ ಅಪರೋಕ್ಷ ಜ್ಞಾನವನ್ನು ಬೇಯಿಸಲು ಹೇಳಿದ.  "ಪರಿಪಕ್ವ ಭಕ್ತಿಯನ್ನು ಬೇಯಿಸಿಕೊಳ್ಳಲು ಭಕ್ತಿ ನೀಡಿದ. ಬಿ ಗಡಿಗೆಯಲ್ಲಿ ಭಗವಂತನಲ್ಲಿ ಪ್ರೀತಿ, ವಿಷಯದಲ್ಲಿ ವೈರಾಗ್ಯ, ಇದೇ ಭಕ್ತಿ, ಭಕ್ತಿಯಲ್ಲಿಯೇ ವೈರಾಗ್ಯವಿದೆ.  

ದೇವರು ಬೇಕು ಎನ್ನುವಾಗ, ಉಳಿದದ್ದು ಬೇಡವೆನ್ನುವ. ಬೇಕು, ಹೆಚ್ಚಿದಾಗ ಬೇಡವೂ ಹೆಚ್ಚುವುದು.  ಭಕ್ತಿಯ ಜೊತೆಗೆಯೇ ವೈರಾಗ್ಯ.  ಇವು ಎರಡು ಕೂಡಿದ ಉತ್ತಮ ಮಡಿಕೆ.  ಗಡಿಗೆ ಇದನ್ನು ನೀಡಿದ.  ಬುದ್ಧಿಯಿಂದ ಜ್ಞಾನದ ಮಡಿಕೆ ನಿರ್ಮಿಸಿದ, ಮನಸ್ಸಿನಿಂದ ಭಕ್ತಿಯ ಮಡಿಕೆ ಮಾಡಿದ, ದೇಹದಿಂದ (ಕಾಯದಿಂದ) ಕರ್ಮದ ಮಡಿಕೆ ಮಾಡಿ ಇದರಲ್ಲಿ ಸಾಧನದ ಅಡಿಗೆ, ಅನ್ನ, ಮಾಡಲು ಹೇಳಿದ.

ಕೈಯಿಲ್ಲದ ಕುಂಬಾರನಾದ ಶ್ರೀಹರಿಯು "ಕರ್ಮ, ಅಕರ್ಮ, "ವಿಕರ್ಮ"ಗಳೆಂಬ ಮೂರು ಮಡಿಕೆ ನೀಡಿದ.  ನಿಮ್ಮ ಸಾಧನೆ ಇಲ್ಲಿ ತುಂಬಿಕೊಳ್ಳಿರಿ.  ಬೇಕಾದ ಅನ್ನವನ್ನು, ಫಲವನ್ನು, ಸಾಧನವನ್ನು ಈ ಮಡಿಕೆಗಳಲ್ಲಿ ಬೇಯಿಸಿಕೊಳ್ಳಲು ಹೇಳಿದ.  ಶಾಸ್ತ್ರಾಭ್ಯಾಸ,  ಧ್ಯಾನ, ಉಪಾಸನಾ, ರೂಪ, ಸತ್ ಕರ್ಮಾನುಷ್ಠಾನ ಇವೇ ಮೂರು ಮಡಿಕೆ ನೀಡಿದ. 

ಇವೇ"ತ್ರಯೋ ಅಸ್ಯಪಾದಾಹ" ಇವೇ ಸಾಧನ ತುಂಬುವ ಮೂರು ಮಡಿಕೆಗಳು.  ಇವುಗಳಿಂದಲೇ ಕೈಯಿಲ್ಲದ ಕುಂಬಾರನಾದ ಶ್ರೀಹರಿಯನ್ನು ಕಟ್ಟಬಹುದು.  "ತ್ರಿಧಾಬದ್ಧಹ ಋಷಭಹ" ಇದು ವೇದ ಮಾತು.  ಋಷಿ ಮುನಿಗಳು ಶಾಸ್ತ್ರಾಭ್ಯಾಸ, ಪಾಠ ಪ್ರವಚನಗಳಿಂದ ಸಾಧನ ಮಾಡಿದರು.  ಈ ಮಡಿಕೆಯಲ್ಲಿ ಅನ್ನ ಮಾಡಿಕೊಂಡರು.

ಮನೋನಿಗ್ರಹವುಳ್ಳ ದೇವತೆಗಳು ಧ್ಯಾನವೆಂಬ ಉತ್ತಮವಾದ ಮಡಿಕೆಯಲ್ಲಿ ಸಾಧನದ ಅನ್ನವನ್ನು ಸಿದ್ಧಪಡಿಸಿಕೊಂಡರು.  ಮನುಷ್ಯರಿಗೆ ಸತ್ ಕರ್ಮಾನುಷ್ಠಾನ, ಉಪಾಸನಾ, ಅನುಸಂಧಾನದ ಮಡಿಕೆ ಅನ್ನ ಮಾಡಿಕೊಳ್ಳಲು ನೀಡಿದ.

