Tuesday 5 October 2021

ಎನ್ನ ಕಡೆಹಾಯಿಸುವುದು ನಿನ್ನಭಾರ purandara vittala ENNA KADEHAAYISUVUDU NINNA BHAARA






ಎನ್ನ ಕಡೆಹಾಯಿಸುವುದು ನಿನ್ನ ಭಾರ
ನಿನ್ನ ನೆನೆಯುತಿಹುದೆ ಎನ್ನ ವ್ಯಾಪಾರ || ಪ||

ಎನ್ನ ಸತಿಸುತರಿಗೆ ನೀನೆ ಗತಿ
ನಿನ್ನನೊಪ್ಪಿಸುವುದು ಎನ್ನ ನೀತಿ ||

ಎನ್ನ ಒಡಲ ಪೊರೆವುದು ನಿನ್ನ ಧರ್ಮ
ನಿನ್ನ ಅಡಿಗೆರಗುವುದು ಎನ್ನ ಕರ್ಮ ||

ಹರಿ ನೀನಲ್ಲದೆ ಆರ ಮೊರೆಯಿಡುವೆ
ಸಿರಿ ಪುರಂದರವಿಠಲ ನಿನ್ನ ಪಾಡುವೆ ||
****

ರಾಗ ನೀಲಾಂಬರಿ. ಆದಿ ತಾಳ (raga, taala may differ in audio)
niLambari – Khanda Chapu

P: enna kaDehAyisuvudu ninna bhAra ninna neneyutihude(nenesutalihude) enna vyApArara

C1: enna sati sutarige nIne gati ninnanoppisuvudu enna nIti

2: enna oDala(jeevana) porevudu ninna dharma ninna aDigeraguvudu enna karma

3: hari nInallade Ara moreyiDuve siri purandara viTTala ninna pADuve
***

pallavi

enna kaDehAyisuvudu ninna bhAra ninna neneyutihude enne vyApArara

caraNam 1

enna sati sutarike nIne gati ninnanoppisuvudu enna nIti

caraNam 2

enna oDala porevudu ninna dharma ninna aDigeraguvudu enna karma

caraNam 3

hari nInallade Ara moreyiDuve siri purandara viTTala ninna pADuve
***

 

Meaning: It is your responsibility(bhara) to see me through(kadehAyisuvudu). Rememering (neneyuthihude) you (constantly) is my business(Vyapaara).

C1: you are responsible to my wife and children, pleasing you(oppisuvudu) is my policy(nIti)

C2: Feeding me(oDala porevudu) is your dharma, It is my job(karma) to fall at your feet

C3: Hari, if not you, to whom I can appeal, Shri purandaravithala, I sing your name.
***

ಎನ್ನ ಕಡೆಹಾಯಿಸುವುದು ನಿನ್ನಭಾರ|
ನಿನ್ನ ಸ್ಮರಣೆ ಮಾಡುವುದು ಎನ್ನ ವ್ಯಾಪಾರ ಪ

ಎನ್ನಸತಿಸುತರಿಗೆ ನೀನೆಗತಿ|
ನಿನ್ನವರು ಎಂಬುದೇ ಎನ್ನ ನೀತಿ 1

ಎನ್ನನಿತ್ಯಸಾಕುವುದು ನಿನ್ನ ಧರ್ಮ |
ನಿನ್ನ ಮರೆತು ಬದುಕುವುದು ಎನ್ನಕರ್ಮ2

ಎನ್ನ ತಪ್ಪ ಎಣಿಸುವುದು ನಿನಗೆ ಸಲ್ಲ |
ನಿನ್ನ ಮರೆತು ತಿರುಗುವುದು ಎನ್ನದಲ್ಲ 3

ಎನಗೆ ಪಡಿಯಿಕ್ಕುವುದು ನಿನ್ನಮಾನ|
ನಿನ್ನ ಮರೆತು ತಿರುಗುವುದು ಎನ್ನ ಅಪಮಾನ 4

ನೀನಲ್ಲದೆ ಇನ್ನಾರಿಗೆ ಮೊರೆ ಇಡುವೆ |
ಎನ್ನ ಪುರಂದರವಿಠಲ ನಿನಗೆ ಪೇಳುವೆ 5
******

No comments:

Post a Comment