ಪುರಂದರದಾಸರು
ರಾಗ ನಾದನಾಮಕ್ರಿಯೆ. ಆದಿ ತಾಳ
ಹೊಡೀ ನಗಾರಿ ಮೇಲೆ ಕೈಯ, ಘಡ ಘಡ
ಹೊಡೀ ನಗಾರಿ ಮೇಲೆ ಕೈಯ ||ಪ||
ಮೃಡ ವಂದ್ಯನ ಪದ ಬಿಡದೆ ಭಜಿಪರಘ
ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ||
ವೇದಗಮ್ಯ ಸಕಲಾರ್ತಿನಿವಾರಕ
ಮೋದವೀವ ಮಧುಸೂದನ ಪರನೆಂದು ||
ನಿಷ್ಠೆಯಿಂದ ಮನಮುಟ್ಟಿ ಭಜಿಪ ಜನರಿ-
ಷ್ಟವ ಕೊಡುವ ಶ್ರೀ ಕೃಷ್ಣನೆ ಪರನೆಂದು ||
ವಂದಿಪ ಜನರಘವೃಂದ ಕಳೆದು ಮುದ-
ದಿಂದ ಪೊರೆವ ಮುಕುಂದನೆ ಪರನೆಂದು ||
ವಾಸುದೇವ ತನ್ನ ದಾಸ ಜನರ ಹೃದ್-
ವಾಸನಾಗಿ ಇಹ ಶ್ರೀಶನೆ ಪರನೆಂದು ||
ಇಂದಿರೇಶ ಪರನೆಂದು ಭಜಿಸುವರ
ಬಂದು ಕಾಯ್ವ ಗೋವಿಂದನೆ ಪರನೆಂದು ||
ಗಾನಲೋಲ ತನ್ನ ಧ್ಯಾನಿಸುವರನೆಲ್ಲ
ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು ||
ಈ ಪೃಥಿವೀಯೊಳು ವ್ಯಾಪಕನಾಗಿಹ
ಶ್ರೀಪತಿ ಪುರಂದರವಿಠಲನೆ ಪರನೆಂದು ||
***
ರಾಗ ನಾದನಾಮಕ್ರಿಯೆ. ಆದಿ ತಾಳ
ಹೊಡೀ ನಗಾರಿ ಮೇಲೆ ಕೈಯ, ಘಡ ಘಡ
ಹೊಡೀ ನಗಾರಿ ಮೇಲೆ ಕೈಯ ||ಪ||
ಮೃಡ ವಂದ್ಯನ ಪದ ಬಿಡದೆ ಭಜಿಪರಘ
ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ||
ವೇದಗಮ್ಯ ಸಕಲಾರ್ತಿನಿವಾರಕ
ಮೋದವೀವ ಮಧುಸೂದನ ಪರನೆಂದು ||
ನಿಷ್ಠೆಯಿಂದ ಮನಮುಟ್ಟಿ ಭಜಿಪ ಜನರಿ-
ಷ್ಟವ ಕೊಡುವ ಶ್ರೀ ಕೃಷ್ಣನೆ ಪರನೆಂದು ||
ವಂದಿಪ ಜನರಘವೃಂದ ಕಳೆದು ಮುದ-
ದಿಂದ ಪೊರೆವ ಮುಕುಂದನೆ ಪರನೆಂದು ||
ವಾಸುದೇವ ತನ್ನ ದಾಸ ಜನರ ಹೃದ್-
ವಾಸನಾಗಿ ಇಹ ಶ್ರೀಶನೆ ಪರನೆಂದು ||
ಇಂದಿರೇಶ ಪರನೆಂದು ಭಜಿಸುವರ
ಬಂದು ಕಾಯ್ವ ಗೋವಿಂದನೆ ಪರನೆಂದು ||
ಗಾನಲೋಲ ತನ್ನ ಧ್ಯಾನಿಸುವರನೆಲ್ಲ
ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು ||
ಈ ಪೃಥಿವೀಯೊಳು ವ್ಯಾಪಕನಾಗಿಹ
ಶ್ರೀಪತಿ ಪುರಂದರವಿಠಲನೆ ಪರನೆಂದು ||
***
pallavi
hoDI nagAri mEla kaiya ghaTa ghaTa hoDI nagARi mEla kaiya
anupallavi
mrDa vandyana pada biDade bhajiparagha biDisi poreva jagadoDeyane paranendu
caraNam 1
vEdagamya sakalArtinivAraka mOdavIva madhusUdana paranendu
caraNam 2
niSTeyinda manamuTTi bhajipa janariSTava koDuva shrI krSNane paranendu
caraNam 3
vandipa janaragha vrnda kaLedu mudadinda poreva mukundane paranendu
caraNam 4
vAsudEva tanna dAsa janara hrdvAsanAgi iha shrIshane paranendu
caraNam 5
indirEsha paranendu bhajisuvara bandu kAiva gOvindane paranendu
caraNam 6
gAnalOla tanna dhyAnisuvaranella mAnadinda kAiva shrInidhi paranendu
caraNam 7
I prithvIyoLu vyApakanAgiha shrIpati purandara viTTalane paranendu
***
ಹೊಡೆಯೋ ನಗಾರಿ ಮೇಲೆ ಕೈಯ |
ಆನಂದಮದವೇರಿ ಗಡಗಡ ಪ.
ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1
ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2
ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3
ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4
ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
********
ಹೊಡೆಯೋ ನಗಾರಿ ಮೇಲೆ ಕೈಯ |
ಆನಂದಮದವೇರಿ ಗಡಗಡ ಪ.
ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1
ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2
ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3
ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4
ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
********
No comments:
Post a Comment