ಶ್ರೀಹರಿಯು ಕೈಯಿಲ್ಲದ ಕುಂಬಾರನಾದರೂ ಸರ್ವಸಮರ್ಥ, "ಕರ್ತುಂ, ಅಕರ್ತುಂ, ಅನ್ಯಥಾಕರ್ತುಂ" ಬೇಕಾದ್ದನ್ನು ಸೃಷ್ಟಿಸಲು, ನಿರ್ಮಿಸಲು ಸಮರ್ಥ.  ಏನೂ ನೀಡದೆ, ಮಾಡದೇ ಇರಲೂ ಸಾಧ್ಯ, ಇದ್ದದ್ದನ್ನು  ಪೂರ್ತಿ ಪರಿವರ್ತನೆ, ಪರಿವರ್ತನೆ, ವಿರುದ್ಧವಾಗಿ ನಿರ್ಮಿಸಲೂ ಸಾಧ್ಯ.  ಆದರೆ ಮಾಡಲಾರ.  ಈ ಮಡಿಕೆಗಳಿಲ್ಲದೇ ಅನ್ನವನ್ನೇ, ಫಲವನ್ನೇ ನೀಡಬಹುದ್ದಾಗಿದ್ದಿತು.  ಆದರೆ ಅವನು "ತ್ರಿಧಾಬದ್ಧಹ" ತನ್ನ ನಿಯಮಬದ್ಧ.  ಅಂತೆಯೇ "ಕೈಯಿಲ್ಲದ ಕುಂಬಾರ.  ಕೈಯೇ ಏಳುವುದಿಲ್ಲ.

ಜನರು ತಪ್ಪಾಗಿ ಅವನನ್ನು "ಕ್ರೂರ, ನಿಷ್ಕರುಣಿ, ಪಕ್ಷಪಾತಿ" ಎಂದು ಭ್ರಮಿಸಿದರು.  ಸಕಲ ಜಗತ್ತನ್ನು ನಿರ್ಮಿಸಿದ ಕುಂಬಾರನಿಗೆ ಅಸಾಧ್ಯವಾದದ್ದು ಯಾವುದು?  "ಕೈಯೇ ಇಲ್ಲದವ ಎಲ್ಲರಿಗೂ ಮೂರು ಮಡಿಕೆ ನೀಡಿದ.  ಸಾಧನದ ಅನ್ನ ಮಾಡಿಕೊಳ್ಳಿರೆಂದು ಕೊಟ್ಟನು.

ಎರಡು ಒಡಕು ಒಂದಕೆ ಬುಡವೇ ಇಲ್ಲ

ಕೈಯಿಲ್ಲದ ಕುಂಬಾರ ಮೂರು ಗಡಿಗೆ ನೀಡಿದ.

ಆದರೆ ಅದರಲ್ಲಿ ಸಾಧನ ಅನ್ನ ಮಾಡಿಕೊಳ್ಳಲು ಸಾಧ್ಯವೇ ಆಗಲಿಲ್ಲ.

ಎರಡು ಗಡಿಗೆ ಒಡೆದಿವೆ.

ಸೀಳಿ ಹೋಗಿವೆ.

ಇನ್ನೊಂದು ಗಡಿಗೆಗೆ ತಳವೇ ಇಲ್ಲ.

ಬುಡವಿಲ್ಲದ ಗಡಿಗೆ.

ಜ್ಞಾನವು ಒಡಕು ಗಡಿಗೆಯಾಗಿದೆ. ಜ್ಞಾನದಲ್ಲಿ ನಿಶ್ಚಯವಿಲ್ಲ.  ನಿರ್ಧಾರವಿಲ್ಲ.  ವಿಭಿನ್ನ ಮತಗಳು, ವಿಚಿತ್ರ ದರ್ಶನಗಳು, ವಿವಿಧ ದೇವತೆಗಳು, ವಿಕೃತ ಸಿದ್ಧಾಂತಗಳು, ಪರಸ್ಪರ ವಿರುದ್ಧವಾದ ಧರ್ಮಗಳು, ಹೀಗಾಗಿ ನಿಶ್ಚಯವೇ ಇಲ್ಲ.  ನಿರ್ಧಾರವಿಲ್ಲ.

