Friday 6 December 2019

ಕರೆದು ಭಿಕ್ಷೆಯ ನೀಡೆ ಗೋಪ್ಯಮ್ಮ ನಿಮ್ಮ ತರಳ purandara vittala

ರಾಗ ಆರಭಿ ಅಟತಾಳ

ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ
ತರಳ ಗೋಪಾಲನಿಗೆ ||ಪ||

ಅಂಗೈಯ ತಾವರೆಯು , ಹೊಳೆವ
ಮುಂಗೈಯ ಸರಪಣಿಯು
ಅಂಗಳದೊಳಗೆ ನಲಿನಲಿದಾಡುತ
ಮಂಗಳಚರಣಂಗಳ ಚೆಲುವಗೆ ||

ಅಂಬೆಗಾಲಿಡುವವಗೆ , ಮುಂಗುರಳಲಿ
ಅರಳೋಲೆ ಮಾಗಾಯಿ
ತುಂಬಿಗುರುಳಿನ ಸಂಭ್ರಮ ತರಳಗೆ
ಹಂಬಲದಿಂದಲಿ ಸತಿಯೆ ಶ್ರೀಕೃಷ್ಣಗೆ ||

ದಟ್ಟಡಿಯ ಇಡುವವಗೆ , ಮೆಲ್ಲಡಿಗಳ
ಬಿಟ್ಟುಬಿಡುವವಗೆ
ಮುಟ್ಟಬೇಡೆಂದರೆ ಮುದ್ದುಕೊಡುವೆನೆಂಬ
ದಿಟ್ಟರಿಗತಿಮುದ್ದು ದಿಟ್ಟಗೋಪಾಲಗೆ ||

ಕಿಣಿಕಿಣಿಕಿಣಿಯೆನುತ ಮಣಿ ಕಿಂ-
ಕಿಣಿಗಳು ಹೊಳೆವುತಿರೆ
ಕುಣಿಕುಣಿದು ನಿಟ್ಟಿಪ ಬಾಲಗೆ
ದಣಿಯದ ತೆರದಿ ಸತಿಯೆ ಶ್ರೀಕೃಷ್ಣಗೆ ||

ಶೇಷಗಿರಿ ಮೇಲೆ , ತಾ ಬಲು
ವಾಸವಾಗಿಹ ಕಾಣೆ
ಸಾಸಿರನಾಮದ ಪುರಂದರವಿಠಲನ
ನೀಸಲು ದೊರಿತು ಸತಿಯೆ ಶ್ರೀಕೃಷ್ಣಗೆ ||
***

pallavi

karedu bhikSEya nIDe gOpyamma nimma taraLa gOpAlanige

caraNam 1

angayya tAvareya hoLeva mungayya sarapaNiya angaLadoLage
nali nalidADuta mangaLakara caraNangaLa celuvage

caraNam 2

ambegAliDuvavage munguruLali araLOle mAgAyi tumbi guruLina
sambhrama taraLage hambaladindali satiye shrI krSNage

caraNam 3

daTTaDi iDuvavane mellaDigaLa biTTu biDuvavage muTTa bEDendare
muddu koDuvenemba diTTarigati muddu diTTa gOpAlage

caraNam 4

kiNi kiNi kiNiyenuta maNi kinkiNigaLu hoLevutire kuNi kuNidu
niTTiya bAlage daNiyada teradi satiye shrI krSNage

caraNam 5

shESagiriya mEle tA balu vAsavAgiha kANe sAaira nAmada
purandara viTTalana nIlasu doridu satiye shrI krSNage
***

No comments:

Post a Comment