Tuesday, 3 December 2019

ಎಂಥಾ ಸಣ್ಣವನೆ ನಿನ್ನ ಮಗನೆಂಥಾ ಸಣ್ಣವನೆ purandara vittala

ರಾಗ ನಾಟಕುರಂಜಿ. ಅಟ ತಾಳ

ಎಂಥಾ ಸಣ್ಣವನೆ , ನಿನ್ನ ಮಗ-
ನೆಂಥಾ ಸಣ್ಣವನೆ ||ಪ ||
ಎಂಥ ಸಣ್ಣವನಿವನಂಥವರಿಲ್ಲವು
ಹೊಂತಕಾರಿ ಬಲವಂತರಿಗಧಿಕನು || ಅ||

ತರಳರಂತಿಪ್ಪನು ತರುಣಿಯರೊಳಾಡುವ
ಕಿರಿಬೆರಳುಗುರಿನಲಿ ಗಿರಿಯನೆತ್ತಿದವ ||

ಕಾಳಿಂಗಸರ್ಪನ ಕಾಲಿಲಿ ತುಳಿದವ
ಪಲಾಯನವ ಮಾಡಿ ಕಾಲಯವನ ಸುಟ್ಟು||

ನಿಚ್ಚ ಪಾವನ ಮಾಡಿ ಆಶ್ಚರ್ಯ ತೋರಿದ ಯಂ-
ದಚ್ಚು ಮಾಡುವಿರೆಂದು ಮುಚ್ಚಿಕೊಂಬೆಲ್ಲ ನೀ ||

ಬಾಯಿ ತೆರೆದನಲ್ಲೆ ನೀನಂಜುವಂದದಿ
ಆ ಯಮಳಾರ್ಜುನರಾಯನ ಬಿಡಿಸಿದ ||

ದಿಟ್ಟತನದಿ ಮೊಲೆಕೊಟ್ಟವಳನು ಕೊಂದ
ಕೃಷ್ಣ ಪುರಂದರವಿಠಲನರಾಯನು ||
***

pallavi

enthA saNNavane ninna maganenthA saNNavane

anupallavi

entha saNNavanindavarillu hontakAri balavantarigadhikanu

caraNam 1

taraLarantippanu taruNiya taruNiyaroLADuva kiriberaLu gurinali giriyanettidava

caraNam 2

kALinga sarpana kAlili tuLidava palAyanava mADi kAlayavana suTTu

caraNam 3

nicca pAvana mADi Ashcarya tOrida yandaccu mADuvirendu muccikombella nI

caraNam 4

bAyi teredanalle nInanjuvandadi A yamaLArjunarAyana biDisida

caraNam 5

diTTatanadi mole koTTavaLanu konda krSNa purandara viTTalanarAyanu
***

No comments:

Post a Comment