ಪರಿಶ್ರಮವಿಲ್ಲದೇ ಜ್ಞಾನವು ಬರುವುದಿಲ್ಲ.  ಭಗವಂತನ ಇಚ್ಛೆಯಂತೆ ಪ್ರೇರಣೆಯಂತೆ ಜ್ಞಾನದಲ್ಲಿ ಪ್ರವೃತ್ತಿ.  ಆದರೆ ರಜೋಗುಣ, ತಮೋಗುಣಗಳ ಪ್ರಭಾವ ಜ್ಞಾನಕ್ಕೆ ಪ್ರತಿಬಂಧಕ.  ಅವುಗಳ ಕಾರ್ಯವೂ ಪ್ರತಿಬಂಧಕ.    ಪರಿಶ್ರಮವಿಲ್ಲದೇ ಬರಲಾರದು, ಗುರುದಯೆ, ಗುರುಸೇವೆ, ಶ್ರವಣ, ಮನನ, ಅಧ್ಯಯನ, ಬೇಕು.  ಆದರೆ ಅದು ಇಲ್ಲವೇ ಇಲ್ಲ.  ವಿಷಯ ವಾಸನೆ ತುಂಬಿಕೊಂಡು, ಅನಂತ ಜನ್ಮಗಳಿಂದ ಪಯಣ ಮಾಡಿಕೊಂಡು ಬಂದ ಜೀವನಿಗೆ ಜ್ಞಾನದಲ್ಲಿ ಅಭಿರುಚಿಯೇ ಇಲ್ಲ.  ಅಲ್ಪಸ್ವಲ್ಪ ಜ್ಞಾನ ಬಂದರೂ, ಅದನ್ನು ಹಾಳು ಮಾಡಲು, ಅಪಹರಿಸಲು ಕಾಮ, ಕ್ರೋಧ, ಲೋಭ, ಮೋಹರೆಂಬ ಆರು ಕಳ್ಳರು ಹೊಂಚ ಹಾಕಿದ್ದಾರೆ.

ಅಹಂಕಾರ ಅದನ್ನೇ ಜ್ಞಾನವನ್ನು ಹಾಲು ಮಾಡುವ.  ಜ್ಞಾನವು ಒಡೆದ ಮಡಿಕೆಯಲ್ಲಿ ಹಾಕಿದಾಗ ಅದೆಲ್ಲ ಸೋರಿಹೋಗಿದೆ.  ಜಾರಿದೆ.  ಒಳಗಡೆಗೆ ಏನೂ ಉಳಿದಿಲ್ಲ.  ಕಾಮಕ್ರೋಧಾದಿಗಳ ಆರು ತೂತುಗಳು ಈ ಒಡೆದ ಮಡಿಕೆಗೆ.  ಇಲ್ಲಿ ಜ್ಞಾನದಿಂದ ಅನ್ನ ಮಾಡಿ, ಸಾಧನ ಮಾಡಿ ಉಣ್ಣಲು ಆಗಲಿಲ್ಲ.  ಒಡೆದ ಮಡಿಕೆಯಾದುದರಿಂದ.

ಕರ್ಮವೆಂಬ ಮಡಿಕೆಯೂ ಒಡೆದಿದೆ.  ದೇಹವನ್ನು ಕೊಟ್ಟು, ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿದ ಮೇಲೆ, ಈ ಶರೀರ, ಅದರ ಅವಶ್ಯಕತೆ, ಅದರ ಹಸಿವು, ಅದರ ಪೋಷಣೆ, ಅದರ ರಕ್ಷಣೆಯಲ್ಲಿಯೇ  ಎಲ್ಲ ಕರ್ಮಗಳು, ಕ್ರಿಯೆಗಳು ಸದಾ ನಡೆಯುವದು ಅನಿವಾರ್ಯ.  "ನಹಿ ದೇಹಭ್ಯತಾಂಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ".

ದೇಹ ಧರಿಸಿದವರಿಗೆ ಅದರ ಬಗ್ಗೆ ಮಾಡಬೇಕಾದ ಕರ್ಮಗಳನ್ನು ಮಾಡಲೇಬೇಕು.  ಬಿಡಲು ಯಾರಿಂದಲೂ ಸಾಧ್ಯವಾಗಿಲ್ಲ.  ಸಂಪಾದನೆ, ಊಟ, ತಿಂಡಿ, ನಿದ್ರೆ, ಆಲಸ್ಯಗಳು ಬದುಕಿನ ಅವಿಭಾಜ್ಯಗಳು.  ಇಲ್ಲಿ ಸಾಧನ, ಧರ್ಮ, ತತ್ತ್ವನೀತಿಯು ಈ ಕರ್ಮದ ಒಡಕು ಗಡಿಗೆಯಲ್ಲಿ ಬೇಯಿಸಿಕೊಳ್ಳಲು ಸಾಧ್ಯವಿಲ್ಲ.  

ಕರ್ಮವು ಅಕರ್ಮ ವಿಕರ್ಮವಾಗಿ ಒಡೆದಿದೆ.  ಅಕರ್ಮ ವಿಕರ್ಮಗಳ ರೂಪದಲ್ಲಿ ಸೋರುತ್ತಿದೆ.  ಕರ್ಮದಿಂದ ಸಾಧನವೆಂಬ ಅನ್ನವಾಗಲೇ ಇಲ್ಲ.  ಸಕಾಮವೆಂಬ ರಂಧ್ರವಿದೆ ಈ ಕರ್ಮದ ಮಡಿಕೆಗೆ.  ಕರ್ಮಗಳೆಲ್ಲ ಬಂಧಕವಾದವು.  ಮೋಚಕವಾಗಲಿಲ್ಲ.  ಕರ್ಮದ ಮೂಲ ಗುರಿ, ನಿಷ್ಕಾಮವಾಗಿ, ಭಗವಂತನ ಪೂಜೆಯಾಗಿ, ಅವನಲ್ಲಿ ಸಮರ್ಪಿತವಾಗಬೇಕಾಗಿದ್ದಿತು.  ಕರ್ಮ ಸಮರ್ಪಣೆ ನಡೆಯಲಿಲ್ಲ.  ಸಾಧನವಾಗಲಿಲ್ಲ.  ಒಡೆದ ಮಡಿಕೆಯಲ್ಲಿ ಸೋರಿ ಹೋಯಿತು.

