Saturday, 7 December 2019

ಯಾರು ಅರಿಯರೊ ನಮ್ಮೂರು purandara vittala

ರಾಗ ಕಾಂಭೋಜ. ಆದಿ ತಾಳ

ಯಾರು ಅರಿಯರೊ ನಮ್ಮೂರು
ಹರಿದಾಸರಿಗೊಲಿದರೆ ನಮ್ಮೂರು ||

ಅಂಡದ ತುದಿಯಲಿ ನಮ್ಮೂರು, ಅದು
ಕಂಡವರಿಲ್ಲವೊ ನಮ್ಮೂರು
ದಂಡೆ ಕಾಣದು ನಮ್ಮೂರು, ನಡು
ಮಂಡೆಸ್ಥಳವೆ ನಮ್ಮೂರು ||

ಬೈಲಿಗೆ ಬೈಲೇ ನಮ್ಮೂರು, ಅದು
ಬೈಲೇ ಬ್ರಹ್ಮನೆ ನಮ್ಮೂರು
ಭವಭಯಹರನಾಳ್ವುದೆ ನಮ್ಮೂರು, ಅದು
ಭವಭಯಹರವೇ ನಮ್ಮೂರು ||

ಪರಸ್ಪರವೇ ನಮ್ಮೂರು, ಅದೇ
ಪರದೇಶಿಗಳಿರುವೋದೆ ನಮ್ಮೂರು
ಪೂರ್ಣಾನಂದವೆ ನಮ್ಮೂರು
ಪುರಂದರವಿಠಲನೆ ನಮ್ಮೂರು ||
***

pallavi

yAru ariyaro nammUru haridAsarigolidare nammUru

caraNam 1

aNDada tudiyali nammUru adu kaNDavarillavo nammUru
daNDe kANadu nammUru naDu maNDesthaLave nammUru

caraNam 2

bailige baile nammUru adu baile brahmane nammUru
bhava bhaya hara nALvude nammUru adu bhava bhaya haravE nammUru

caraNam 3

para svaraveE nammUru adE paradEshigaLiruvude nammUru
pUrNAnadave nammUru purandara viTTalane nammUru
***

No comments:

Post a Comment