ಯಾರೇ ಬಂದವರು ಮನೆಗೆ ಮ-
ತ್ಯಾರೇ ಬಂದವರು ||ಪ||
ನಾರಾಯಣ ಕೃಷ್ಣನಾಥನಲ್ಲದೆ ಬೇರೆ ||
ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ ||
ಕೊಂಬು ಕೊಳಲು ರಭಸಗಳಿವೆ, ಕ-
ದಂಬ ಕಸ್ತೂರಿ ಪೆಂಪೆಸೆದಿವೆ
ಪೊಂಬಟ್ಟೆ ಚಲ್ಲಣ ಚೆಲ್ಲಿದೆ ಹಾಲು
ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು ||
ಮಿಂಚು ಹುಳದಂತೆ ಹೊಳೆವುತ, ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ, ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೇ ||
***
ರಾಗ ಸೌರಾಷ್ಟ್ರ. ಅಟ ತಾಳ (raga, taala may differ in audio)
pallavi
yArE bandavaru manege matyArE bandavaru
anupallavi
nArAyaNa krSNa nAthanallade bErE
caraNam 1
vajra rEkhegaLive maneyalli kAla gejje dhvani kELi barutide
vajra mAnikyavella haridu biddive majjigeyoLage kANava beNNeya kANe
caraNam 2
kombu koLalu rabhasagaLive kadamba kastUri pembesedive
pombaTTe callaNa cellide hAlu kumbha oDedu mane tumba beLLagAyidu
caraNam 3
mincu huLadande hoLevuta tamma sancararoda gUDi salisutta
vancisi beNNeya melluta namma lancada purandara viTTalanallade bErE
***
No comments:
Post a Comment