ಕರ್ತಾನ ಇಚ್ಛೆಯಂತೆ ಕರ್ಮದ ಸ್ವರೂಪ.  ಈತ ಪಾಠ, ಪ್ರವಚನ, ಪೂಜೆ, ಯಜ್ಞ, ತಪಸ್ಸು, ಉಪಕಾರ, ಊಟ ರೂಪವಾದ ಕರ್ಮ ಮಾಡಿದರೂ ಕೀರ್ತಿ, ಗೌರವ, ಪ್ರತಿಷ್ಠೆ, ನಾನು ಮಾಡಿದೆ ಎಂಬ ಅಹಂಕಾರದಿಂದಾಗಿ, ಇವನ್ನೇ ದೃಷ್ಟಿಯಿಟ್ಟುಕೊಂಡಿದ್ದರಿಂದ ಸಕಾಮವಾಗಿ ಒಡೆದ ಗಡಿಗೆಯಂತಾದವು ಕರ್ಮಗಳು.  ಕರ್ಮದ ಪುಣ್ಯವೇ ಉಳಿಯಲಿಲ್ಲ.  ಸೋರಿತು, ಜಾರಿತು, ಕುಂಬಾರ ಕರ್ಮದ ಮಡಿಕೆ ನೀಡಿದ.  ಅದು ಒಡೆಯಿತು.  ನಮ್ಮಿಂದಲೇ ಹಾಳಾಯಿತು.

ಮುಂದುವರೆಯುವುದು
ಮುಂದುವರೆದುದು

ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ

ಮನಸ್ಸು ಭಕ್ತಿಯ ಅಭಿರುಚಿ ಇಲ್ಲದ, ಹಸಿವೆಯೇ ಇಲ್ಲದವ.  ಈತ ನೆಂಟನು.  ಮಹಾಬಂಟನು.  ಬ್ರಹದ್ಬಲ.  ಆದರೆ ಹಸಿವೆ ಇಲ್ಲ.  ಬೇಕಾದುದನ್ನು ಮಾಡಲು ಸಮರ್ಥ.  ಅನುಭವಿಸಲೂ ಸಮರ್ಥ. ಇವನಿಗೆ ಹಸಿವೆಯಾಗಲಿ ಎಂದೇ ದೇವರುಪ ಮೂರು ಟೊಣಪೆ, ನೀಡಿದ.

ಪೆಟ್ಟುಗಳನ್ನು ಕೊಟ್ಟ.  ಮೂರು ವಿಧದ ದುಃಖಗಳನ್ನು ನೀಡಿದ.  ಅದರಿಂದಾಗಿಯಾಗಲಿ ಧರ್ಮದ, ಜ್ಞಾನದ, ಭಕ್ತಿಯ ಹಸಿವು, ಆಸೆ, ಹುಟ್ಟಲಿ ಎಂದು.  ಆದರೆ ಅವು ತಾಕಲೇ ಇಲ್ಲ.  ಜೀವರು ಜಾಗೃತರಾಗಲಿ ಎಂದೇ ಈ ಶರೀರಕ್ಕೆ ಪೆಟ್ಟುಕೊಟ್ಟ.  ಜನ್ಮವೆಂಬ ಪೆಟ್ಟು, ಮಧ್ಯದಲ್ಲಿ ದುಃಖಗಳೆಂಬ ಪೆಟ್ಟನ್ನು ನೀಡಿದ. ಭೂತಕಾಲದ ದುಃಖಗಳ ಅನುಭವ ನೆನಪನ್ನು ಮನಸ್ಸಿಗೆ ನೀಡಿದ.

ಇನ್ನಾದರೂ ಧರ್ಮಕ್ಕೆ ಬರಲಿ ಎಂದು ಭವಿಷ್ಯದ ದುಃಖದ ಕಲ್ಪನೆ, ಪರಿಚಯ ನೀಡಿದ.  ಅದರ ಭಯದಿಂದಲಾದರೂ ಬುದ್ಧಿ ಬರಲಿ ಈ ಮನಸ್ಸಿಗೆ ಎಂದು.  ವರ್ತಮಾನದಲ್ಲಿಯೂ ದುಃಖ ನೀಡಿದ, ("ವಿವಿಧ ಸಾಂಸಾರಿಕ ದುಃಖದರ್ಶನೇನ") ದುಃಖದರ್ಶನದಿಂದ ವಿರಕ್ತನಾಗಲಿ ಎಂದು.  ಮರಣದ ದುಃಖಕ್ಕಾಗಿ ಅಂಜಿ, ಸಾಧನ, ಮಾಡಿಕೊಳ್ಳಲಿ, ಹುಟ್ಟಿನ ದುಃಖ ಕಂಡು ಸಾಧನ ಮಾಡಲಿ ಎಂದು, ವರ್ತಮಾನದಲ್ಲಿ ದೈನಂದಿನವಾಗಿ ದುಃಖ ನೀಡಿದ.

ಭಕ್ತಿಯ ಹಸಿವು ಹುಟ್ಟಲೆಂದು ದೇವರು ಟೊಣಪೆ ನೀಡಿದ.

ಆಧ್ಯಾತ್ಮಿಕವಾದ ತಾಪ ನೀಡಿದ.

ಆದರೆ ಇವು ತಾಕಲೇ ಇಲ್ಲ.

ಈ ಮೂರು ಟೊಣಪೆಗಳನ್ನು ನೀಡಿದರೂ ಇವನಿಗೆ ಭಕ್ತಿಯೇ ಹುಟ್ಟಲಿಲ್ಲ.

ಪೆಟ್ಟು ತಗಲಿದಾಗ ಮಾತ್ರ ಸ್ವಲ್ಪ ಕಾಲ ಭಕ್ತಿ ಮಾಡುವ ಮತ್ತೆ ಬಿಡುವ.

"ಸಂಕಟವಾದಾಗ ವೆಂಕಟರಮಣ" ಮುಂದೆ ಇಲ್ಲ.

ಈ ಪೆಟ್ಟುಗಳಿಗೆ ಹಸಿವೆ ಆಗಲಿಲ್ಲ.  

ಪೆಟ್ಟುಗಳಿಂದ ತಾತ್ಕಾಲಿಕ ರಕ್ಷಿಸಿಕೊಂಡ, ರಕ್ಷಿಸಿಕೊಳ್ಳಲು ಉಪಾಯ ಮಾಡಿದ.

ಮತ್ತೆ ಸಂಸಾರ ಸುಖದಲ್ಲಿಯೇ ಇದ್ದ.

ಅತೀತ, ಅನಾಗತ, ಹಿಂದಿನ ಅನೇಕ ಜನ್ಮಗಳ, ಮುಂದಿನ ಜನ್ಮ ಮರಣಗಳ ದುಃಖದ ಪೆಟ್ಟು ತಾಗಲಿಲ್ಲ.  ವಿಸ್ಮರಣೆಯಿಂದ ದುಃಖಾನುಭವ ನೆನಪಿಗೆ ಬರಲಿಲ್ಲ.  ಭಕ್ತಿಗೆ ಮನಸ್ಸು ತಿರುಗಲಿಲ್ಲ.  ಇನ್ನು ತಾಕಬೇಕಾದದ್ದು ವರ್ತಮಾನವೇ ಮಾತ್ರ.  ವರ್ತಮಾನ ಜೀವನದ ದುಃಖಾನುಭವಗಳು ಸನ್ಮಾರ್ಗಕ್ಕೆ ತರಲೇ ಇಲ್ಲ.  ವೈರಾಗ್ಯ ಬರಲೇ ಇಲ್ಲ.  ಭಕ್ತಿ ಹುಟ್ಟಲೇ ಇಲ್ಲ.

ಎರಡು ತಾಕತು ಒಂದು ತಾಕಲೇ >

ಮೂರು ಟೊಣಪೆಗಳು ೧. ಭೂತದುಃಖ, 2. ಭವಿಷ್ಯದ ದುಃಖ, 3. ವರ್ತಮಾನ ದುಃಖ.  ಇವು ಹೆಚ್ಚಿನ ಭಕ್ತಿ ಜ್ಞಾನಗಳನ್ನು ಹುಟ್ಟಿಸುವುದಿಲ್ಲ.  ವರ್ತಮಾನ ದುಃಖ ತಾಕಲೇ ಇಲ್ಲ.  ಏನೂ ಪರಿಣಾಮ ಬೀರಲಿಲ್ಲ.

೧.ಆಧಿಭೌತಿಕ, ಈ ಟೊಣಪೆಯಿಂದ ಪಶು ಪ್ರಾಣಿಗಳಿಂದ ಆಪತ್ತು ವಿಪತ್ತು, ಪಂಚಮಹಾಭೂತಗಳಿಂದ ವಿಪತ್ತು.  ಪೃಥ್ವಿಯಿಂದ ಭೂಕಂಪ, ಅನೇಕ ಊರುಗಳನ್ನೇ ನುಂಗುವ ಭೂಮಿ, ಕಳ್ಳಕಾಕರು, ಪ್ರಾಣಿಗಳಿಂದ ಭಯ, ಅಪ್ ನಿಂದ ಅತಿವೃಷ್ಟಿ, ಅನಾವೃಷ್ಟಿ, ಸುನಾಮಿ ಹೀಗೆ ಇದನ್ನು ತಪ್ಪಿಸಿಕೊಳ್ಳಲು ಧರ್ಮವೆಂಬ ಮನೆಕಟ್ಟಿ ಬಾಗಿಲು ಭದ್ರ ಮಾಡಿ, ತೇಜನಿಂದ ಭಾರೀ ಬಿಸಿಲು, ತಾಪ, ವಾಯುವಿನಿಂದ ಬಿರುಗಾಳಿ, ಸುಂಟರಗಾಳಿ, ಸೈಕ್ಲೋನ್ ಇಂತಹ ತಾಪಗಳಿಂದ ತಪ್ಪಿಸಿಕೊಳ್ಳಲು ಧರ್ಮ ಒಂದೇ ಮಾರ್ಗ.  ಆದರೆ ಸಾಧನ ಮಾರ್ಗಕ್ಕೆ ಆಕಾಶದಿಂದ ಧೂಮಕೇತು, ಸಿಡಿಲು, ಮಿಂಚು, ಮಾತ್ರ ಬರಲಿಲ್ಲ.  ಆಧಿಭೌತಿಕ ತಾಪಗಳ ಆಟ ನಡೆಯದಂತೆ ಮಾಡಿಕೊಂಡ.

ಆಧಿದೈವಿಕದಿಂದ ಶ್ರೀಹರಿಯ ಪರಿವಾರ ದೇವತೆಗಳನ್ನು ಉಪಾಸಿಸದೇ ಇದ್ದುದರಿಂದ ಅನೇಕ ಕೌಟುಂಬಿಕ ತೊಂದರೆಗಳು ಬಂದವು.  ಕುಲದೇವರು, ಕುಲಾಚಾರ, ಕುಲಧರ್ಮ, ಬಲಿ, ಶ್ರಾದ್ಧಗಳು, ಮಾಡದೇ ಅನುಭವಿಸುವ ಅನೇಕ ತೊಂದರೆಗಳು.  ಗಣಪತಿ, ನಾಗಪ್ಪ, ಅನಂತಚತುರ್ದಶಿ, ಹಬ್ಬ ಹುಣ್ಣಿಮೆಗಳನ್ನು ಬಿಡುವದರಿಂದ ಆಗುವ ಪ್ರಭಾವ ಪರಿಣಾಮಗಳು, ಇವೂ ಈ ಜೀವನಿಗೆ ಟೊಣಪೆಗಳು ತಾಕಲೇ ಇಲ್ಲ.  ಪರಿಣಾಮ ಮಾಡಲೇ ಇಲ್ಲ.

ಆಧ್ಯಾತ್ಮಿಕದಿಂದ ದೈಹಿಕವಾದ ಅಪಾರದ ದುಃಖಗಳು "ಆತ್ಮಾ ಜೀವ ತಂ ಆಧಿಕರೋತಿ" ಮಾನಸಿಕ, ಭಾವನಾತ್ಮಕ ದುಃಖಗಳು, ರೋಗ, ದಾರಿದ್ರ್ಯ, ಉಪಕರೋತಿ ಇತಿ ಆಧ್ಯಾತ್ಮದಿಂದ ದೇಹ, ಕಷ್ಟ, ಶತ್ರುಪೀಡೆ, ಸಂತಾನಪೀಡೆ, ಸಂಸಾರದ ವಿವಿಧ (ಸರ್ವಮಾಧ್ಯಾತ್ಮ ನಿಷ್ಠಹಿ) ತಾಪಗಳು ಆಧಿ ವ್ಯಾಧಿಗಳು ನಾನಾ ವಿಧದ ಭಯಂಕರ ರೋಗಗಳು, ಕ್ಯಾನ್ಸರ್, ಹಾರ್ಟ್ ಮೊದಲಾದವು ಬಂದರೆ ಯಾರೂ ದೇವರನ್ನು ನಂಬುವ ಅನ್ನುವದಿಲ್ಲ.  ರಕ್ಷತೀತ್ತ್ಯೆವ ವಿಶ್ವಾಸಃ, ಇರುವುದಿಲ್ಲ.  ಭೌತಿಕ ಔಷಧ, ಡಾಕ್ಟರುಗಳಿಂದ ಈ ರೋಗ ಪರಿಹರಿಸಿಕೊಳ್ಳುವೆನೆನ್ನುವರು ಆದರೆ ದೇವರಿಂದ ಎನ್ನುವದಿಲ್ಲ.

ದೇವರು ಕೊಟ್ಟ ಈ ತಾಪಗಳು ತಾಕಲೇ ಇಲ್ಲ.  ಜೀವ ಸಾಧನ ಮಾರ್ಗಕ್ಕೆ ಬರಲೇ ಇಲ್ಲ.  ದುಃಖದಲ್ಲಿಯೇ ಇರುವನೇ ಹೊರತು, ದುಃಖಪರಿಹಾರಕ್ಕೆ ಏನೂ ಪ್ರಯತ್ನ ಮಾಡುವದಿಲ್ಲ.  ದೇವರನ್ನು ಸರ್ವಥಾ ನಂಬುವದಿಲ್ಲ.  ನಂಬುವಂತಾಗಬೇಕು ಎಂದು ಪುರಂದರದಾಸರ ಸಂದೇಶ.  ಆಶಯ (ಗರ್ಭವಾಸೇ ಮಹಾದ್ದುಃಖಂ ಅನುಭೂತಂ ತಯಾ ಪ್ರಭೋ) ಎಷ್ಟೇ ದುಃಖ ಅನುಭವಿಸಿದರೂ ಮನಸ್ಸಿಗೆ ಸಾಧನಭಕ್ತಿ ಹುಟ್ಟಲೇ ಇಲ್ಲ.

ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ

ಈಗಲಾದರೂ ತಡವಾಗಿಲ್ಲ.  ಜನ್ಮದಲ್ಲಾದರೂ, ಸಂಸಾರದ ಅನಾರತೆ, ದುಃಖವನ್ನು ಅನುಭವಕ್ಕೆ ತರಬೇಕು.  ಮನಸ್ಸು ಪರಿವರ್ತನೆ ಹೊಂದಲಿ.  (ದುಃಖಔಷಧಂ ತದಪಿ ದುಃಖಂ) ಅನುಭವಕ್ಕೆ ಅವುಗಳ ಹಿಂದೆ ಚೆನ್ನಾಗಿ ವಿಚಾರ ಮಾಡಿ ಮನಸ್ಸಿನಲ್ಲಿ ವೈರಾಗ್ಯ ಮೂಡಿಸಿ ಸಾಧನದ ದಾರಿ ತೋರಿಸಿ, ಅಲ್ಲಿ ಮುನ್ನಡೆಯುವಂತೆ ಪ್ರೇರಿಸು.  ಮುನ್ನಡೆಯಿಸಿ ಅಪರೋಕ್ಷ ಜ್ಞಾನವನ್ನು ನೀಡು, ಧರ್ಮದ ದಾರಿಯಲ್ಲಿ ನಾವು ಸಾಗುವಂತೆ ಮಾಡು ಎಂದು ದೇವರಲ್ಲಿ ಬೇಡುವರು.  ಮನಸ್ಸನ್ನು ನಿನ್ನ ಪಾದಾರವಿಂದದಲ್ಲಿ ನೆಲೆಸುವಂತೆ, ನಿನ್ನನ್ನೇ ಸ್ತುತಿಸಿ, ನಿನ್ನನ್ನು ನೋಡಿ ಆನಂದಪಡುವ ಭಾಗ್ಯ ನೀಡು.  ಮೋಕ್ಷ ಮಾರ್ಗಕ್ಕೆ ಕರೆದೊಯ್ಯು, "ದಾರಿಯ ತೋರಿಸು ಮುಕುಂದಾ" ಎನ್ನುವರು.

ಭಗವಂತನು ಆಗಾಗ ನೀಡುವ ದುಃಖಗಳು ನಮ್ಮನ್ನು ಸಾಧನ ಮಾರ್ಗಕ್ಕೆ ಒಯ್ಯಬೇಕು.  ಧರ್ಮದಲ್ಲಿರಿಸಿ, ಕರ್ಮದಲ್ಲಿ ಪ್ರೇರಿಸಿ, ವೈರಾಗ್ಯ ತರಿಸಿ, ಭಕ್ತಿ ಬೆಳೆಸಿ, ಮುಕ್ತಿಮಾರ್ಗದ ಪಥಿಕನನ್ನಾಗಿ ಮಾಡಲು ಪ್ರಾರ್ಥಿಸುವರು.

ನೀಯಬೇಕು ಪುರಂದರವಿಟ್ಠಲ ನೀನು

ವರ್ತಮಾನ ದುಃಖವನ್ನು ಮನದಟ್ಟು ಮಾಡಿಸಿ ಕಾಳಕತ್ತಲೆ ಬಂದು ಕವಿಯಲಿ (ವಿವಿಧ ಸಾಂಸಾರಿಕ ದುಃಖದರ್ಶನೇನ) ವೈರಾಗ್ಯ ಹುಟ್ಟಲಿ.  ಸಂಸಾರ, ಅಸಾರ, ಹೇಯಮಯವೆಂದು ಮನಗಾಣಿಸಿ, ಭಕ್ತಿ ಬೆಳೆದು, ಬಲಿತು ಅಪರೋಕ್ಷ ಒದಗಲೆಂದು ಪ್ರಾರ್ಥಿಸುವ.

ಇದು ಸಮಗ್ರ ಶಾಸ್ತ್ರದ ಸಾರ.

ಪುರಂದರ ವಾಣಿ.

ಇದು ಭಗವಂತನು ನುಡಿಸಿದ ಸಿದ್ಧಾಂತಸಾರ.

ಜೀವನ ಆದಿಯಿಂದ, ಕೊನೆಯವರೆಗಿನ ಭಾಷ್ಯ.

ಸಿದ್ಧಾಂತದ ವಸ್ತುನಿಷ್ಠ, ಸಮಗ್ರ ನಿರೂಪಣೆ ಬದುಕಿನ ದಾರಿಯ ನಿರ್ಧಾರದಲ್ಲಿದೆ.

ಶ್ರೀಪುರಂದರದಾಸಾರ್ಯಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರುಕ್ಮಿಣೀ ಸತ್ಯಭಾಮಾ ಸಹಿತ ಶ್ರೀ ಗೋಪಾಲಕೃಷ್ಣಹ ಪ್ರೀಯತಾಂ

ಹರಿದಾಸರ ಮುಂಡಿಗೆಗಳು
ಭಾಗ 2 ಪುಸ್ತಕದಿಂದ
ಲೇಖಕರು : ಶ್ರೀಮಳಗಿ ಜಯತೀರ್ಥಾಚಾರ್ಯ
ಪ್ರಕಾಶಕರು
ಶ್ರೀವೇದವ್ಯಾಸ ವಿದ್ಯಾಪೀಠ
ಗಾಂಧಿನಗರ, ಧಾರವಾಡ
***

೧:  ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨:  ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩:  ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪:  ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫:  ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬:  ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭:  ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ
೮:  ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯:  ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦:  ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧:  ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ ಎರಡು ಸೋಕವು ಒಂದು ತಾಕಲೇ ಇಲ್ಲ
೧೨:  ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!
******

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ತುಂಬಿತು ಒಂದು ತುಂಬಲೇ ಇಲ್ಲ

ತುಂಬಲಿಲ್ಲದ ಕೆರೆಗೆ ಬಂದವರು ಮೂವರು ಒಡ್ಡರು

ಇಬ್ಬರು ಕುಂಟರು – ಒಬ್ಬಗೆ ಕಾಲೇ ಇಲ್ಲ

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು – ಒಂದಕ್ಕೆ ಕರುವೇ ಇಲ್ಲ

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು ಒಂದು ಸಲ್ಲಲೇ ಇಲ್ಲ

ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು
ಇಬ್ಬರು ಕುರುಡರು- ಒಬ್ಬ ಗೆ ಕಣ್ಣೇ ಇಲ್ಲ

ಕಣ್ಣಿಲ್ಲದ ನೋಟಗಾರರಿಗೆ ಕೊಟ್ಟವರು ಮೂರು ಊರುಗಳ
ಎರಡು ಹಾಳು- ಒಂದಕ್ಕೆ ಒಕ್ಕಲೇ ಇಲ್ಲ

ಒಕ್ಕಲಿಲ್ಲದ ಊರಿಗೆ ಬಂದವರು ಮೂವರು ಕುಂಬಾರರು
ಇಬ್ಬರು ಚೊಂಚರು – ಒಬ್ಬಗೆ ಕೈಯೇ ಇಲ್ಲ

ಕೈತಯಿಲ್ಲದ ಕುಂಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು – ಒಂದಕೆ ಬುಡವೇ ಇಲ್ಲ

ಬುಡವಿಲ್ಲದ ಮಡಿಕಿಗೆ ಹಾಕಿದರ್ಮೊರಕ್ಕಿ ಕಾಳು
ಎರಡು ಬೇಯದು – ಒಂದು ಬೇಯಲೇ ಇಲ್ಲ

ಬೇಯಲಿಲ್ಲದ ಅಕ್ಕಿಗೆ ಬಂದವರು ಮೂವರು ನೆಂಟರು
ಇಬ್ಬರು ಉಣ್ಣರು – ಒಬ್ಬಗೆ ಹಸಿವೆ ಇಲ್ಲ

ಹಸಿವಿಲ್ಲದ ನಂಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು- ಒಂದು ಕಾಕಲೇ ಇಲ್ಲ

ತಾಕಲ್ಲಿಲದ ಟೊಣಪೆಯ ತಾಕಿಸಿ ಸದ್ಗತಿಯ
ನೀಯಬೇಕು – ಪುರಂದರ ವಿಠಲ ನೀನು.

muḷḷu koneya mēle mūru kereya kaṭṭi
eraḍu tumbitu ondu tumbalē illa

tumbalillada kerege bandavaru mūvaru oḍḍaru
ibbaru kuṇṭaru – obbage kālē illa

kālillada oḍḍage koṭṭaru mūru em’megaḷa
eraḍu baraḍu – ondakke karuvē illa

karuvillada em’mege koṭṭaru mūru honnugaḷa
eraḍu savakalu ondu sallalē illa

salladidda honnige bandaru mūvaru nōṭagāraru
ibbaru kuruḍaru- obba ge kaṇṇē illa

kaṇṇillada nōṭagārarige koṭṭavaru mūru ūrugaḷa
eraḍu hāḷu- ondakke okkalē illa

okkalillada ūrige bandavaru mūvaru kumbāraru
ibbaru con̄caru – obbage kaiyē illa

kaitayillada kumbāranu māḍida mūru maḍikegaḷa
eraḍu oḍaku – ondake buḍavē illa

buḍavillada maḍikige hākidarmorakki kāḷu
eraḍu bēyadu – ondu bēyalē illa

bēyalillada akkige bandavaru mūvaru neṇṭaru
ibbaru uṇṇaru – obbage hasive illa

hasivillada naṇṭage koṭṭaru mūru ṭoṇapegaḷa
eraḍu tākadu- ondu kākalē illa

tākallilada ṭoṇapeya tākisi sadgatiya
nīyabēku – purandara viṭhala nīnu.
****

No comments:

Post a Comment